ಅರಟಾಳ ;ಮನೆಯಿಂದ ಯಾರು ಹೊರಗೆ ಬರಬೇಡಿ; ವೈಧ್ಯಾಧಿಕಾರಿ ಡಾ ಪೂರ್ಣಿಮಾ ಅಂಕಲಗಿ

ಅರಟಾಳ ; ಕರೋನ ವೈರಸ್ ಭೀತಿ ಎಲ್ಲೆಡೆ ವೇಗವಾಗಿ ಹರಡುತ್ತಿದೆ. ಸಾರ್ವಜನಿಕರು ಕರೋನಾ ವೈರಸ್ ಬಗ್ಗೆ ಜಾಗೃತೆವಹಿಸಬೇಕು. ವೈರಸ್ ಹರಡುವಿಕೆ ನಿಯಂತ್ರಿಸಲು ಮನೆಯಿಂದ ಯಾರು ಹೊರಗೆ ಬರಬಾರದು ಎಂದು ಐಗಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈಧ್ಯಾಧಿಕಾರಿ ಡಾ ಪೂರ್ಣಿಮಾ ಅಂಕಲಗಿ ಹೇಳಿದರು.
ಸೋಮವಾರ ಅವರು ಗ್ರಾಮಕ್ಕೆ ಭೇಟ್ಟಿ ನೀಡಿ ಮಾತನಾಡಿ, ವಾಮ ಮಾರ್ಗದಿಂದ ಗ್ರಾಮಕ್ಕೆ ಆಗಮಿಸುವವರ ಬಗ್ಗೆ ಎಚ್ಚರಿಕೆ ಇರಲಿ. ಬೇರೆಡೆಯಿಂದ ಬಂದು ಯಾರಿಗೂ ತಿಳಿಯದಂತೆ ತೋಟದ ವಸತಿಗಳಲ್ಲಿ ನೆಲಸಿರುತ್ತಾರೆ. ಆದರೆ ಕಾರ್ಯಪಡೆಯ ಸದಸ್ಯರು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಭೇಟ್ಟಿ ನೀಡಿ ಹೋರಗಿನವರು ಬಂದದು ನಿಜವಾಗಿದರೆ ತಕ್ಷಣ ಗ್ರಾಮ ಪಂಚಾಯತ ಹಾಗೂ ಆರೋಗ್ಯ ಇಲಾಖೆಯ ಗಮನಕ್ಕೆ ತರಬೇಕು. ಗ್ರಾಮೀಣ ಭಾಗದಲ್ಲಿ ಮುಗ್ದ ಜನರು ಇರುತ್ತಾರೆ. ಅವರಿಗೆ ಗ್ರಾಮ ಪಂಚಾಯತ ಮಟ್ಟದಲ್ಲಿ ರಚನೆಗೊಂಡ ಕಾರ್ಯಪಡೆ ಎಲ್ಲ ಸದಸ್ಯರು ಕರೋನಾ ವೈರಸ್ ಬಗ್ಗೆ ತಿಳಿಹೇಳುವ ಕೆಲಸವನ್ನು ಮಾಡಬೇಕು ಎಂದರು.
ಗ್ರಾಮ ಲೇಖಾಧಿಕಾರಿ ಎಮ್. ಎಮ್. ಮಲ್ಲುಖಾನ ಮಾತನಾಡಿ, ಕೊರಾನ್ ವೈರಸ್ ಬಗ್ಗೆ ಭಯಬೇಡಾ ಎಚ್ಚರವಿರಲಿ. ಪೋಲಿಸ್ ಠಾಣೆಯಿಂದ ಅನುಮತಿ ಪಡೆದ ದಿನಸಿ ಅಂಗಡಿ ಮಾಲಿಕರು ಗ್ರಾಹಕರಿಗೆ ಅಂತರ ಕಾಯ್ದುಕೊಂಡು ದಿನಸಿ ಸಾಮಗ್ರಿಗಳನ್ನು ಪಡೆದುಕೊಳ್ಳುವಂತೆ ತಿಳಿಸಬೇಕು ಎಂದರು.
ಗ್ರಾಪಂ ಪಿಡಿಒ ಎ. ಜಿ. ಎಡಕೆ, ಕಾರ್ಯದರ್ಶಿ ಜಿತೇಂದ್ರ ಗದಾಡೆ, ಡಾ ರವಿ ಮುದಗೌಡರ, ಹಣಮಂತ ಪೂಜಾರಿ, ಮಾಳಪ್ಪ ಕಾಂಬಳೆ, ಭೀಮು ಡಂಗಿ, ಚನ್ನಬಸು ಬಿರಾದಾರ, ರಮೆಶ ನಿಂಬಳಕರ, ಮುತ್ತವ್ವ ಪೂಜಾರಿ, ಮಾಲಾ ಕಾಂಬಳೆ, ಶಾಂತಾ ಕಟ್ಟಿಮನಿ, ಎಮ್ ಪಿ. ಪಾಟೀಲ ಇದ್ದರು.
Share
WhatsApp
Follow by Email