ಬ್ರೇಕಿಂಗ್ ನ್ಯೂಸ್ ಎಪಿಎಲ್ ಪಡಿತರ ಚೀಟಿ ಕುಟುಂಬಗಳಿಗೆ 2 ತಿಂಗಳಿಗೆ ಸಾಕಾಗುವಷ್ಟು ಉಚಿತ ಅಕ್ಕಿ ಮತ್ತು ಗೋದಿ ವಿತರಣೆಗೆ ಜಿಲ್ಲಾಧಿಕಾರಿಗಳನ್ನು ಒತ್ತಾಯ; ಬಿ.ಎಮ್.ಚಿಕ್ಕನಗೌಡರ 30/03/202030/03/20201 min read admin ಬೈಲಹೊಂಗಲ : ಲಾಕ್ ಡೌನ ಆದೇಶದಿಂದ ಅಂತ್ಯೋದಯ ಹಾಗೂ ಬಿಪಿಎಲ್ ಕಾರ್ಡ ಹೊಂದಿರುವ ಕುಟುಂಬಗಳಿಗೆ 2 ತಿಂಗಳಿಗೆ ಸಾಕಾಗುವಷ್ಟು ಉಚಿತ ಅಕ್ಕಿ ಮತ್ತು ಗೋದಿ ವಿತರಣೆಗೆ ಸರಕಾರ ಮುಂದಾಗಿದ್ದು, ಎಪಿಎಲ್ ಪಡಿತರ ಚೀಟಿ ಹೊಂದಿರುವ ಕುಟುಂಬಗಳಿಗೂ ಇದನ್ನು ವಿಸ್ತರಿಸಬೇಕೆಂದು ಸಮಸ್ತ ಲಿಂಗಾಯತ ಮೀಸಲಾತಿ ಹೋರಾಟ ವೇದಿಕೆ ಮುಖ್ಯ ಸಂಘಟಿಕ ಬಿ.ಎಮ್.ಚಿಕ್ಕನಗೌಡರ ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ. ಸರಕಾರ ಜಿಲ್ಲೆಯ ಎಪಿಎಲ್ ಪಡಿತರ ಚೀಟಿ ಹೊಂದಿರುವ ಕುಟುಂಬಗಳಿಗೆ 2 ತಿಂಗಳವರೆಗೆ ಸಾಕಾಗುವಷ್ಟು ಪಡಿತರ ಆಹಾರ ಪೂರೈಸುವ ಬಗ್ಗೆ ಯಾವುದೇ ನಿರ್ದಿಷ್ಟವಾದ ಸೂಚನೆ ನೀಡಿಲ್ಲ. ಈ ಹಿಂದೆ ಪರಿಶೀಲನೆ ಮಾಡಿದಂತೆ ಅನರ್ಹ ಫಲಾನುಭವಿಗಳಿಗೆ ಬಿಪಿಎಲ್ ಮತ್ತು ಅಂತ್ಯೋಧಯ ಪಡಿತರ ಚೀಟಿಗಳು ದೊರಕಿದ್ದು ಅರ್ಹರಿಗೆ ದೊರಕದೆ ಅಪಚಾರವಾಗಿದ್ದು ಅವರಲ್ಲ ಪ್ರಸಕ್ತ ಎಪಿಎಲ್ ಪಡಿತರ ಚೀಟಿ ಪಡೆದುಕೊಂಡಿದ್ದು ಅವರಿಗೆ ಲಾಕ್ ಡೌನ ಆದೇಶದಿಂದ ಕೆಲಸಕ್ಕೂ ಹೋಗದೆ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು ಇವರಿಗೂ ತಕ್ಷಣ ಬಿಪಿಎಲ್ ಹಾಗೂ ಎಪಿಎಲ್ ಎಂದು ಬೇದಭಾವ ಮಾಡದೆ ಉಚಿತ ಆಹಾರ ಸಾಮಗ್ರಿಗಳನ್ನು ವಿತರಿಸುವ ಏರ್ಪಾಡು ಮಾಡಬೇಕೆಂದು ಜಿಲ್ಲೆಯ ಎಪಿಎಲ್ ಪಡಿತರರ ಚೀಟಿದಾರರ ವತಿಯಿಂದ ವಿನಂತಿಸಿಕೊAಡಿದ್ದಾರೆ. ಜಿಲ್ಲೆಯ ಕೇಂದ್ರ ಮಂತ್ರಿ, ಸಂಸದ, ಜಿಲ್ಲೆಯ ಸಂಪುಟ ಸಚಿವರು ನೂತನ ಉಪಸಭಾಪತಿಗಳು ಹಾಗೂ ಶಾಸಕರು, ವಿಧಾನ ಪರಿಷತ್ ಸದಸ್ಯರು ಎಪಿಎಲ್ ಪಡಿತರರಿಗೆ ಉಚಿತ ಆಹಾರ ಸಾಮಗ್ರಿಗಳನ್ನು ಅವರವರ ಮನೆಗೆ ತಲುಪಿಸುವ ಕುರಿತು ಶ್ರಮಿಸಬೇಕೆಂದು ಕೇಳಿಕೊಂಡಿದ್ದಾರೆ. ಮುಂದಾಗಿದೆ Share