
ಪಟ್ಟಣದಲ್ಲಿ ಸೋಮವಾರ ಸಂಜೆ ಸುದ್ದಿಗಾರರಿಗೆ ಲಿಖಿತ ಹೇಳಿಕೆ ಬಿಡುಗಡೆ ಮಾಡಿ ಅವರು ಮಾತನಾಡಿದರು. ಸರಕಾರ ಹಾಕಿಕೊಟ್ಟ ಎಲ್ಲ ಸೂಚನೆಗಳನ್ನು ಚಾಚೂ ತಪ್ಪದೇ ಪಾಲಿಸಬೇಕು. ಕೊರೊನಾ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣ ವೈದ್ಯಕೀಯ ಚಿಕಿತ್ಸೆ ಪಡೆಯಬೇಕು. ರೋಗದಿಂದ ನಮ್ಮನ್ನು ನಾವು ರಕ್ಷಿಸಿಕೊಂಡಿದಾದ್ದರೆ ನಮ್ಮಿಂದ ಇತರರನ್ನು ರಕ್ಷಿಸಿದಂತಾಗುತ್ತದೆ. ನಮ್ಮನ್ನು ನಾವೇ ರಕ್ಷಿಸಿಕೊಳ್ಳದಿದ್ದರೇ ನಮಗೆ ಮತ್ತು ನಮ್ಮ ಪರಿವಾರಕ್ಕೆ ನಾವೇ ಶತ್ರುಗಳಾಗುತ್ತವೆ. ಜನರು ಅನಾವಶ್ಯಕವಾಗಿ ಗುಂಪುಗುAಪಾಗಿ ಸಂಚರಿಸಬಾರದು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಕೊರೊನಾ ಸೋಂಕು ನಿಯಂತ್ರಣ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ತಾಯಂದಿರು ತಮ್ಮ ಮಕ್ಕಳನ್ನು ಹೊರಗೆ ಆಟಕ್ಕೆ ಬಿಡದೇ ಮಕ್ಕಳನ್ನು ಗ್ರಹಬಂದನದಲ್ಲಿಡಬೇಕು. ದೇಶದ ಸುರಕ್ಷತೆ ದೃಷ್ಟಿಯಿಂದ ಪ್ರಧಾನಮಂತ್ರಿ ಮೋದಿಜಿಯವರು ೨೧ ದಿನಗಳವರೆಗೆ ಲಾಕಡೌನ ಘೋಷಿಸಿದ್ದು, ನಾವೆಲ್ಲರೂ ಅವರ ನಿರ್ಣಯಗಳನ್ನು ಪಾಲಿಸೋಣ. ಈ ಮಾಹಾಮಾರಿಗೆ ಹೆದರದೆ ಎದೆಗೊಟ್ಟು ಹಗಲಿರುಳು ಸೇವೆಯನ್ನು ಸಲ್ಲಿಸುತ್ತಿರುವ ವೈದ್ಯರು, ನರ್ಸ್ಗಳು, ಪೊಲೀಸ್ ಇಲಾಖೆಯವರು, ಮಾಧ್ಯಮದವರು ಹಾಗೂ ಎಲ್ಲ ಇಲಾಖೆಯವರನ್ನು ಅಭಿನಂದಿಸೋಣ ಎಂದರು.