ಬ್ರೇಕಿಂಗ್ ನ್ಯೂಸ್ ನಗರವನ್ನೆ ಸ್ಯಾನಿಸೈಸರ್ ಮಾಡಿದ ಅಥಣಿ ಪುರಸಭೆ ಹಾಗೂ ಅಗ್ನಿಶಾಮಕ ಸಿಬ್ಬಂದಿ 30/03/202030/03/2020 admin ಅಥಣಿ: ದೇಶಾದ್ಯಾಂತ ಕರೋನಾ ವೈರಸ್ ಹರಡುತ್ತಿರುವ ಹಿನ್ನಲೆಯಲ್ಲಿ ಬೆಳಗಾವಿ ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದು, ಇಲ್ಲಿಯವರೆಗೂ ಯಾವುದೆ ಒಂದು ಕರೋನಾ ಪಾಜೀಟವ್ ರೋಗಿ ಪತ್ತೆಯಾಗಿಲ್ಲ. ಅಥಣಿ ತಾಲೂಕಿನಾಧ್ಯಾಂತ ಕಟ್ಟುನಿಟ್ಟಿನ ಲಾಕ್ ಡೌನ್ ಆದೇಶವನ್ನು ಪರಿಪಾಲನೆ ಮಾಡುತ್ತಿದ್ದಾರೆ. ಇಂದು ಅಥಣಿ ಪುರಸಭೆಯ ಅಧಿಕಾರಿಗಳು ಹಾಗೂ ಅಗ್ನಿ ಶಾಮಕ ಸಿಬ್ಬಂದಿಗಳು ಹಾಗೂ ಪೋಲಿಸ್ ಇಲಾಖೆ ನಗರದಾದ್ಯಾಂತ ಬ್ಲಿಚಿಂಗ್ ಪಾವಡರ್. ಸುಣ್ಣದ ಮಿಶ್ರಣವನ್ನು 5 ಸಾವಿರ ಲೀಟರ್ ನೀರಿನಲ್ಲಿ ಮಿಶ್ರಣ ಮಾಡಿ ಅಗ್ನಿಶಾಮಕ ವಾಹನಗಳ ಮೂಲಕ ನಗರದ ಎಲ್ಲ ಮುಖ್ಯ ಬೀದಿಗಳಲ್ಲಿ ಸಿಂಪಡನೆ ಮಾಡುತ್ತಿದ್ದಾರೆ. ನಗರದಲ್ಲಿರುವ 26 ವರ‍್ಡಗಳಲ್ಲಿನ ಎಲ್ಲ ಮುಖ್ಯ ರಸ್ತೆಗಳ ಪಕ್ಕದಲ್ಲಿರುವ ಮನೆ. ಅಂಗಡಿ ಮುಗ್ಗಟ್ಟುಗಳು ಸೇರಿ ಎಲ್ಲ ಕಡೆಗೆ ರೋಗನಿರೋಧಕ ಔಷಧ ಸಿಂಪಡನೆ ಮಾಡಲಾಗುತ್ತಿದೆ. ಅಲ್ಲದೆ ಚಿಕ್ಕ ರಸ್ತೆಗಳನ್ನು ಹೊಂದಿರುವ ಓಣಿ. ಗಲ್ಲಿಗಳಲ್ಲಿ ದ್ರಾಕ್ಷಿ ಬೆಳೆಗೆ ಔಷಧ ಸಿಂಪಡನೆ ಮಾಡುವ ಯಂತ್ರದ ಮೂಲಕ ಮಿಶ್ರಣವನ್ನು ಸಿಂಪಡನೆ ಮಾಡಲಾಗುವದು. ನಾಗರಿಕರು ಸಹಕರಿಸುವಂತೆ ಮನವಿ ಮಾಡಲಾಗಿದೆ. ಸರ‍್ವಜನಿಕರು ಯಾವುದೆ ಕಾರಣಕ್ಕೂ ಲಾಕ್ ಡೌನ್ ಉಲ್ಲಂಘನೆ ಮಾಡಿ ರಸ್ತೆಗೆ ಬರಬಾರದು ಎನ್ನುವ ಸಂದೇಶವನ್ನು ಸಹ ನೀಡಲಾಗುತ್ತಿದೆ. ಈ ವೇಳೆ ಪುರಸಭೆ ಕಿರಿಯ ಆರೋಗ್ಯ ಸಹಾಯಕ ಬಸವರಾಜ ಬೋಳಿಶೆಟ್ಟಿ,ಪುರಸಭೆ ಮುಖ್ಯಾಧಿಕಾರಿ ಮಹಂತೇಶ್ ಕವಲಾಪೂರ,ಅಗ್ನಿಶಾಮಕ ಅಧಿಕಾರಿ ಆರ್ ಕೆ ಸಂಬೋಜಿ,ಗುತ್ತಿಗೆ ಪೌರ ಕರ‍್ಮಿಕ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಕಾಂಬಳೆ,ಸಾಮಾಜಿಕ ಹೋರಾಟಗಾರ ದೀಪಕ ಶಿಂಧೆ, ಸೇರಿದಂತೆ ಅಥಣಿ ಪುರಸಭೆ ಮತ್ತು ಅಗ್ನಿಶಾಮಕ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು Share