ಬಡ ಜನರಿಗೆ ರೇಷನ್ ಕಿಟ್ ವಿತರಣೆ

ಅಥಣಿ: ಕರೋನಾ ವೈರಸ್ ಹರಡುತ್ತಿರುವ ಹಿನ್ನಲೆಯಲ್ಲಿ ಲಾಕ್ ಡೌನ್ ಮಾಡಿದ್ದರಿಂದ ಬಡ ಜನರಿಗೆ ಕೂಲಿ ಕೆಲಸ ಇಲ್ಲದೆ ತುತ್ತು ಅನ್ನಕ್ಕೂ ಪರದಾಡುವ ಬಡ ಕುಟುಂಬಳಿಗೆ ಅಥಣಿ ನಗರ ಕ್ಲಸ್ಟರ್ ಗುಂಪಿನ ಅಧ್ಯಕ್ಷ ಭೂಪಾಲ್ ಸೌವದಾಗರ ಆಹಾರದ ಕಿಟ್ಗಳನ್ನು ಪೊಲೀಸ್ ಇಲಾಖೆಯ ಅಥಣಿ ಡಿಎಸ್ಪಿ ಎಸ್ ವಿ ಗಿರೀಶ. ಸಿಪಿಐ ಶಂಕರಗೌಡ ಬಸನಗೌಡರ. ಮುಖಾಂತರ ವಿತರಣೆ ಮಾಡಿದರು. ಪ್ರತಿಯೊಬ್ಬರಿಗೂ ಮಾಸ್ಕ ಹಾಗೂ ಒಂದು ಕಿಟ್ ನಲ್ಲಿ ಎರಡು ಕೆಜಿ ಅಕ್ಕಿ, ಎರಡು ಕೆಜಿ ಬೆಳೆ, ಎರಡು ಕೆಜಿ ಅವಲಕ್ಕಿ, ಸಕ್ಕರೆ, ಚಹಾ ಪೌಡರ್, ಉಪ್ಪು ಸೇರಿದಂತೆ ಅಡುಗೆ ಮಾಡುವ ಒಂದು ವಾರದ ರೇಷನ್ ಕಿಟ್ ವಿತರಣೆ ಮಾಡಿ ಮಾನವಿತೆ ಮೆರೆದಿದ್ದಾರೆ.
ಈ ವೇಳೆ ಅಥಣಿ ಡಿವೈಎಸ್ ಪಿ ಎಸ್ ವಿ ಗಿರೀಶ್, ಸಿಪಿಐ ಶಂಕರಗೌಡ ಬಸನಗೌಡರ ಮತ್ತು ಸಮಾಜ ಸೇವಕರಾದ ಭೂಪಾಲ ಸೌದಾಗರ,ಶಿವರಾಜ ಸೌದಾಗರ,ಪರಶುರಾಮ ಸಣ್ಣಕ್ಕಿ,ಜನರ‍್ದನ ತಕತರಾವ,ಶರದ ಕದಮ,ದೀಪಕ ಶಿಂಧೆ ಸೇರಿದಂತೆ ಇತರರು ಉಪಸ್ಥಿತರಿದ್ದರು.
Share
WhatsApp
Follow by Email