ಮಹಾಮಾರಿ ಕೊರೊನಾ ವೈರಸ್ ಹಿನ್ನಲೆ 8 ನೇ ದಿನ ಲಾಕಡೌನ್ ಪೆಟ್ರೋಲ್ ಬಂದ್, ಪೊಲೀಸರಿಂದ 16 ಬೈಕ್ ವಶ, ಕಿರಾಣಿ ಅಂಗಡಿಗಳಿoದ ಹಗಲಿ ದರೋಡೆ

ಬೈಲಹೊಂಗಲ : ಮಹಾಮಾರಿ ಕೊರೊನಾ ವೈರಸ್ ತಡೆಯುವ ನಿಟ್ಟಿನಲ್ಲಿ ಸರಕಾರ ಘೊಷಿಸಿರುವ ಲಾಕ್‌ಡೌನ್ 8ನೇ ದಿನಕ್ಕೆ ಕಾಲಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ನಾಗರಿಕರು ಬೆಳಗ್ಗೆ ಕಿರಾಣಿ, ತರಕಾರಿ, ಹಾಲು ಖರೀದಿ ಮಾಡಿದರು. 10.30ರ ನಂತರ ಜನ ಸಂಚಾರ ಕಡಿಮೆಯಾಗಿ ಪಟ್ಟಣ ಸ್ತಬ್ಧವಾಗಿತ್ತು. ತಾಲೂಕಿನ ಎಲ್ಲ ಅಧಿಕಾರಿಗಳು ಉತ್ತಮ ಕೆಲಸ ಮಾಡುತ್ತಿದ್ದಾರೆ. ಪ್ರತಿಯೊಬ್ಬರು ಮಾಸ್ಕ್ ಧರಿಸುತ್ತಿರುವುದು ನಡೆದಿದೆ. ಔಷಧ ಅಂಗಡಿಗಳಲ್ಲಿ ಮಾಲಿಕರು, ಸಿಬ್ಬಂದಿ ಮಾಸ್ಕ್, ಹ್ಯಾಂಡ್‌ಗ್ಲೋಸ್ ಧರಿಸಿ ಶಿಸ್ತುಬದ್ಧವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಬೇರೆ ಜಿಲ್ಲೆ, ತಾಲೂಕುಗಳಿಂದ ಪಟ್ಟಣ ಪ್ರವೇಶಿಸದಂತೆ ಹೊಸೂರ ರಸ್ತೆ, ಮುರಗೋಡ ರಸ್ತೆ, ಆನಿಗೋಳ ರಸ್ತೆ, ಚನ್ನಮ್ಮನ ವೃತ್ತದಲ್ಲಿ ಚೆಕ್‌ಪೋಸ್ಟ್ ನಿರ್ಮಿಸಲಾಗಿದೆ. ವಿಶ್ವಾದಾದ್ಯಂತ ಹರಡಿರುವ ಕೊರೊನಾ ವೈರಸ್‌ಗೆ ಅಂಜದೆ-ಅಳುಕದೆ ಕಾರ್ಯನಿರ್ವಹಿಸುತ್ತಿರುವ ಮಾಧ್ಯಮ ಲೋಕಕ್ಕೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗುತ್ತಿದೆ. ಪತ್ರಿಕೆ ಹಾಕುವ ಯುವಕರು ಬೆಳ್ಳಂ ಬೆಳಗ್ಗೆ ಮಾಸ್ಕ್, ಮುಗಗವಸು, ಹ್ಯಾಂಡ್‌ಗ್ಲೌಸ್ ಹಾಕಿಕೊಂಡು ಮನೆ, ಮನೆಗೆ ಪತ್ರಿಕೆ ವಿತರಿಸಿ ಮನೆಗೆ ತೆರುಳಿದ್ದಾರೆ. ಕೆಲವೊಮ್ಮೆ ಪತ್ರಿಕೆ ಹಾಕುವ ಯುವಕರು ಬಾರದೆ ಹೋದರೆ ಏಜೆಂಟರೇ ಪತ್ರಿಕೆ ಓದುಗರ ಮನೆ ಬಾಗಿಲಿಗೆ ಹೋಗಿ ಪತ್ರಿಕೆ ಹಂಚಿ ವಾಪಸ್ಸಾಗುತ್ತಿದ್ದಾರೆ.
ಪೊಲೀಸರಿಂದ 16 ಬೈಕ್ ವಶ :
ಪಿಎಸ್‌ಐ ಎಂ.ಎಸ್.ಹೂಗಾರ ನೇತೃತ್ವದಲ್ಲಿ ಸಿಬ್ಬಂದಿಗಳು ಪಟ್ಟಣದಲ್ಲಿ ಅನಾವಶ್ಯಕವಾಗಿ ತಿರಾಗಾಡುತ್ತಿದ್ದ ಬೈಕ್À ಸವಾರರನ್ನು ತಡೆದು ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಏ.16 ರ ನಂತರ ಕೋರ್ಟನಲ್ಲಿ ದಂಡ ತುಂಬಿ ವಾಹಾನ ತೆಗೆದುಕೊಂಡು ಹೋಗುವಂತೆ ತಿಳಿಸಲಾಗಿದೆ. ಕೆಲ ಪಾದಾಚಾರಿಗಳಿಗೆ ಬುದ್ದಿ ಹೇಳಿ ಕಳಿಸಲಾಗಿದೆ.
ಜಮೀನಿನಲ್ಲಿ ಕೆಲಸ ಮಾಡುವವರಿಗೆ ತಿಳುವಳಿಕೆ :
ದೊಡವಾಡ ಹಾಗೂ ಉಡಕೇರಿ ಭಾಗದ ಜಮೀನಿನಲ್ಲಿ ಕೆಲಸ ನಿರ್ವಹಿಸುತ್ತಿದ್ದವರಿಗೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮಹೇಶ ಉಣ್ಣಿ ಅವರು ತಿಳುವಳಿಕೆ ನೀಡಿದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಎಲ್ಲ ಮುಂಜಾಗೃತ ಕ್ರಮ ವಹಿಸಬೇಕೆಂದು ತಿಳುವಳಿಕೆ ನೀಡಿದ್ದಾರೆ.
ಪೆಟ್ರೋಲ್ ಬಂದ್ :
ಪಟ್ಟಣದಲ್ಲಿ ಸ್ವಯಂ ಪ್ರೇರಣೆಯಿಂದ ಪೆಟ್ರೋಲ್ ಬಂಕ್ ಮಾಲಿಕರು ಜನರ ಆರೋಗ್ಯ ಹಿತ ದೃಷ್ಟಿಯಿಂದ ಬಂಕ್ ಬಂದ್ ಮಾಡಿದ್ದರು. ಇದರಿಂದ ಅನಾವಶ್ಯಕ ತಿರುಗಾಡುವ ಜನರಿಗೆ ಲಗಾಮ ಹಾಕಿದಂತಾಗಿತ್ತು. ಇಲಾಖೆಯವರು ಸೂಚಿಸಿದವರಿಗೆ ಮಾತ್ರ ಪೆಟ್ರೋಲ್, ಡಿಸೇಲ್ ವಿತರಿಸಲಾಯಿತು.
ವ್ಯಾಪಾರಸ್ಥರಿಂದ ಹಗಲಿ ದರೋಡೆ:
ಕೊರೊನಾ ವೈರಸ್ ನಿಯಂತ್ರಣ ಹಿನ್ನೆಲೆಯಲ್ಲಿ ಕರೆ ನೀಡಿದ ಲಾಕ್‌ಡೌನ್ ನಿಮಿತ್ತ ಪಟ್ಟಣ ಸೇರಿದಂತೆ ತಾಲೂಕಿನ ಕೆಲ ವ್ಯಾಪಾರಸ್ಥರು ನಿಗದಿತ ದರಕ್ಕಿಂತ ಹೆಚ್ಚು ಹಣ ಪಡೆದು ಗ್ರಾಹಕರಿಗೆ ಕಿರಾಣಿ ಸೇರಿದಂತೆ ಅಗತ್ಯ ವಸ್ತುಗಳನ್ನು ಮಾರಾಟ ಮಾಡುತ್ತಿರುವುದು ಸರಿಯಲ್ಲ. ಮನೆಗೆ ಬೆಂಕಿ ಹತ್ತಿದಾಗ ಕಟ್ಟಿಗೆ ಸಂಗ್ರಹಿಸುವ ಕೆಲಸ ಮಾಡಬಾರದು. ಬೆಂಕಿ ನಂದಿಸುವ ಕೆಲಸ ಮಾಡಬೇಕು. ಹಾಗೆ ಇಂತಹ ಕಷ್ಟದ ಸಮಯದಲ್ಲಿ ಬಡವರಿಗೆ, ಮಧ್ಯಮ ವರ್ಗದ ಜನರಿಗೆ ಸಹಾಯ ಮಾಡುವ ಗುಣ-ಸ್ವಭಾವ ಬೆಳೆಸಿಕೊಳ್ಳಬೇಕೆಂದು ವಿವಿಧ ಸಂಘಟನೆಗಳು ವಿನಂತಿ ಮಾಡಿಕೊಂಡಿದ್ದು, ಇದು ಮುಂದುವರೆದರೆ ಅಂತವರ ವಿರುದ್ಧ ದೂರು ನೀಡಲಾಗುವುದೆಂದು ಎಚ್ಚರಿಸಿವೆ. ಇದು ಸಂಕ್ರಮಣ ಕಾಲವಾಗಿದ್ದರಿಂದ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುವಂತಿಲ್ಲ. ವರ್ತಕರು ಸಹಕಾರ ನೀಡಬೇಕು. ಜನರೆಡೆಗೆ ಕಾಳಜಿ ತೋರಬೇಕು. ಕಿರಾಣಿ ಅಂಗಡಿಯಲ್ಲಿ ಬಿಲ್ಲ್ಗಳನ್ನು ನೀಡುತ್ತಿಲ್ಲ. ಬಿಲ್ಲ್ ಕೇಳಿದರೆ ಬೇಕಾದರೆ ತೆಗೆದುಕೊಳ್ಳಿ. ಇಲ್ಲದಿದ್ದರೆ ಹೋಗಿ ಎಂದು ಉಡಾಫೆ ಉತ್ತರ ನೀಡುತ್ತಿದ್ದಾರೆ. ಈ ಬಗ್ಗೆ ತಾಲೂಕಾಡಳಿತ ಕ್ರಮ ಜರುಗಿಸಿ ಬಡ ಜನರಿಗೆ ನ್ಯಾಯ ದೊರಕಿಸಿ ಕೊಡಬೇಕು.
ಬಾಕ್ಸ ಐಟಂ:
ವ್ಯಾಪಾರಸ್ಥರು ಕಿರಾಣಿ, ತರಕಾರಿ, ದಿನಸಿ ಮಾರಾಟ ಸೇರಿದಂತೆ ಯಾವುದೇ ಅಗತ್ಯ ವಸ್ತುಗಳನ್ನು ನಿಗದಿತ ದರಕ್ಕಿಂತ ಹೆಚ್ಚಿಗೆ ಹಣ ಪಡೆಯುವ ಅಂಗಡಿಗಳ ಲೈಸನ್ಸ್ ರದ್ದುಗೊಳಿಸಿ, ಪ್ರಕರಣ ದಾಖಲಿಸಲಾಗುವುದು. ಈಗಾಗಲೇ ವ್ಯಾಪಾರಸ್ಥರ ಸಭೆ ಕರೆದು ಈ ಬಗ್ಗೆ ತಿಳುವಳಿಕೆ ನೀಡಲಾಗಿದೆ. ಆದರೂ ಕೆಲ ಅಂಗಡಿಕಾರರು ಹೆಚ್ಚು ಹಣ ಪಡೆಯುತ್ತಿದ್ದಾರೆ ಎನ್ನುವ ದೂರುಗಳು ಗಮನಕ್ಕೆ ಬಂದಿವೆ. ನಿಗದಿತ ದರಕ್ಕಿಂತ ಹೆಚ್ಚು ಹಣ ಪಡೆಯುವ ವ್ಯಾಪಾರಸ್ಥರ ಕುರಿತು ಜನರು ಮಾಹಿತಿ ನೀಡಿದರೆ ತಕ್ಷಣ ಅವರ ವಿರುದ್ಧ ಎಫ್.ಐ.ಆರ್ ದಾಖಲಿಸಿ ಕ್ರಮ ಕೈಕೊಳ್ಳಲಾಗುವುದು.
ಡಾ.ದೊಡಪ್ಪ ಹೂಗಾರ ತಹಶೀಲ್ದಾರ ಬೈಲಹೊಂಗಲ
Share
WhatsApp
Follow by Email