
ಅಥಣಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕೆ.ಆರ್.ಆರ್.ಪಿ ಪೇದೆ ಸುನೀಲ ಚಂದರಗಿ(೨೬) ಎಂಬವರು ಬೈಕ ಸವಾರನನ್ನು ತಡೆಯುತ್ತಿದ್ದಂತೆ ಬೈಕ ಸವಾರ ತಪ್ಪಿಸಿಕೊಳ್ಳಲು ಪೋಲಿಸ ಪೇದೆಯ ಕಾಲಿನ ಮೇಲೆ ಬೈಕ ಹಾಯಿಸಿಕೊಂಡು ಪರಾರಿಯಾಗಿದ್ದಾನೆ. ಕಾಲಿಗೆ ತೀವ್ರ ಗಾಯವಾಗಿರುವ ಪೊಲೀಸ ಪೇದೆ ಅಥಣಿ ಸಾರ್ವಜನಿಕರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪರಾರಿಯಾದ ಬೈಕ ಸವಾರನ ವಿರುದ್ದ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಕೆ ನಡೆಸಿದ್ದಾರೆ