
ಬಳಿಕ ಪೂಜ್ಯ ಅನ್ನದಾನೇಶ್ವರರು ಮಾತನಾಡಿ ಜಗತ್ತಿನಾದ್ಯಂತ ಹಬ್ಬುತ್ತಿರುವ ಮಾರಕ ರೋಗದಿಂದ ಇಡೀ ವಿಶ್ವವವೇ ತಲ್ಲಣಗೊಂಡಿದೆ ಭಾರತ ದೇಶ ಸಾಧು ಸತ್ಪುರುಷರ ನಾಡವಾಗಿದ್ದರಿಂದ ಇಲ್ಲಿ ಕರೋನಾ ಒಂದು ಹಂತದಲ್ಲಿದೆ ಅಲ್ಲದೆ ಮುಂಜಾಗೃತವಾಗಿಯೇ ಪ್ರಧಾನಿ ನರೇಂದ್ರ ಮೋದಿಯವರು ಲಾಕ್‌ಡೌನ್ ಮಾಡಿದ್ದರಿಂದ ಭಾರಿ ಅನಾಹುತವೇ ತಪ್ಪಿದೆ.
ಜನರು ತಮ್ಮ ಸುರಕ್ಷತೆಯೇ ದೃಷ್ಠಿಯಿಂದ ಯಾರು ಕೂಡಾ ಮನೆ ಬಿಟ್ಟು ಹೊರಗಡೆ ಬರಬಾರದು ದೇಶದ ಪ್ರತಿಯೊಬ್ಬರು ಈ ಕೊರೋನಾ ಮಹಾಮಾರಿ ರೋಗವನ್ನು ದೇಶದಿಂದ ಒಡಿಸಲು ಟೊಂಕುಕಟ್ಟಿ ನಿಲ್ಲೋಣವೆಂದುಹೇಳಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಎಸ್.ಆರ್.ಮಾಂಗ, ಹಿರಿಯ ಪತ್ರಕರ್ತ ಮಲ್ಲಪ್ಪ ರಾಮದುರ್ಗ, ಮುರೆಗೆಪ್ಪ ಮಾಲಗಾರ, ಮಹಾದೇವ ಕರಡಿ, ಕರ್ನಾಟಕ ಪತ್ರಕರ್ತರ ಸಂಘದ ಅಧ್ಯಕ್ಷ ಲಖನ ಕಟ್ಟಿಕಾರ, ಸುಧೀರ ದೇಶಮುಖ, ಪಟ್ಟಣ ಪಂಚಾಯ್ತಿ ಸದಸ್ಯರಾದ ಅಪ್ಪು ಗಡ್ಡೆ, ಹಣಮಂತ ಸಾನೆ, ಭೀಮಪ್ಪ ಖಿಚಡೆ, ನಾಗರಾಜ ಮಗದುಮ್ಮ, ರಾಜಕುಮಾರ ಮಡಿವಾಳ, ಅಬ್ಬಾಸ ಲತಿಬನವರ ಸೇರಿದಂತೆ ಅನೇಕರು ಇದ್ದರು.