ಬ್ರೇಕಿಂಗ್ ನ್ಯೂಸ್ ಹಳ್ಳಿಗಳಲ್ಲಿ ರಸ್ತೆ ನಿರ್ಬಂಧನೆ ಮಾಡಿರುವುದರಿಂದ ಆಸ್ಪತ್ರೆಗೆ ತೆರಳುವ ಜನರಿಗೆ ಸಮಸ್ಯೆ :ಲಕ್ಕಣ ಸವಸುದ್ದಿ 04/04/202004/04/2020 admin ಮೂಡಲಗಿ: ಕೊರೋನಾ ಹರಡುವಿಕೆ ಭೀತಿ ಹಿನ್ನೆಲೆಯಲ್ಲಿ ಮೂಡಲಗಿ ತಾಲ್ಲೂಕಿನ ಕಮಲದಿನ್ನಿ, ಹಳ್ಳೂರ ಶಿವಾಪೂರ , ಸುಣಧೋಳಿ ಪಟಗುಂದಿ ಹೀಗೆ ವಿವಿಧ ಹಳ್ಳಿಗಳಲ್ಲಿ ರಸ್ತೆಗಳನ್ನು ಅಗೆದಿದ್ದು ಸಂಚಾರವಿಲ್ಲದಂತಾಗಿದೆ. ಇದು ಜನ ಸಂಚಾರಕ್ಕೆ ಅತೀವ ತೊಂದರೆಯನ್ನು ಉಂಟು ಮಾಡುತ್ತಿದೆ. ಈ ನಿಟ್ಟಿನಲ್ಲಿ ತಾಲ್ಲೂಕು ಆಡಳಿತ ಹಾಗೂ ತಾಲ್ಲೂಕು ಪೊಲೀಸರು ಮುಂಜಾಗ್ರತೆ ವಹಿಸುವುದು ಸೂಕ್ತ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕಾರ್ಮಿಕ ವಿಭಾಗದ ಲಕ್ಕಣ್ಣ ಸವಸುದ್ದಿ ಆಗ್ರಹಿಸಿದ್ದಾರೆ. ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಹಿರಿಯರು ಹಾಗೂ ಬಾಣಂತಿ ಗರ್ಭಿಣಿಯರು ಈ ರಸ್ತೆ ಅಗೆತದಿಂದ ತೊಂದರೆಗೆ ಸಿಲುಕಿ ಆಸ್ಪತ್ರೆಗಳಿಗೆ ತೆರಳಲಾಗದೇ ಒದ್ದಾಡುವ ಸ್ಥಿತಿ ಈಗಾಗಲೇ ನಿರ್ಮಾಣವಾಗುತ್ತಿದೆ.ಅದರಲ್ಲೂ ಸಣ್ಣಪುಟ್ಟ ಅಗೆತಗಳಿದ್ದರೆ ನಿರ್ವಹಣೆ ಮಾಡಬಹುದಿತ್ತು. ಆದರೆ ಜೆಸಿಬಿಯಿಂದ ಈ ರೀತಿಯ ರಸ್ತೆ ಅಗೆತ ಅನೇಕ ಸ್ಥಳೀಯರನ್ನು ಆಕ್ರೋಶಕ್ಕೆ ಎಡೆ ಮಾಡಿಕೊಟ್ಟಿದೆ ಈ ಬಗ್ಗೆ ಯೋಚಿಸಬೇಕು. ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕಾರ್ಮಿಕ ವಿಭಾಗದ ಲಕ್ಕಣ್ಣ ಸವಸುದ್ದಿ ಈ ಸಂಬಂಧ ಐಜಿ ಹಾಗೂ ಎಸ್ಪಿಯವರಿಗೆ ದೂರವಾಣಿ ಮೂಲಕ ಜನರು ಪಡುತ್ತಿರುವ ತೊಂದರೆಯನ್ನು ವಿವರಿಸಿದ್ದಾರೆ.ಒಂದೆರಡು ಹಳ್ಳಿಗಳಾಗಿದ್ದರೆ ಹೇಗೋ ನೀಗಿಸಬಹುದಿತ್ತು ಹೀಗೆ ಏಳು ಎಂಟು ಹಳ್ಳಿಗಳಲ್ಲಿ ಈ ರೀತಿಯ ಜೆಸಿಬಿ ರಸ್ತೆ ಅಗೆತ ಸಂಪರ್ಕವನ್ನೇ ಕಡಿದು ಹಾಕುವ ಮಾಹಿತಿಗಳು ಬಂದಿದ್ದು ಈಗ ತಾಲ್ಲೂಕು ಆಡಳಿತ ಹಾಗೂ ಜಿಲ್ಲಾ ಪೊಲೀಸ್ ಅಧಿಕಾರಿಗಳು ರೀತಿಯ ಕ್ರಮ ಕೈಗೊಳ್ಳುತ್ತಾರೆ ಕಾದು ನೋಡಬೇಕಾಗಿದೆ. Share