ಅಥಣಿ: ಕೋವಿಡ್೧೯ ಹಿನ್ನೆಲೆಯಲ್ಲಿ ದೇಶದ ಪ್ರಧಾನಿ ದೀಪ ಬೆಳಗಿಸುವ ಕರಗೆ ಅಥಣಿ ಪಟ್ಟನದಲ್ಲಿ ಬಾರಿ ಬೆಂಬಲ ವ್ಯಕ್ತವಾಗಿದೆ.
ಡಿಸಿಎಂ ಲಕ್ಷ್ಮಣ್ ಸವದಿ ಅಥಣಿಯ ಅವರ ಸ್ವಗೃಹದಲ್ಲಿ ಕುಟುಂಬ ಸಮೇತರಾಗಿ ಮನೆ ಹೊರಗೆ ಒಂಬತ್ತು ನಿಮಿಷ ದೀಪಗಳನ್ನು ಬೆಳಗಿಸಿದರು. ಇದೆ ತೆರನಾಗಿ ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಕುಟುಂಬ ಸಮೇತರಾಗಿ ದೀಪ ಬೆಳಗಿಸಿದರು .ವಿಶೇಷವಾಗಿ ಹಳ್ಳಿಗಳಲ್ಲಿ ಕೂಡ ಮಹಿಳೆಯರು ಇದಕ್ಕೆ ಬೆಂಬಲ ಸೂಚಿಸಿ ದೀಪ ಬೆಳಗಿಸುವ ಮೂಲಕ ನರೇಂದ್ರ ಮೋದಿಯವರ ಕರೆಗೆ ಓಗೊಟ್ಟು ಪ್ರದರ್ಶನ ಮಾಡಿದ್ದಾರೆ. ಯಾವುದೇ ಜಾತಿ ಧರ್ಮ ಎನ್ನದೆ ಯಲ್ಲರ ತಮ್ಮ ತಮ್ಮ ಮನೆಮುಂದೆ ಬಾಲ್ಕನಿ ಮೇಲೆ ದೀಪ ಬೆಳಗಿಸಿದ್ದಾರೆ.
ಅತಿ ಉತ್ಸುಕತೆಯಿಂದ ಮಹಿಳೆಯರು ಮಕ್ಕಳು ಸೇರಿದಂತೆ ೯ ನಿಮಿಷದವರೆಗೆ ಜ್ಯೋತಿ ಬೆಳೆಸಿದ್ದಾರೆ, ಅಥಣಿ ಪಟ್ಟಣದಲ್ಲಿ ಹಲವಾರು ಮಠಾಧೀಶರು ಇದರಲ್ಲಿ ಭಾಗಿಯಾಗಿರುವುದು ಕಂಡುಬಂತು
ರಾಯಬಾಗ : ಕೊರೋನಾ ವೈರಸ್ ಹಿನ್ನಲೆಯಲ್ಲಿ ಲಾಕ್‌ಡೌನ್‌ದಿಂದ ತೊಂದರೆಗಿಡಾದ ತಾಲೂಕಿನ ಚಿಂಚಲಿ ಪಟ್ಟಣದ ನಿರ್ಗತಿಕ ಕುಟುಂಬಳಿಗೆ ರವಿವಾರ ಹುಕ್ಕೇರಿ ಹಿರೇಮಠದ ರಾಯಬಾಗ ಶಾಖಾ ಮಠದಿಂದ ಜೀವನಾವಶ್ಯಕ ವಸ್ತುಗಳ ಕಿಟ್‌ವನ್ನು ವಿತರಿಸಲಾಯಿತು. ಸಮಾಜ ಸೇವಕ ಹಾಗೂ ಯುವಧುರೀಣ ಅರುಣ ಐಹೊಳೆ ಅವರು ಮಾತನಾಡಿ ಕೊರೋನಾ ಹಿನ್ನಲೆಯಲ್ಲಿ ಚಿಂಚಲಿ ಪಟ್ಟಣದ ನಿರ್ಗತಿಕ ಹಾಗೂ ಬಡವರು ತೊಂದರೆಯಾದದನ್ನು ಕಂಡು ಹುಕ್ಕೇರಿ ಹಿರೇಮಠದ ಪೂಜ್ಯ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಸುಮಾರು 50 ಕುಟುಂಬಳಿಗೆ ಜೀವನಾಶ್ಯಕ ವಸ್ತುಗಳ ಕೀಟ್‌ನ್ನು ನೀಡಿದ್ದಾರೆ ಅವರ ಈ ಒಂದು ಕಾರ್ಯ ಶ್ಲಾಘನಿಯ ಅವರು ನೊಂದವರ ಹಾಗೂ ನಿರ್ಗತಿಕರ ಬಗ್ಗೆ ಹಾಗೂ ಸಮಾಜದ ಬಗ್ಗೆ ಎಷ್ಟು ಕಾಳಜಿ ಹಾಗೂ ಕಳಕಳಿ ಹೊಂದಿದ್ದಾರೆoಬುದಕ್ಕೆ ಬೇರೆ ಉದಾಹರಣೆ ಬೇಕಿಲ್ಲಾ ಎಂದು ಹೇಳಿದರು. ಈ ಸಂದರ್ಭದಲ್ಲಿ ಅರುಣ ಐಹೊಳೆ, ರವಿ ರಂಗೊಳೆ, ಅಂಕುಶ ಜಾಧವ, ಸಂಜು ಮೈಶಾಳೆ, ಎಸ್.ಎಸ್.ಕಾಂಬಳೆ. ಬಿ.ಬಿ.ಪೂಜಾರ, ಸುಭಾಷ ಮಲ್ಲಪ್ಪಗೋಳ, ವಿವೇಕ ಯಮಕನಮರಡಿ, ಮಾಯಪ್ಪ ಖಿಚಡೆ, ಆನಂದ ಖಿಚಡೆ ಸೇರಿದಂತೆ ಅನೇಕರು ಇದ್ದರು
ಮುದ್ದೇಬಿಹಾಳ: ವಿಜಯಪುರ ಜಿಲ್ಲೇ ಸಿಂದಗಿ ಪಟ್ಟಣದ ಕರ್ತವ್ಯನಿರತ ಪುರಸಭೆ ಮುಖ್ಯಾಧಿಕಾರಿ ಮೇಲೆ ಸಿಂದಗಿ ಪುರಸಭೆ ಸದಸ್ಯನಿಂದ ಮಾರಾಣಾಂತಿ ಹಲ್ಯೆ ನಡೆಸಿದ್ದನ್ನು ಖಂಡಿಸಿ ಪಟ್ಟಣದ ಪುರಸಭೆ ಮುಖ್ಯಾಧಿಕಾರಿ ಗೋಪಾಲ ಎಚ್ ಕಾಸೆ ನೇತ್ರತ್ವದಲ್ಲಿ ಪೌರ ನೌಕರರು ಹಾಗೂ ಕಾರ್ಮೀಕರು ರವಿವಾರ ಹುಡ್ಕೋ ಬಡಾವಣೆಯಲ್ಲಿರುವ ಮಿನಿ ವಿಧಾನ ಸೌಧಕ್ಕೆ ತೆರಳಿ ತಹಶಿಲ್ದಾರ ಜಿ ಎಸ್ ಮಳಗಿಯವರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಸಧ್ಯ ದೇಶದೆಲ್ಲಡೆ ಕೋರೋನಾ ವೈರಾಣು ನಿಯಂತ್ರಣಕ್ಕಾಗಿ ರಾಜ್ಯ ಸರಕಾರ ಮುನ್ನೇಚ್ಚರಿಕೆ ಕ್ರಮವಾಗಿ ಇಡೀ ದೇಶದ್ಯಾಂತ ಲಾಕ್ ಡೌನ ಆದೇಶ ಹೇರಿದೆ. ಈ ಹಿನ್ನೇಲೆ ಪ್ರಸ್ತುತ ರಾಜ್ಯ ಸರಕಾರ ಬಡವರಿಗೆ ಮತ್ತು ಸಾಮಾನ್ಯ ವರ್ಗದವರಿಗೇ ನಿತ್ಯ ಅಗತ್ಯ ಜೀವನಾಂಶಕ ವಸ್ತುಗಳ ವಿತರಣೆ ಮತ್ತು ಖರಿದಸಲು ಅವಕಾಶ ನೀಡಿದೇ ಯಾದರೂ ಲಾಕ್ ಡೌನ ಅವಧಿ ಸಂಪೂರ್ಣ ಮುಗಿಯುವವರೆಗೂ ಬಡ ಜನರಿಗೆ ಸರಕಾರ ಉಚಿತ ಹಾಲು ವಿತರಣೆ ಮಾಡುತ್ತಿದೆ. ಈ ಸಂದರ್ಭದಲ್ಲಿ ವಿಜಯಪುರ ಜಿಲ್ಲೇಯ ಸಿಂದಗಿ ತಾಲೂಕಿನ ಪಟ್ಟಣದ ಪುರಸಭೆ ಮುಖ್ಯಾಧಿಕಾರಿಗಳು ಬಡವರಿಗೆ ಹಾಲು ಹಂಚಿಕೆ ವೇಳೆ ಗಲಾಟೆ ನಡೆಸಿದ್ದು ಮಾತ್ರವಲ್ಲದೇ ಪುರಸಭೆ ಮುಖ್ಯಾಧಿಕಾರಿ ಅವರ ಮೇಲೆ ಮಾರಣಾಂತಿಕ ಹಲ್ಯೆ ನಡೆಸಿದ್ದು ಪೌರ ನೌಕರರಿಗೆ ಯಾವೂದೇ ಭದ್ರತೆ ಇಲ್ಲದೇ ಯಾವೂದೇ ಪುರಸಭೆ ಅಧಿಕಾರಿಗಳ ಮೇಲೆ ಭಯವಿಲ್ಲದೇ ಮೇಲೇಧಿಕಾರಿಗಳು ಎನ್ನುವುದನ್ನು ಗಮನಿಸದೇ ಎಳೆದಾಡಿ ಮಾರಣಾಂತಿಕ ಹಲ್ಯೆ ನಡೆಸಿದ್ದು ಮಹಾ ಅಪರಾದ ವಾಗಿದೆ. ಪುರಸಭೆ ನೌಕರರ ಮೇಲೆ ಕೂಲಿ ಕಾರ್ಮೀಕರ ಮೇಲೇ ಈ ರೀತಿಯ ಧೌರ್ಜನ್ಯ ನಡೆಯುತ್ತಿರುವುದು ಹೊಸದೇನೆಲ್ಲ ಪ್ರತಿ ನಿತ್ಯ ಕಚೇರಿ ನಿಮಿತ್ಯ ಕರ್ತವ್ಯ ನಿರ್ವಹಿಸುತ್ತಿರುವ ವೇಳೆ ಸಾಕಷ್ಟು ಜನ ಸದಸ್ಯರಿಗೆ ಯಾವ ಗೌರವ ನೀಡದೇ ಅಪಮಾನಗೊಳಿಸುತ್ತಲೇ ಇರುವ ಘಟನೆಗಳಿಗೇನು ಕಡಿಮೆ ಇಲ್ಲ. ಆದೃ ಸದ್ಯ ಇಂತಹ ಸಂದರ್ಭದಲ್ಲಿ ಮಾರಣಾಂತಿ ಹಲ್ಯೆ ನಡೆಸುತ್ತಿರುವುದು ಯಾವ ನ್ಯಾಯ ಪಟ್ಟಣದ ಗಲ್ಲಿ ಗಲ್ಲಿಗಳಲ್ಲಿರುವ ಕೊಳಚೆಯನ್ನು ಸ್ವಚ್ಚಗೊಳಿಸುವುದರಿಂದ ಹಿಡಿದು ಆಡಳಿತಾತ್ಮಕವಾಗಿ ಸಾಮಾಜಿಕ ಸೇವೆ ಮಾಡುತ್ತಲೇ ಬಂದಿದ್ದೇವೆ. ಆದರೇ ಸಧ್ಯ ಕಚೇರಿಗಳಲ್ಲಿ ಸಾರ್ವಜನಿಕರ ಸೇವೆ ಮಾಡುವಲ್ಲಿ ಕರ್ತವ್ಯ ನಿರ್ವಹಿಸುವಲ್ಲಿ ಭಯದ ವಾತಾವರಣ ನಿರ್ಮಾಣಗೊಂಡಿದೆ ಈ ರೀತಿ ಪೌರ ನೌಕರರರ ಮೇಲೆ ಹಲ್ಯೆ ನಡೆಸಿದ ಸಾಕಷ್ಟು ಘಟನೆಗಳು ನಡೆದುಹೋಗಿವೆ ಆದರೂ ಸಹಿತ ನಮ್ಮ ಪೌರ ನೌಕರರರ ಹಾಗೂ ಕಾರ್ಮೀಕರ ಹಿತರಕ್ಷಣೆಗೆ ಮಾತ್ರ ಸರಕಾರ ಹಿಂದೇಟು ಹಾಕುತ್ತಿದೆ. ಸಮ್ಮ ಕುಟುಂಭ ಅಮ್ಮ ಸಂಸಾರವನ್ನು ಬದಿಗೊತ್ತಿ ಸಾರ್ವಜನಿಕ ಸೇವೆ ಮಾಡುತ್ತಲೇ ಇದ್ದೇವೆ ಕಾರಣ ನಮಗೂ ಸರಕಾರ ಸೂಕ್ತ ರಕ್ಷಣೆ ಒದಗಿಸಬೇಕು ಇಲ್ಲದಿದ್ದರೇ ಪೌರ ನೌಕರರು ಯಾವೂದೇ ಕಾರಣಕ್ಕೂ ಕಚೇರಿಯಲ್ಲಿ ಉತ್ತಮ ಕರ್ತವ್ಯ ನಿರ್ವಹಿಸುವಲ್ಲಿ ತೊಂದರೆಯಾಗಬಹುದಾಗಿದೆ. ಈ ಕೂಡಲೇ ಜಿಲ್ಲಾಧಿಕಾರಿಗಳು ಈಗಾಗಲೇ ಸಿಂದಗಿ ಪುರಸಭಾ ಮುಖ್ಯಾಧಿಕಾರಿ ಮೇಲೆ ಮಾರಣಾಂತಿಕ ಹಲ್ಯೆ ನಡೆಸಿ ತಲೆ ಮರೆಸಿಕೊಂಡಿರುವ ಪುರಸಭೆ ಸದಸ್ಯನನ್ನು ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ
ಮುದ್ದೇಬಿಹಾಳ: ಕೊರೊನಾ ಹಿನ್ನೇಲೆಯಲ್ಲಿ ಇಡೀ ದೇಶಾದ್ಯಂತ ಲಾಕ್ ಡೌನ ಆದೇಶವಿದ್ದು ಈ ವೇಳೆ ಕಿರಾಣಿ ವ್ಯಾಪಾರಸ್ತರು ಜನಸಾಮಾನ್ಯರ ಅಗತ್ಯ ಜೀವನಾಂಶಕ ವಸ್ತುಗಳ ನಿಗದಿತ ದರವನ್ನು ಹೊರತು ಪಡಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದು ಕಂಡಬoದಲ್ಲಿ ಅಂತಹ ಮೇಲೆ ನಿರ್ಧಾಕ್ಷೀಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಒದಗಿಸಲಾಗುವುದು ಎಂದು ಎಪಿಎಂಸಿ ಅಧ್ಯಕ್ಷ ಗುರು ತಾರನಾಳ ತಾಕಿತು ಮಾಡಿದರು. ಪಟ್ಟಣದ ಎಪಿಎಂಸಿ ಕಚೇರಿಯಲ್ಲಿ ಶನಿವಾರ ಸಂಜೆ ನಡೆದ ಪಟ್ಟಣದ ಬಹುತೇಕ ಕಿರಾಣಿ ವರ್ತಕರ ಸಭೆಯಲ್ಲಿ ಅವರು ಮಾತನಾಡಿದರು. ಈಗಾಗಲೇ ದೇಶದೆಲ್ಲೆಡೆ ಕೊರೊನಾ ವೈರಾಣು ಸೊಂಕಿನಿoದ ಬಡವರು ಮದ್ಯಮ ವರ್ಗದವರು ಸಾಕಷ್ಟು ಜನರು ಬಲಿಯಾಗುತ್ತಿದ್ದಾರೆ. ಈ ಹಿನ್ನೇಲೆಯಲ್ಲಿ ಈ ವೈರಸ್ ನಿಯಂತ್ರಣಕ್ಕಾಗಿ ಸರಕಾರ ಲಾಕ್ ಡೌನ ಮಾಡುವ ಮೂಲಕ ವ್ಯಾಪಕ ಕಟ್ಟೇಚ್ಚರ ವಹಿಸುತ್ತಿದೆ ಜೊತೆಗೆ ಜನರಿಗೆ ಅಗತ್ಯ ಜೀವನಾಂಶಕ ವಸ್ತುಗಳು ದೊರಕುವಂತೆ ಸಧ್ಯ ಕಿರಾಣಿ ಅಂಗಡಿಗಳನ್ನು ತೆರದು ವ್ಯಾಪಾರ ಮಾಡುವ ಮೂಲಕ ಬಡವರ ರಕ್ಷಣೆ ಮಾಡುವ ಉದ್ದೇಶ ಇದಾಗಿದೆ. ಆದರೇ ಇದನ್ನೇ ಬಂಡವಾಳವನ್ನಾಗಿ ಮಾಡಿಕೊಂಡ ಕೆಲ ಕಿರಾಣಿ ವರ್ತಕರು ಈ ಮೊದಲಿನ ನಿಗದಿತ ಬೆಲೆಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪಗಳು ಸಾಕ್ಷೀ ಸಮೇತ ನೀಡಿದ್ದಾರೆ. ಕಾರಣ ಕಿರಾಣಿ ವ್ಯಾಪಾರಸ್ಥರು ಈ ವೇಳೆ ಮಾನವಿಯ ಮೌಲ್ಯಗಳನ್ನು ಎತ್ತಿಹಿಡಿಯ ಬೇಕು ವಿನಃ ಸಿಕ್ಕಿದ್ದೇ ಚಾನ್ಸು ಎಂದು ತಿಳಿದು ನಿತ್ಯ ಅಗತ್ಯವಿರುವ ಜೀವನಾಂಶಕ ವಸ್ತುಗಳ ಬೆಲೆಯನ್ನು ಒಂದಕ್ಕಿoತ ಮೂರು ಪಟ್ಟು ಬೆಲೆಗೆ ಮಾರಾಟ ಮಾಡುವುದು ಕಾನೂನು ಬಾಹಿರವಾಗಿದ್ದು ಒಂದು ವೇಳೆ ಕಿರಾಣಿ ವರ್ತಕರು ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದು ಕಂಡುಬoದಲ್ಲಿ ತಕ್ಷಣ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ತಿಳಿಸಬೇಕಾಗುತ್ತದೆ ಎಂದರು.ಈ ವೇಳೆ ಎಪಿಎಂಸಿ ಕಾರ್ಯದರ್ಶಿ ಎಸ್ ಎಚ್ ಅವಟಿ, ರವಿ ನಾಯಕ, ಕಿರಾಣಿ ವರ್ತಕರಾದ ಅಶೋಕ ಚಟ್ಟೇರ, ವಿ ಕೆ ದೇಶಪಾಂಡೆ, ಅಪ್ಪ ದೇಗಿನಾಳ, ಜಗದೀಶ ಕಂಠಿ, ಬಿ ಜೆ ಬಿಂಜಲಭಾವಿ ಸೇರಿದಂತೆ ಮತ್ತಿತರರು ಇದ್ದರು
ಅಥಣಿ : ಕೊರೊನಾ ಲಾಕ್ ಡೌನ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆ ಸಾಕಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಹಲವೆಡೆ ಮಹಾರಾಷ್ಟ್ರ ರಾಜ್ಯದ ಸರಾಯಿ ಅಕ್ರಮ ಸಾಗಾಟ ಮತ್ತು ಮಾರಾಟದ ಆರೋಪಗಳು ಕೇಳಿ ಬಂದಿದ್ದವು. ಸರಾಯಿ ನಿತ್ಯದ ದರಕ್ಕಿಂತ ಎರಡು ಮೂರುಪಟ್ಟು ಹೆಚ್ಚಿನ ದರದಲ್ಲಿ ಬ್ಲಾಕ್ ನಲ್ಲಿ ಮಾರಾಟವಾಗುತ್ತಿದ್ದು ಸದ್ಯ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಓರ್ವ ನನ್ನು ಮಟ್ಟ ಹಾಕುವಲ್ಲಿ ಅಥಣಿ ಅಬಕಾರಿ ಇಲಾಖೆಯ ಅಧಿಕಾರಿಗಳು ಯಶಸ್ವಿ ಆಗಿದ್ದಾರೆ. ಮಹಾರಾಷ್ಟ್ರದ ದೇಶಿ ಸರಾಯಿ ಸಂತ್ರಾ ಸಾಗಾಟ ಮಾಡುವಾಗ ಕಾಗವಾಡ ತಾಲೂಕಿನ ಅನಂತಪುರ ಆಜೂರ ರಸ್ತೆಯಲ್ಲಿ ಅಬಕಾರಿ ಪೋಲಿಸರು ಖಚಿತ ಮಾಹಿತಿ ಮೆರೆಗೆ ದಾಳಿ ನಡೆಸಿ ಬಸಪ್ಪ ಪೀರಪ್ಪ ನಾಯಕ ಎಂಬುವನನ್ನು ಬೈಕ್ ಮತ್ತು ಸಂತ್ರಾ ಸಮೇತ ವಶಕ್ಕೆ ಪಡೆದಿದ್ದಾರೆ. ಒಟ್ಟು 17.28 ಲೀಟರ್ ಮಹಾರಾಷ್ಟ್ರ ಮದ್ಯ ಇದಾಗಿದ್ದು 52,700 ರೂಪಾಯಿ ಮೌಲ್ಯದ ಮದ್ಯ ವಶಪಡಿಸಿಕೊಂಡು ದೂರು ದಾಖಲಿಸಿಕೊಂಡಿದ್ದಾರೆ. ಅಬಕಾರಿ ಉಪನಿರೀಕ್ಷಕರು ಚಿಕ್ಕೋಡಿ ಉಪವಿಭಾಗದ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಅಬಕಾರಿ ಉಪ ನಿರೀಕ್ಷಕರಾದ ಮಹೇಶ ಧೂಳಪ್ಪನ್ನವರ,ಬಸವರಾಜ ಮುಡಸಿ,ಸಂಜಯಕುಮಾರ ಅಸ್ಕಿ, ಮತ್ತು ಸಿಬ್ಬಂದಿಗಳಾದ ಮೋಹನ ಕಾಂಬ್ಳೆ,ಶಾಮ ತಳವಾರ,ರಂಜಾನ್ ದಿಗ್ಗೇವಾಡಿ ,ಬಾಹುಬಲಿ ಸವದಿ,ಮತ್ತು ಶ್ರೀಕಾಂತ ಬಂಡಗಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಚಿಕ್ಕೋಡಿ : ಪ್ರಸ್ತುತ ಕೊವಿಡ್-೧೯ ಕರೋನಾ ವೈರಸ್ ಎಂಬುವ ಮಾನವನ ಪ್ರಾಣಕ್ಕೆ ಮಾರಕವಾದ ಸಾಂಕ್ರಾಮಿಕ ರೋಗ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ನಿಷೇದಾಜ್ಞೆ ಜಾರಿಯಲ್ಲಿದ್ದರು ನಿಷೇಧಾಜ್ಞೆ ಉಲ್ಲಂಘಿಸಿ ಬರ್ತಡೆ ಪಾರ್ಟಿ ಮಾಡುತ್ತಿದ್ದ 17 ಜನರ ವಿರುದ್ದ ಪ್ರಕರಣ ತಾಲುಕಿನ ಮಾಂಜರಿ ಗ್ರಾಮದ ರಸ್ತೆ ಪಕ್ಕದಲ್ಲಿ ಕಾನೂನು ಉಲ್ಲಂಘಿಸಿ ಬರ್ತಡೆ ಆಚರಣೆ ಕಳೆದ ತಡ ರಾತ್ರಿ ನಡೆಯುತ್ತಿದ್ದ ಬರ್ತಡೆ ಪಾರ್ಟಿ ಮಾಂಜರಿ ಗ್ರಾಮದ ಆದಂ ಬಾಸು ಪಿಂಜಾರ ಈತನ ಬರ್ತಡೆ ಆಚರಿಸುತ್ತಿದ್ದ 17 ಜನರ ಗುಂಪು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಮಾಜರಿ ಗ್ರಾಮದಲ್ಲಿ 6 ಬೈಕ್ ಹಾಗೂ 17 ಜನರ ವಿರುದ್ದ ಕಲಂ : ೧೪೪ ಸಿಆರ್ ಪಿಸಿ ಅಡಿಯಲ್ಲಿ ಅಂಕಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ದೀಪ ಬೆಳಗಿಸಿ ಪ್ರಧಾನಿ ಮೋದಿ ಅವರ ಕೊರೋನಾ ವಿರುದ್ದದ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು. ಖಾಸಗಿ ಹೋಟೆಲ್ ನಲ್ಲಿ ಮೇಣದ ಬತ್ತಿ ಹಚ್ಚುವ ಮೂಲಕ ಕೋರೊನಾ ವಿರುದ್ದ ಹೋರಾಟಕ್ಕೆ ಬೆಂಬಲ ಸೂಚಿಸಿ ನಾಳಿನ ಭರವಸೆಯ ಬೆಳಕಿಗಾಗಿ ಇಂದು ದೀಪ ಹಚ್ಚಬೇಕು ಎಂದು ತಿಳಿಸಿದ್ದಾರೆ. ಭಾರತದ ನಿವಾಸಿಗಳು ಪ್ರಧಾನಿಯವರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ತಮ್ಮ ಮನೆಯ ಮುಂಭಾಗದ ಅಂಗಳದಲ್ಲಿ ಸ್ವಯಂ ಪ್ರೇರಣೆಯಿಂದ ಎಲ್ಲಾ ವಿದ್ಯುತ್ ದೀಪಗಳನ್ನು ಆರಿಸಿ, ಮೇಣದ ಬತ್ತಿಯನ್ನು ಹಚ್ಚಿ ಕೊರೊನಾ ತಡೆಗಟ್ಟುವಲ್ಲಿ ಸರಕಾರ ತೆಗೆದುಕೊಳ್ಳುತ್ತಿರುವ ಕ್ರಮಗಳನ್ನು ಬೆಂಬಲಿಸಿದರಲ್ಲದೇ ಕೊರೊನಾ ಸೊಂಕಿತರ ಆರೈಕೆಗಾಗಿ ಹಗಲಿರುಳು ಶ್ರಮಿಸುತ್ತಿರುವ ವೈದ್ಯಕೀಯ ಸಿಬ್ಬಂದಿ, ಪೌರ ಕಾರ್ಮಿಕರು, ಪೋಲೀಸ್ ಸಿಬ್ಬಂದಿಗಳ ಶ್ರಮವನ್ನು ಸ್ಮರಿಸಿದರು. ಕರೋನ ಅಂಧಕಾರ ತೊಲಗಿಸಲು ದೀಪಾವಳಿಯಂತೆ ಬೆಳಗಿತು ಭಾರತ ಅಭೂತಪೂರ್ವವಾಗಿ ಸ್ಪಂದಿಸಿದ ಭಾರತಾಂಬೆಯ ಮಕ್ಕಳು ಹಿಂದೊಂದು ನಡೆಯದ ಕ್ಷಣಕ್ಕೆ ಸಾಕ್ಷಿಯಾಯ್ತು ಭರತ ಭೂಮಿ ಕರೋನ ಅಂಧಕಾರ ಹೋಗಲಾಡಿಸಲು ಪ್ರಧಾನಿ ನರೇಂದ್ರ ಮೋದಿಯವರು ನೀಡಿದ ಕರೆಗೆ ಇಡೀ ಭಾರತ ಸಾತ್ ನೀಡಿತು. ಭಾನುವಾರ ರಾತ್ರಿ 9 ಗಂಟೆಗೆ 9 ನಿಮಿಷಗಳ ಕಾಲ ಇಡೀ ದೇಶ ದೀಪಾವಳಿಯಂತೆ ಬೆಳಗಿತು. ಇಡೀ ದೇಶದ ಜನ ಪಕ್ಷ-ಭಾಷೆ-ಧರ್ಮ ಬದಿಗಿಟ್ಟು ದೀಪ ಬೆಳಗಿಸಿ ಭಾರತವನ್ನು ಬೆಳಕಾಗಿಸಿದರು. ಒಟ್ಟಾರೆ, ಭಾರತೀಯ ಮನ-ಮನಸ್ಸುಗಳು ಕರೋನ ತೊಲಗಿಸಲು ಒಂದಾದ ಅಭೂತಪೂರ್ವ ಸನ್ನಿವೇಶಕ್ಕೆ ಭಾನುವಾರ ರಾತ್ರಿ ಸಾಕ್ಷಿಯಾದದ್ದು ವಿಶೇಷವಾಗಿತ್ತು
ಮಳವಳ್ಳಿ : ಇಂದಿನಿಂದ ಅಂಗಡಿ, ಬೇಕರಿ, ಚಿಕನ್ , ಮಟನ್, ಮೀನು ಮಾರಾಟ ಬಂದ್ ಮಳವಳ್ಳಿ ತಾಲ್ಲೂಕು ದಂಡಾಧಿಕಾರಿ ಚಂದ್ರಮೌಳಿ ಆದೇಶ ಮಳವಳ್ಳಿ ತಾಲ್ಲೂಕಿನಲ್ಲಿ ವಾಸವಿದ್ದ ಕೆಲವು ವ್ಯಕ್ತಿಗಳು ಪ್ರಸುತ್ತ ಬೇರೆಗೆ ಹೋಗಿದ್ದು ಅವರಿಗೆ ಕೋರಾನ್ ವೈರಸ್ ಇರುವ ಬಗ್ಗೆ ಸಂಶಯ ಇರುತ್ತದೆ ಸೋಕಿನ ಸಂಪರ್ಕವಿರುವ ವ್ಯಕ್ತಿಗಳ ಮಳವಳ್ಳಿ ತಾಲ್ಲೂಕಿನಲ್ಲಿ ಓಡಾಡುತ್ತಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಇಂದಿನಿಂದ ಮುಂದಿನ ಆದೇಶವರೆಗೂ ಲಾಕ್ ಡೋನ್ ಮಾಡಲಾಗಿದೆ ಎಂದು ಆದೇಶ ಹೊರಡಿಸಿದ್ದಾರೆ ವರದಿ :ಕೃಪಾಸಾಗರ್ ಗೌಡ
ಬೆಂಗಳೂರು: ಕೊರೊನಾ ವೈರಸ್ಗೆ ಸಂಬಂಧಿಸಿದಂತೆ ರಾಜ್ಯದಲ್ಲಿನ ಇಂದಿನ ಪರಿಸ್ಥಿತಿಯ ಬಗ್ಗೆ ಆರೋಗ್ಯ ಸಚಿವಾಲಯ ಬುಲೆಟಿನ್ ರಿಲೀಸ್ ಮಾಡಿದೆ. ಹೊಸದಾಗಿ 7 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಸಂಜೆ 5 ಗಂಟೆಯ ವೇಳೆಗೆ ರಾಜ್ಯದಲ್ಲಿ ಒಟ್ಟು 151 ಕೇಸ್ಗಳು ಧೃಡಪಟ್ಟಿರೋದಾಗಿ ತಿಳಿಸಿದೆ. ಒಟ್ಟು ನಾಲ್ವರು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದು, 12 ಮಂದಿ ಸೋಂಕಿನಿಂದ ಗುಣಮುಖರಾದವರನ್ನ ಡಿಸ್ಚಾರ್ಜ್ ಮಾಡಲಾಗಿದೆ ಅಂತ ಮಾಹಿತಿ ನೀಡಿದೆ. 135 ಆಕ್ಟೀವ್ ಪ್ರಕರಣಗಳಲ್ಲಿ ಗರ್ಭಿಣಿ ಮಹಿಳೆ ಸೇರಿದಂತೆ ಒಟ್ಟು 132 ಜನರ ಆರೋಗ್ಯ ಸ್ಥಿರವಾಗಿದ್ದು, ಆಸ್ಪತ್ರೆಯಲ್ಲಿ ಐಸೋಲೇಶನ್ನಲ್ಲಿಟ್ಟು ಚಿಕಿತ್ಸೆ ನೀಡಲಾಗಿದೆ. ಇನ್ನುಳಿದ ಮೂವರನ್ನು ಐಸಿಯುನಲ್ಲಿಟ್ಟು ಚಿಕಿತ್ಸೆ ನೀಡಲಾಗ್ತಿದೆ. ಪೇಶೆಂಟ್ ನಂ.43, ಪೇಶೆಂಟ್ ನಂ.101 ಹಾಗೂ ಪೇಶೆಂಟ್ ನಂ.102ರನ್ನು ಐಸಿಯುನ ವೆಂಟಿಲೇಟರ್ನಲ್ಲಿಡಲಾಗಿದೆ. ಹೊಸದಾಗಿ ಪತ್ತೆಯಾದವರಲ್ಲಿ ನಾಲ್ವರು ಬೆಳಗಾವಿಯ ರಾಯಬಾಗ್ ಮೂಲದವರಾಗಿದ್ದಾರೆ. ಇವರಲ್ಲಿ ಮೂವರು ಮಹಿಳೆಯರು ಹಾಗೂ ಓರ್ವ ಪುರುಷನಿಗೆ ಸೋಂಕು ಧೃಡಪಟ್ಟಿದೆ. ಇನ್ನು, ದುಬೈನಿಂದ ಆಗಮಿಸಿದ್ದ ಬೆಂಗಳೂರಿನ ದಂಪತಿಗೆ ಸೋಂಕು ತಗಲಿರುವುದು ಪತ್ತೆಯಾಗಿದೆ. ದೆಹಲಿಯಿಂದ ಆಗಮಿಸಿದ್ದ ಬಳ್ಳಾರಿ ಮೂಲದ ವ್ಯಕ್ತಿಗೂ ಕೊರೊನಾ ಇರೋದು ಧೃಡಪಟ್ಟಿದ್ದು, ಚಿಕಿತ್ಸೆ ನೀಡಲಾಗ್ತಿದೆ. ಇನ್ನು ಬೆಂಗಳೂರಿನಲ್ಲಿ ಇದುವರೆಗೂ ಅತಿಹೆಚ್ಚು ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು 57 ಮಂದಿಗೆ ಸೋಂಕು ತಗಲಿರುವುದು ಪತ್ತೆಯಾಗಿದೆ. 9 ಜನರು ಡಿಸ್ಜಾರ್ಜ್ ಆಗಿದ್ದು, 47 ಪ್ರಕರಣ ಆಕ್ಟೀವ್ನಲ್ಲಿದೆ. ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ. ಇನ್ನು, ಮೈಸೂರಿನಲ್ಲಿ ಇದುವರೆಗೆ 28 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ. ದಕ್ಷಿಣ ಕನ್ನಡದಲ್ಲಿ ಒಟ್ಟು 12 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದೆ.
ಜಮಖಂಡಿ: ಇಂದು ರಾತ್ರಿ ದೀಪ ಬೆಳಗೋಣ…. ಪ್ರಧಾನಿ ಮೋದಿ ಕರೆಗೆ ಕಲಾವಿದನ ಬೆಂಬಲ… ಚಿತ್ರ ಬಿಡಿಸುವ ಮೂಲಕ ಕರೊನಾ ಹಬ್ಬದಂತೆ ತಡೆಯಲು ದೀಪ ಬೆಳಗೋಣ… ದೇಶದ ಸರ್ವ ಜನಾಂಗದವರು ಮನೆಯಲ್ಲೆ ದೀಪ ಬೆಳಗೀಸೋಣ ಎನ್ನುವ ಸಂದೇಶ… ಏಕಕಾಲಕ್ಕೆ ದೀಪ ಬೆಳಗಿಸುವ ಮೂಲಕ ವಂದೇ ಮಾತರಂ ಅಂತ ಸಾರೋಣ… ಪ್ರಕಾಶಮಾನದ ಜ್ಯೋತಿಯ ಪ್ರಭಾವಳಿ ರಕ್ಷಾ ಕವಚದಿಂದ ಕರೊನಾ ವೈರಾಣು ನಮ್ಮ ಕುಟುಂಬ(ಭಾರತ ದೇಶ) ನುಗ್ಗದಂತೆ ತಡೆಯೋಣ ಎನ್ನುವ ಕಲಾವಿದನ ಕಲ್ಪನೆಯ ವಿತ್ರ ಅನಾವರಣ… ಕುಟುಂಬದ(ದೇಶ) ಒಳಗಿನ ಚಕ್ರದಲ್ಲಿ ಸರ್ವರೂ(ಎಲ್ಲ ಧರ್ಮಿಯರು) ದೀಪ ಹಚ್ಚೋಣ… ಹೊರಗಿಂದ ನುಗ್ಗಲು ಹರಿದಾಡುತ್ತಿರುವ ಕರೊನಾ ವೈರಾಣು ಒಳ ಬರದಂತೆ ಆ ಬೆಳಕಿನ ಶಕ್ತಿ ತಡೆಯುತ್ತದೆ ಎನ್ನುವ ಕಲ್ಪನೆಯ ಚಿತ್ರ… ಕಲಾವಿದ ಡಾ.ಸಂಗಮೇಶ ಬಗಲಿ ಕೈಯಲ್ಲಿ ಅರಳಿದ ಒಂದೇ ಮಾತರಂ ಶೀರ್ಷಿಕೆಯ ಚಿತ್ರ… ಜಮಖಂಡಿ ನಗರದ ಶಿಕ್ಷಕ, ಕಲಾವಿದ ಡಾ.ಸಂಗಮೇಶ ಬಗಲಿ… ಇಂದು ರಾತ್ರಿ 9 ಗಂಟೆಯಿಂದ 9 ನಿಮಿಷ ದೀಪ ಬೆಳಗೋಣ ಎನ್ನುವ ಕಲಾವಿದನ ಮನವಿ…