ಕೊರೋನಾ ಸೋಂಕು ನಿಯಂತ್ರಣಕ್ಕಾಗಿ ಕೈಜೋಡಿಸಿ : ಶಾಸಕ ಡಿ.ಎಮ್.ಐಹೊಳೆ

ಚಿಕ್ಕೋಡಿ:- ರಾಯಬಾಗ ತಾಲೂಕಿನ ಕುಡಚಿಯಲ್ಲಿ ನಾಲ್ಕು ಜನರಿಗೆಕರೋನಾ ಸೋಂಕು ದೃಢಪಟ್ಟಿರುವದರಿಂದ ತಾಲೂಕಿನಲ್ಲಿ ಆತಂಕ ಸೃಷ್ಠಿಯಾಗಿದೆ. ಜನರು ಮನೆಯಲ್ಲಿಯೇ ಇದ್ದು ಕೊರೋನಾ ಸೋಂಕು ನಿಯಂತ್ರಣಕ್ಕಾಗಿ ಕೈಜೋಡಿಬೇಕೆಂದು ಶಾಸಕ ಡಿ.ಎಮ್.ಐಹೊಳೆ ಅವರು ಮನವಿ ಮಾಡಿಕೊಂಡರು.
ಸೋಮವಾರ ತಾಲೂಕಿನ ನಂದಿಕುರಳಿ ಮತ್ತು ನಸಲಾಪೂರ ಗ್ರಾಮಗಳಲ್ಲಿ ಕರೋನಾ ಸೋಂಕು ನಿಯಂತ್ರಣ ಕುರಿತು ಹಮ್ಮಿಕೊಂಡಿದ್ದಜಾಗೃತಿ ಸಭೆಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಭಾಗದಲ್ಲಿ ಕರೋನಾ ಸೋಂಕಿನ ಬಗ್ಗೆ ಇನ್ನು ಹೆಚ್ಚಿನ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ.ಜನರು ಸ್ವಚ್ಛತೆ ಬಗ್ಗೆ ಕಾಳಜಿ ವಹಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕೆಂದರು. ಪಿಡಿಒ, ಗ್ರಾ.ಪಂ.ಸದಸ್ಯರು ಅಧಿಕಾರಿಗಳೊಂದಿಗೆ ಕೂಡಿಕೊಂಡು ಬಿಪಿಎಲ್ ಪಡಿತರದಾರರಿಗೆ ಸರಿಯಾಗಿ ಪಡಿತರ ಧಾನ್ಯಗಳನ್ನು ಮುಟ್ಟಿಸುವಂತೆ ಸೂಚಿಸಿದರು.
ಇದೇ ಸಂದರ್ಭದಲ್ಲಿ ನಸಲಾಪೂರಗ್ರಾಮದ ಬೀದಿಗಳಲ್ಲಿ ಶಾಸಕರು ಅಧಿಕಾರಿಗಳೊಂದಿಗೆ ಕೂಡಿಕೊಂಡುರಾಸಾಯನಿಕವನ್ನು ಸಿಂಪಡಿಸಿದರು.
ತಾ.ಪಂ.ಇಒ ಪ್ರಕಾಶ ವಡ್ಡರ, ಭರತೇಶ ಬನವಣೆ, ತಾ.ಪಂ.ಸದಸ್ಯಚೌಗೌಡ ಪಾಟೀಲ, ಬಾಬಾಸಾಹೇಬ ಪಾಟೀಲ, ಮುಬಾರಕ್‍ತಾಂಬಟ, ರಾಜಗೌಡ ಪಾಟೀಲ, ರಾಜು ಪಾಟೀಲ, ಪೃಥ್ವಿರಾಜಜಾಧವ ಸೇರಿದಂತೆಅಂಗನವಾಡಿ, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.
.
Share
WhatsApp
Follow by Email