
ಅವರು ಮೂಡಲಗಿ ಪಟ್ಟಣದ ಈರಣ್ಣ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾದ ಕೊರೊನಾ ವೈರಸ್ ಬಗ್ಗೆ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಜಗತ್ತಿನಾದ್ಯಂತ ಹರಡಿರುವ ಮಹಾಮಾರಿ ಕೊರೊನಾ ವೈರಸದಿಂದ ನಮ್ಮ ದೇಶದಲ್ಲಿ ಸೋಂಕಿತರ ಮತ್ತು ಸಾವುಗಳ ಸಂಖ್ಯೆ ಹೆಚ್ಚಾಗುತ್ತಾ ದೇಶ ಗಂಡಾತರ ಪರಿಸ್ಥಿತಿಯಲ್ಲಿದೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳ ಮತ್ತು ವೈದ್ಯರ ಸಲಹೆ ಮತ್ತು ಸೌಲಭ್ಯಗಳನ್ನು ಸೂಕ್ತವಾಗಿ ಬಳಿಸಿಕೊಂಡು ಎಲ್ಲರೂ ಒಗ್ಗಟ್ಟಿನಿಂದ ಹೋರಾಟ ಮಾಡಿ ಕೊರೊನಾದಿಂದ ಮುಕ್ತರಾಗೋಣಾ ಎಂದು ಹೇಳಿದರು.

ನಿಜಾಮುದ್ದಿನದಿಂದ ಬಂದoತ ವ್ಯಕ್ತಿಗಳು ಸ್ವಯಂ ಪೇರಿತವಾಗಿ ತಾವೇ ಬಂದು ಪರಿಶೀಲನೆ ಮಾಡಿಕೊಳ್ಳಬೇಕು ಹೊರೆತು ಮನೆಯಲ್ಲೇ ಬಚ್ಚಿಟ್ಟಕೊಳ್ಳ ಬಾರದು, ಹಿಂದೂ ಮುಸ್ಲಿಂ ಭೇದ ಭಾವ ಇಲ್ಲದೇ ಒಗ್ಗಟ್ಟಿನಿಂದ ಕೊರೊನಾ ವಿರುದ್ದ ಹೋರಾಟ ಮಾಡಬೇಕೆಂದರು.
ಸಭೆಯಲ್ಲಿ ಮುಖ್ಯಾಧಿಕಾರಿ ಡಿ.ಎಸ್.ಹರ್ದಿ, ಪಿಎಸ್‌ಐ ಮಲ್ಲಿಕಾರ್ಜುನ ಸಿಂಧೂರ,ಎಚ್.ವಾಯ್.ಬಾಲದoಡಿ,ಆರ್.ಕೆ.ಬಿಸಿರೊಟ್ಟಿ ಡಾ: ಭಾರತಿ ಕೋಣಿ, ಸಿ.ಡಿ.ಪಿ.ಒ. ವಾಯ್.ಎಮ್.ಗುಜನಟ್ಟಿ,ಎನ್.ಎಸ್.ಎಫ್ ಅತಿಥಿ ಗೃಹದ ನಾಗಪ್ಪ ಶೇಖರಗೋಳ,ದಾಸಪ್ಪ ನಾಯಕ, ಪುರಸಭೆ ಸದಸ್ಯರು, ವಿವಿಧ ಸಂಘ ಸಂಸ್ಥೆಯವರು,ನೂಡಲ್ ಅಧಿಕಾರಿಗಳು ವಿವಿಧ ಗ್ರಾಮಸ್ತರು ಮತ್ತಿತರರು ಇದ್ದರು

ತಾಲೂಕಾ ವೈದ್ಯಾಧಿಕಾರಿ ಡಾ. ರವೀಂದ್ರ ಅಂಟಿನ್ ಮಾತನಾಡಿ, ಈ ಸಾಂಕ್ರಾಮಿ ರೋಗವು ಮೂರು ತಿಂಗಳಲ್ಲಿ ಜಗತ್ತಿನಾದ್ಯಂತ ಹಬ್ಬಿದೆ, ಈ ರೋಗಕ್ಕೆ ನಿಖರವಾದ ಔಷಧಿ ಇನ್ನೂ ಸಿಕ್ಕಿಲಾ ವಯಸ್ಸಾದವರೂ ಮತ್ತು ಮಧುಮೇಹಿ ರೋಗಿಗಳು ಕಟ್ಟುನಿಟ್ಟಿನಿಂದ ಚಿಕಿತ್ಸೆ ಪಡೆದಿಕೊಳ್ಳಬೇಕೆಂದರು.

ಜಿ.ಪಂ.ಸದಸ್ಯ ಗೋವಿಂದ ಕೊಪ್ಪದ, ತಾ.ಪಂ.ಕಾರ್ಯನಿರ್ವಾಹಕ ಬಸವರಾಜ ಹೆಗ್ಗನಾಯಕ ಸಿ.ಪಿ.ಐ.ವೆಂಕಟೇಶ ಮುರನಾಳ ಮಾತನಾಡಿದರು.ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ ಅರಬಾವಿ ಶಾಸಕರು ಮೂಡಲಗಿ ತಾಲೂಕಿಗೆ 2ಲಕ್ಷ ಮಾಸ್ಕಗಳನ್ನು ಹಂತ ಹಂತವಾಗಿ ಜನಪ್ರತಿನಿಧಿಗಳ ಮೂಲಕ ವಿತರಿಸುವರೆಂದು ಹೇಳಿದರು.
ಪುರಸಭೆ ಆರೋಗ್ಯಾಧಿಕಾರಿ ಚಿದಾನಂದ ಮುಗುಳಖೋಡ ಸ್ವಾಗತಿಸಿ ವಂದಿಸಿದರು.