ಸರಳರೀತಿಯಲ್ಲಿ ಮಹಾವೀರ ಜಯಂತಿ ಆಚರಣೆ

ಮುದ್ದೇಬಿಹಾಳ:ಪಟ್ಟಣದ ಅರಿಹಂತ ಚಾರಿಟೇಬಲ್ ಟ್ರಸ್ಟ್ಟಿನ ಪಿ.ಯು.ಸಿ, ಬಿ.ಎಸ್. ಡಬ್ಲ್ಯೂ, ಎಂ.ಎಸ್. ಡಬ್ಲ್ಯೂ ಕಾಲೇಜು ಹಾಗೂ ಎಂ.ಬಿ.ಎಸ್. ಕಲಾ ಪ್ರಥಮ ದರ್ಜೆ ಮಹಾವಿದ್ಯಾಲಯ ಅರಿಹಂತಗಿರಿಯಲ್ಲಿ 2618 ನೇ ಮಹಾವೀರ ಜಯಂತಿಯನ್ನು ಸರಕಾರದ ಆದೇಶದಂತೆ ಕೊರೊನಾ ವೈರಸ್ ಇರುವ ಹಿನ್ನಲೆಯಲ್ಲಿ ಅತೀ ಸರಳತೆಯಿಂದ ಆಚರಿಸಲಾಯಿತು.
ಈ ವೇಳೆ ಅರಿಹಂತ ಚಾರಿಟೇಬಲ್ ಟ್ರಸ್ಟನ ಅಧ್ಯಕ್ಷರಾದ ಮಹಾವೀರ ಬ. ಸಗರಿ ಜಯಂತ್ಯೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು ಜಗತ್ತಿನ ಇತಿಹಾಸದಲ್ಲಿ ಕಲಿಯುಗದಲ್ಲಿ ಇದೇ ಮೊದಲ ಬಾರಿಗೆ ಮಹಾವೀರ ಜಯಂತಿಯನ್ನು ಅತ್ಯಂತ ಅರ್ಥಗರ್ಭಿತವಾಗಿ, ಸಾತ್ವಿಕತೆಯಿಂದ, ಪವಿತ್ರತೆಯಿಂದ “ ಬದುಕು-ಬದುಕಲು ಬಿಡು ” ಹಾಗೂ “ ಅಹಿಂಸಾ ಮರಮೋ ಧರ್ಮ ” ಎಂಬ ಸಿದ್ದಾಂತಗಳ ಪೂರ್ಣ ಅನುಷ್ಠಾನದಿಂದ ಆಚರಿಸಲಾಗಿದೆ
ಏಕೇಂದರೆ ಕಸಾಯಿ ಖಾನೆ ಮಾಂಸಾಹಾರ ಬಂದ್, ಸಾರಾಯಿ ಬಂದ್, ಹೊರಗಡೆ ತಿನ್ನುವುದು ಬಂದ್, ರಸ್ತೆ ಬದಿ ಅಶುದ್ಧ ಆಹಾರ ತಿನ್ನುವುದು ಬಂದ್, ಪರಿಸರ ಮಾಲಿನ್ಯ ಬಂದ್ ( ಸೂಕ್ಷ್ಮ ಜೀವಿಗಳ ಹಿಂಸೆ ಬಂದ್), ಕೆಲಸಗಾರರ ಮೇಲಿನ ಒತ್ತಡ ಬಂದ್ ಹಾಗೂ ವಿಶ್ರಾಂತಿ, ಮಿತಿ ಮೀರಿದ ಸಂಪಾದನೆ ಬಂದ್, ನೀರನ್ನು ಕಾಯಿಸಿ ಸೋಸಿ ಕುಡಿಯುವುದು, ತಾವೇ ತಯಾರಿಸಿದ ಸಾತ್ವಿಕ ಆಹಾರವನ್ನು ಮನೆಯಲ್ಲಿ ಕುಳಿತು ಸಹ ಭೋಜನ ಮಾಡುವುದು, ಮನೆಯಲ್ಲಿ ಧರ್ಮ ಗ್ರಂಥಗಳ ಅಧ್ಯಯನ ಹಾಗೂ ಸಾಮಾಯಿಕ ಚಿಂತನೆ ಮಾಡುವುದು, ಉಪವಾಸ, ವೃತ, ನಿಯಮಗಳನ್ನು ಪಾಲಿಸುವುದು ಹೀಗೆ ಹತ್ತು ಹಲವಾರು ಮಹಾವೀರರ ತತ್ವಗಳನ್ನು ಪಾಲಿಸುವ ಪುಣ್ಯಯೋಗ ಜೈನಧರ್ಮಿಯರಿಗೆ ಕೋವಿಡ್-19 ಲಾಕಡೌನ ಸಮಯದಲ್ಲಿ ಒದಗಿ ಬಂದಿದೆ ಆದ್ದರಿಂದ ನಾವು ಕೂಡಾ ನಮ್ಮ ಮಹಾವಿದ್ಯಾಲಯದಲ್ಲಿ ಅತೀ ಸರಳದಿಂದ ಭಗವಾನ ಮಹಾವೀರ ಜಯಂತಿಯನ್ನು ಆಚರಿಸುವುದರ ಜೊತೆಗೆ ನಮ್ಮ ದೇಶಕ್ಕೆ ಬಂದ ಕೊರೊನಾ ವೈರಸ್‌ದಿಂದ ಬೇಗನೆ ಎಲ್ಲರಿಗೂ ಮುಕ್ತಿ ಸಿಗಲಿ ಹಾಗೂ ಕೊರೊನಾ ವಿರುದ್ಧ ಹೊರಾಡುತ್ತಿರುವ ಪ್ರತಿಯೊಬ್ಬರಿಗೂ ಜಯ ಸಿಗಲಿ ಎಂದರು
Share
WhatsApp
Follow by Email