ಘಟಪ್ರಭಾ ಬಲದಂಡೆ ಕಾಲುವೆಗೆ ಪ್ರತಿದಿನ 2000 ಕ್ಯೂಸಕ್ಸ್ ನೀರು ಬಿಡುವಂತೆ ಜಲಸಂಪನ್ಮೂಲ ಸಚಿವರಿಗೆ ಮನವಿ ಪತ್ರ : ಜಿಪಂ ಗೋವಿಂದ್ ಕೊಪದ

ಮೂಡಲಗಿ : ಗೋಕಾಕ ಹಾಗೂ ಮೂಡಲಗಿ ತಾಲೂಕಿನ ರೈತರ ಪರವಾಗಿ ಬೆಳಗಾವಿ ಜಿಲ್ಲಾ ಪಂಚಾಯತ್ ಸದಸ್ಯ ಗೋಂವಿದ ಕೊಪದ ಅವರು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದ್ದಾರೆ
ಘಟಪ್ರಭಾ ಬಲದಂಡೆ ಕಾಲುವೆಗೆ ಎಪ್ರಿಲ್ 15 2020 ರಿಂದ ಮೇ 5 2020ರ ವರಗೆ ಪ್ರತಿದಿನ 2000 ಕ್ಯೂಸಕ್ಸ್ ನೀರು ಬಿಡುವಂತೆ ಮನವಿ ಪತ್ರದಲ್ಲಿ ನಮೂದಿಸಿದ್ದಾರೆ.
ಬೇಸಿಗೆ ದಿನದಲ್ಲಿ 1000 ಕ್ಯೂಸಕ್ಸ್ ನೀರು ಬಿಟ್ಟರೆ ಮುಂದಿನ ಭಾಗದ ರೈತಾಪಿ ಜನರಿಗೆ ನೀರು ತಲುಪುವುದಿಲ್ಲ. ಆದ್ದರಿಂದ ಈ ಕೂಡಲೇ ರೈತರ ಹಿತದೃಷ್ಟಿಯಿಂದ ಘಟಪ್ರಭಾ ಬಲದಂಡೆ ಕಾಲುವೆಗೆ ನೀರು ಬಿಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶವನ್ನು ರವಾನಿಸಬೇಕು ಎಂದು ಸಚಿವರಲ್ಲಿ ಮನವಿ ಮಾಡಿದ್ದಾರೆ
Share
WhatsApp
Follow by Email