ಶಬೇಬಾರತ ಕುರಿತು ಮುಸ್ಲಿಂ ಸಮಾಜದ ಮುಖಂಡರ ಪತ್ರಿಕಾ ಗೋಷ್ಠಿ

ಅಥಣಿ: ಪಟ್ಟಣದಲ್ಲಿ ಮುಸ್ಲಿಂ ಸಮಾಜ ಮುಖಂಡರು ಪತ್ರಿಕಾ ಗೋಷ್ಠಿ ನಡೆಸುವ ಮೂಲಕ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಈ ವೇಳೆ ಮಾತನಾಡಿದ ಸಮಾಜದ ಮುಖಂಡ ಅಸ್ಲಂ ನಾಲಬಂದ್ 
ಒಂಭತ್ತನೆಯ ತಾರಿಖು ರಾತ್ರಿ ಶಬೇಬರಾತ ಜಾಗರಣೆ ಮತ್ತು ಸಾಮೂಹಿಕ ಪ್ರಾರ್ಥನೆ ಹಿನ್ನೆಲೆಯಲ್ಲಿ ಕೊರೊನಾ ವೈರಸ್ ನಿಂದಾಗಿ ಮುಸ್ಲಿಂ ಸಮುದಾಯಕ್ಕೆ ನಮಾಜ್ ಮಾಡಲು ತಿವ್ರ ತೊಂದರೆ ಆಗಿದ್ದು ಪ್ರತ್ಯೇಕ ಮಸೀದಿಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಅಗತ್ಯ ಇದ್ದು ಪ್ರತಿ ಮಸೀದಿಯಲ್ಲಿ ಮೂರರಿಂದ ನಾಲ್ಕು ಜನ ಮಾತ್ರ ಶಬೇಬರಾತ ರಾತ್ರಿ ನಮಾಜ್ ಮಾಡಲು ಅವಕಾಶ ಇದೆ ಆದ್ದರಿಂದ ಉಳಿದವರು  ತಮ್ಮ ಮನೆಗಳಲ್ಲಿಯೇ ನಮಾಜ್ ಮಾಡಲು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಈ ಬಗ್ಗೆ ನಿನ್ನೆ ಪ್ರತ್ಯೇಕವಾಗಿ ಪ್ರತಿ ಮಸೀದಿಯಲ್ಲಿ ಧರ್ಮ ಗುರುಗಳ ಮೂಲಕ ಎಲ್ಲರಿಗೂ ಹೇಳಲಾಗಿದ್ದು ಅವರು ಕೂಡ ನಮ್ಮ ಸಮಾಜದ ಜನರಿಗೆ ಹೇಳಿದ್ದಾರೆ ಸಮಾಜದ ಜನರು ಪ್ರಾರ್ಥನೆ ಹೆಸರಲ್ಲಿ ಗುಂಪು ಕೂಡದಂತೆ ಮತ್ತು ಸಮೂಹದಲ್ಲಿ ಪ್ರಾರ್ಥನೆ ಮಾಡದಂತೆ ಈಗಾಗಲೇ ವಿನಂತಿಸಿದ್ದೇವೆ.

ತಬ್ಲಿಗ್ ಜಮಾತ್ ಬಗ್ಗೆ ಮುಸ್ಲಿಂ ಸಮುದಾಯದ ಜನರನ್ನು ಅವಹೇಳನಕಾರಿಯಾಗಿ ಮಾಧ್ಯಮಗಳಲ್ಲಿ ಬಿಂಬಿಸುತ್ತಿರುವದು ನಮ್ಮ ಧರ್ಮದ ಜನರಿಗೆ ತೀವ್ರ ಮಾನಸಿಕ ಆಘಾತವಾಗುತ್ತಿದೆ.
ದಯವಿಟ್ಟು ಜನರು ತಪ್ಪು ಮಾಹಿತಿಗಳಿಗೆ ಮತ್ತು ವದಂತಿಗಳಿಗೆ ಕಿವಿ ಕೊಡಬಾರದು ಮತ್ತು ಎಂದು ಮನವಿ ಮಾಡಿದರು.
ಈ ವೇಳೆ ಸಮಾಜದ ಮುಖಂಡರಾದ ಸಲಾಂ ಕಲ್ಲಿ. ಯಸೂಫ್ ನಾಲಬಂದ. ಸಯ್ಯದ ಅಮೀನ ಗದ್ಯಾಳ‌. ಹಾರೂನ್ ಮೋಮಿನ್.‌ ಸರದಾರ ನಧಾಪ್. ಅಬ್ದುಲ್ ಆಸಂಗಿ. ಯಾಸಿನ್ ಜಾರೆ. ಸಿರಾಜ ಸನದಿ. ಸೇರಿದಂತೆ ಹಲವರು ಉಪಸ್ಥಿತರಿದ್ದರು.




Share

WhatsApp
Follow by Email