ಸ್ಲಂ ನಿವಾಸಿಗಳಿಗೆ ನಂದಿನಿಂದ ಉಚಿತ ಹಾಲು ವಿತರಣೆ ಬಾಲಚಂದ್ರ ಜಾರಕಿಹೊಳಿ ಅವರ ಕಾರ್ಯಕ್ಕೆ ಬಡ ಕುಟುಂಬಗಳಿಂದ ಅಭಿನಂದನೆ

ಮೂಡಲಗಿ: ಕೋವಿಡ್19 ಸೊಂಕಿನ ಹಿನ್ನೆಲೆಯಲ್ಲಿ ರಾಜದಲ್ಲಿ ಲಾಕ್ ಡೌನ್ ಘೋಷಿಸಲಾಗಿದು, ಹಾಲು ಒಕ್ಕೂಟದಲ್ಲಿ ಹೆಚ್ಚುವರಿಯಾಗಿ ಸಂಗ್ರಹವಾಗುತ್ತಿರುವ ಹಾಲನ್ನು ಕೆ.ಎಮ್ ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರ ಸೂಚನೆ ಮೇರೆಗೆ ಮೂಡಲಗಿ ಪಟ್ಟಣದಲ್ಲಿರುವ ಅಧಿಸೂಚಿತವಲ್ಲದ ಗುರುತಿಸಲ್ಪಟ್ಟ ಕೋಳಗೇರಿ ಪ್ರದೇಶದಲ್ಲಿ ವಾಸಿಸುವ ಕುಟುಂಬಗಳಿಗೆ ಉಚಿತವಾಗಿ ನಂದಿನಿ ಹಾಲನ್ನು ವಿತರಿಸಲಾಯಿತು.
ಪಟ್ಟಣದ ಈರಣ್ಣಾ ನಗರ, ವಿಜಯ ನಗರ, ವಿದ್ಯಾನಗರ, ವೆಂಕಟೇಶ್ವರ ನಗರ, ಗಂಗಾ ನಗರ, ರಾಜೀವ ಗಾಂಧಿ ನಗರ, ಕಜಾಳ ಮಡ್ಡಿ, ವಡ್ಡರ ಓಣಿಯಲ್ಲಿರುವ ಸ್ಲಂ ನಿವಾಸಿಗಳ ಪ್ರತಿ ಕುಟುಂಬಗಳಿಗೆ ತಲಾ ಒಂದು ಲೀಟರ್ ಹಾಲನ್ನು ವಿತರಿಸಲಾಯಿತು.
ಕೊರೋನಾ ಸೊಂಕಿನ ಹಿನ್ನೆಲೇಯಲ್ಲಿ ಕರ್ನಾಟಕ ಹಾಲು ಮಹಾಮಂಡಳಿಯಿಂದ ಪ್ರತಿ ನಿತ್ಯ 8 ಲಕ್ಷ ಲೀಟರ ಹಾಲನ್ನು ರಾಜ್ಯದಲ್ಲಿರುವ ಬಡ ಕುಟುಂಬಗಳಿಗೆ ಹಾಗೂ ಕೊಳಗೇರಿ ನಿವಾಸಿಗಳಿಗೆ ಹಾಲು ಮಹಾಮಂಡಳಿಯಿಂದ ಹಾಲು ವಿತರಿಸಲು ಕ್ರಮ ಕೈಗೊಂಡಿರುವ ಅರಭಾವಿ ಶಾಸಕ ಮತ್ತು ಕೆ.ಎಮ್.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರ ಕಾರ್ಯವನ್ನು ಇದೇ ಸಂದರ್ಭದಲ್ಲಿ ನಿವಾಸಿಗಳು ಶ್ಲಾಘಿಸಿದರು. ಈಗಾಗಲೇ ಜಾರಿಯಲ್ಲಿರುವ ಲಾಕ್ ಡೌನ್ ಮುಗಿಯುವ ತನಕ ಬಡ ಕುಟುಂಬಗಳಿಗೆ ಉಚಿತವಾಗಿ ಹಾಲನ್ನು ವಿತರಿಸಲಾಗುತ್ತಿದೆ.
ಹಾಲು ವಿತರಣೆ ವೇಳೆಯಲ್ಲಿ ಪುರಸಭೆ ಸದಸ್ಯರಾದ ಸಂತೋಷ ಸೋನವಾಲ್ಕರ, ಸುಭಾಸ ಸಣ್ಣಕ್ಕಿ, ರವೀಂದ್ರ ಸಣ್ಣಕ್ಕಿ, ಜಯಾನಂದ ಪಾಟೀಲ, ಹುಸೇನ ಶೇಖ್ಖ, ಶಿವಾನಂದ ಚಂಡಕಿ, ಗಫಾರ ಡಾಂಗೆ, ಹನಮಂತ ಗುಡ್ಲಮನ್ನಿ, ಅನ್ವರ ನಾದಾಫ್, ನನ್ನು ಶೇಖ್ಖ, ರಾಜು ಪೂಜೇರಿ, ಬಸು ಝಂಡೇಕುರಬರ, ಮರೆಪ್ಪ ಮರೆಪ್ಪಗೋಳ, ಸಿದ್ದು ಗಡ್ಢೆಕರ, ಆನಂದ ಟಪಾಲ, ಪುರಸಭೆ ಅಧಿಕಾರಿಗಳು, ಅಂಗನವಾಡಿ ಕಾರ್ಯರ್ತೆಯರು ಸೇರಿದಂತೆ ಮತ್ತಿತರು ಇದ್ದರು.
Share
WhatsApp
Follow by Email