ಬ್ರೇಕಿಂಗ್ ನ್ಯೂಸ್ ಅಕ್ಕಿ ಹಾಗೂ ಮಾಸ್ಕ ವಿತರಣೆ ಮಾಡಿದ ಶಾಸಕ ಐಹೋಳೆ 08/04/202008/04/2020 admin ರಾಯಬಾಗ : ಕೊರೋನಾ ವೈರಸ್ ನಿಯಂತ್ರಣಕ್ಕಾಗಿ ಲಾಕ್‌ಡೌನ್ ಹಿನ್ನಲೆಯಲ್ಲಿ ಪಟ್ಟಣದ ವಿವೇಕ ನಗರದ ನಿವಾಸಿಗಳಿಗೆ ಶಾಸಕ ಡಿ.ಎಂ.ಐಹೊಳೆ ಅವರು ಬುಧವಾರ ಅಕ್ಕಿ ಹಾಗೂ ಮಾಸ್ಕಗಳನ್ನು ವಿತರಿಸಿದರು.ಶಾಸಕ ಡಿ.ಎಂ.ಐಹೊಳೆ ಅವರು ಮಾತನಾಡಿ ಕೊರೋನಾ ಭಯಂಕರ ಮಾಹಾಮಾರಿ ರೋಗವನ್ನು ನಿಯಂತ್ರಣದಲ್ಲಿಡಲು ಎಲ್ಲರೂ ಸಹಕರಿಸಿ ಅನಾವಶ್ಯಕವಾಗಿ ಮನೆಬಿಟ್ಟು ಹೊರಗಡೆ ಬರಬಾರದು ಒಂದುವೇಳೆ ಬಂದರು ಮುಖಕ್ಕೆ ಮಾಸ್ಕವನ್ನು ಹಾಕಿಕೊಂಡು ಬರಬೇಕೆಂದು ಹೇಳಿದರು.ಈ ಸಂದರ್ಭದಲ್ಲಿ ಮಾಜಿ ಸಂಸದ ಅಮರಸಿಂಹ ಪಾಟೀಲ, ಜಿ.ಪಂ.ಸದಸ್ಯ ನಿಂಗಪ್ಪ ಪಕಾಂಡಿ, ಬಿಜೆಪಿ ಅಧ್ಯಕ್ಷ ಬಸವರಾಜ ಡೋಣವಾಡೆ, ಸದಾನಂದ ಹಳಿಂಗಳೆ, ಅಣ್ಣಾಸಾಬ ಕುಲಗುಡೆ, ಮಹೇಶ ಕರಮಡಿ, ರಾಜು ದೇಶಪಾಂಡೆ, ಚಂದ್ರು ಬುರುಡ, ಭಾರತಿ ಲೋಹಾರ, ಸೇರಿದಂತೆ ಅನೇಕರು ಇದ್ದರು. Share