ದಿನದಿಂದ ದಿನಕ್ಕೆ ಮಹಾಮಾರಿಯಾಗಿ ಕಾಡುತ್ತಿರುವ ಕೊರೊನಾ ವೈರಸ್ : ಅಣ್ಣಾಸಾಹೇಬ ಜೊಲ್ಲೆ

ಚಿಕ್ಕೋಡಿ : ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಕಲ್ಲೊಳ, ಯಡೂರ, ಚಂದೂರ ಅಂಕಲಿ  ಶಿರಗುಪ್ಪಿ ಜುಗಳ  ಮಾಂಜರಿ ಕೆರೂರ ಗ್ರಾಮಗಳಿಗೆ ಭೇಟಿ ನೀಡಿ, ಗ್ರಾಮ ಪಂಚಾಯತ್ ಹೊರಾಂಗಣದಲ್ಲಿ, ಹಾಗೂ ಗ್ರಾಮದ ವಿವಿಧ ಇಲಾಖೆ ಅಧಿಕಾರಿಗಳು, ಪಂಚಾಯತ್ ಸದಸ್ಯರು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರೊಂದಿಗೆ ಚಿಕ್ಕೋಡಿ ಲೋಕಸಭೆಯ ಸಂಸದರಾದ ಅಣ್ಣಾಸಾಹೇಬ ಜೊಲ್ಲೆ  ಯವರು ಕೊರೋನಾ ವೈರಸ್ ತಡೆಗಟ್ಟಲು ತೆಗೆದುಕೊಳ್ಳಲಾದ  ಮುನ್ನೆಚ್ಚರಿಗೆ ಕ್ರಮಗಳ ಕುರಿತು ಜನರಿಗೆ ಅರಿವು ಮುಡಿಸಿದರು.
ಅಗತ್ಯ ವಸ್ತುಗಳನ್ನು ನಿಮ್ಮ ನಿಮ್ಮ ಮನೆಗಳ ಸಮೀಪ ಗಾಡಿಗಳ ಮೂಲಕ ಪೂರೈಸುವ ವ್ಯವಸ್ಥೆ ಮಾಡಲಾಗುತ್ತದೆ, ಆತಂಕಕ್ಕೊಳಗಾಗಿ ಅನಗತ್ಯವಾಗಿ ವಸ್ತುಗಳನ್ನು ಖರೀದಿಸುವುದು ಬೇಡ. ಅಗತ್ಯ ವಸ್ತುಗಳನ್ನು ಕೊಳ್ಳುವಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳಿ. ಆದಷ್ಟು ಮನೆಯಲ್ಲೇ ಇರಿ ಸುರಕ್ಷಿತವಾಗಿರಿ. ಕೊರೋನಾ ವೈರಸ್‌ ಮಹಾಮಾರಿಯನ್ನು ಹೊಡೆದೋಡಿಸಲು ಸುರಕ್ಷಿತ ಆರೋಗ್ಯಕರ ಸಲಹೆಗಳನ್ನು ಪಾಲಿಸುತ್ತಾ ಮನೆಯಲ್ಲಿ ಇರಿ .
ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರು ನಿಮ್ಮಗೆ ಮಾಹಿತಿಯನ್ನು ನೀಡಲು ಬಂದಾಗ  ಸಹಕರಿ ಕೊರೋನಾ ವಿರುದ್ಧ ಹೋರಾಟದಲ್ಲಿ ಅವರುಗಳ ಶ್ರಮವನ್ನು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಚಿಕ್ಕೋಡಿ ತಹಶೀಲ್ದಾರ ಶ್ರೀ ಸುಭಾಷ ಸಂಪಗಾವಿ, ಅಂಕಲಿ ಪಿ.ಎಸ್.ಐ ಎಂ.ಎಂ ತಹಶೀಲ್ದಾರ, ಸಿಡಿಪಿಓ ಶ್ರೀಮತಿ ದೀಪಾ ಕಾಳೆ,  ಗ್ರಾಮದ ಜನ ಪ್ರತಿನಿಧಿಗಳು, ಮತ್ತು ಆಶಾ ಕಾರ್ಯಕರ್ತರು ಅಂಗನವಾಡಿ ಕಾರ್ಯಕರ್ತರು, ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
Share
WhatsApp
Follow by Email