ಮಳವಳ್ಳಿ ಪಟ್ಟಣಕ್ಕೆ ಭೇಟಿನೀಡಿದ ಜಿಲ್ಲಾ ಉಸ್ತವಾರಿ ಸಚಿವ ಆರ್.ಅಶೋಕ್

ಮಳವಳ್ಳಿ ಮಳವಳ್ಳಿ ಪಟ್ಟಣದಲ್ಲಿ ಹೊಸದಾಗಿ ಇಂದು ಮತ್ತೊಬ್ಬರಿಗೆ ಕೋರೋಣ ಸೋಂಕು ತಗುಲಿರುವುದು ದೃಢಪಟ್ಟಿದ್ದು ಇದರೊಂದಿಗೆ ಪಟ್ಟಣದಲ್ಲಿ ಕರೋನ ಸೋಂಕಿತರ ಸಂಖ್ಯೆ ನಾಲ್ಕಕ್ಕೆ ಏರಿದೆ ನಿನ್ನೆ ಮೂವರಿಗೆ ಸೋಂಕು ತಗುಲಿರುವುದು ದೃಢಪಟ್ಟಿತ್ತು ಆದರೆ ಇಂದು ಮತ್ತೊಬ್ಬರಿಗೆ ಸೋಂಕು ತಗುಲಿರುವುದು ಖಚಿತ ವಾಗಿದೆ ಎಂದು ಸ್ವತಹ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಕಂದಾಯ ಸಚಿವ ಆರ್ ಅಶೋಕ್ ಮಳವಳ್ಳಿಯಲ್ಲಿ ತಿಳಿಸಿದ್ದಾರೆ. ಇಂದು ಬೆಳಿಗ್ಗೆ ಮಳವಳ್ಳಿ ಪಟ್ಟಣಕ್ಕೆ ಆಗಮಿಸಿ ಕರೋನ ಸೋಂಕು ಕಾಣಿಸಿಕೊಂಡಿರುವ ಇಲ್ಲಿನ ಈದ್ಗಾ ಮೊಹಲ್ಲಾ ಬಳಿ ಆಗಮಿಸಿ ಪರಿಶೀಲನೆ ನಡೆಸಿದರು ನಂತರ ಡಿವೈಎಸ್ಪಿ ಕಚೇರಿಯಲ್ಲಿ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿ ತದನಂತರ ಪತ್ರಕರ್ತರೊಂದಿಗೆ ಮಾತನಾಡಿದರು ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಈ ಸೋಂಕು ಕಾಣಿಸಿಕೊಂಡಿದ್ದರು ಸಹ ಮಂಡ್ಯ ಜಿಲ್ಲೆಯಲ್ಲಿ ಈ ಸೋಂಕು ಹರಡಿಲ್ಲ ವೆಂಬ ಸಮಾಧಾನ ನಮ್ಮೆಲ್ಲರಲ್ಲೂ ಇತ್ತು ಆದರೆ ಮುಜಾಹಿದ್ದೀನ್ ತಬ್ಲಿಘಿ ಗಳ ಸಂಪರ್ಕದಿಂದಾಗಿ ಮಳವಳ್ಳಿಯಲ್ಲಿ ಈ ಸೋಂಕು ಕಾಣಿಸಿಕೊಂಡಿರುವುದು ನಿಜಕ್ಕೂ ವಿಪರ್ಯಾಸ ಎಂದು ವಿಷಾದಿಸಿದರು ಈಗಾಗಲೇ ಕಾಣಿಸಿಕೊಂಡಿರುವ ಈದ್ಗಾ ಮೊಹಲ್ಲಾ ವನ್ನು ಸಂಪೂರ್ಣ ಬಂದ್ ಮಾಡಲಾಗಿದೆ ಅಲ್ಲಿನ ಜನರಿಗೆ ಅಗತ್ಯವಾದ ಆಹಾರ ಪದಾರ್ಥಗಳನ್ನು ಅವರವರ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ ಈ ರೋಗ ಬೇರೆಡೆಗೆ ಹರಡದಂತೆ ಎಲ್ಲ ಕ್ರಮಗಳನ್ನು ಜಿಲ್ಲಾಡಳಿತ ಕೈಗೊಂಡಿದ್ದು ಸಾರ್ವಜನಿಕರು ಸರ್ಕಾರದ ನಿಯಮಗಳನ್ನು ಪಾಲಿಸುವ ಮೂಲಕ ರೋಗವನ್ನು ಸಂಪೂರ್ಣವಾಗಿ ನಿಯಂತ್ರಿಸಲು ಜಿಲ್ಲಾಡಳಿತದ ಒಡನೆ ಸಹಕರಿಸಬೇಕೆಂದು ಕೋರಿದರು.ಶಾಸಕ ಅನ್ನದಾನಿ, ಜಿಲ್ಲಾಧಿಕಾರಿ ಡಾ ವೆಂಕಟೇಶ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪರಶುರಾಮ್ ಅಡಿಷನಲ್ ಎಸ್ಪಿ ಡಾ ಶೋಭಾರಾಣಿ ಡಿವೈಎಸ್ಪಿ ಪೃಥ್ವಿ ತಸಿಲ್ದಾರ್ ಚಂದ್ರಮೌಲಿ ಸೇರಿದಂತೆ ಹಲವಾರು ಅಧಿಕಾರಿಗಳು ಇದೆ ಸಂದರ್ಭದಲ್ಲಿ ಹಾಜರಿದ್ದರು
ವರದಿ :ಕೃಪ ಸಾಗರ್ ಗೌಡ
Share

WhatsApp
Follow by Email