ಬ್ರೇಕಿಂಗ್ ನ್ಯೂಸ್ ಸಾಮಾಜಿಕ ಅಂತರ ಕಾಯ್ದುಕೊಂಡು ವೈರಸ್ ಹರಡದಂತೆ ಜಾಗೃತೆವಹಿಸಿ :ರವೀಂದ್ರ 08/04/202008/04/20201 min read admin ಅರಟಾಳ ; ಕರೊನಾ ವೈರಸ್ ಆಂತಕದಿAದ ಸರ್ಕಾರ ಎಪ್ರೀಲ್ 14ರ ವರೆಗೆ ಲಾಕ್ ಡೌನ್ ಜಾರಿಯಲ್ಲಿದೆ. ವೈರಸ್ ಬರುವ ಮುನ್ನವೇ ಎಲ್ಲರು ಎಚ್ಚತುಕೊಳ್ಳಿ. ತಾಲೂಕಿನಲ್ಲಿ ಸಾವಿರಕ್ಕೂ ಹೆಚ್ಚು ಜನರು ಬೇರೆಡೆಯಿಂದ ಸ್ವಗ್ರಾಮಗಳಿಗೆ ಬಂದಿದ್ದಾರೆ. ಅಂತವರನ್ನು ಗುರುತಿಸಿ ವೈಧ್ಯಕೀಯ ತಪಾಸನೇ ಮಾಡಿಸಿ. ಎಲ್ಲರು ಸಾಮಾಜಿಕ ಅಂತರ ಕಾಯ್ದುಕೊಂಡು ವೈರಸ್ ಹರಡದಂತೆ ಜಾಗೃತೆವಹಿಸಿ ಎಂದು ತಾಪಂ ಇಒ ರವೀಂದ್ರ ಬಂಗಾರೆಪ್ಪನವರವರ ಹೇಳಿದರು.ಅವರು ಬುಧವಾರ ಗ್ರಾಮದಲ್ಲಿ ಕರೊನಾ ವೈರಸ್ ಹರಡುವಿಕೆ ತಡೆಯಲು ನೂತನವಾಗಿ ರಚನೆಯಾದ ಗ್ರಾಮದ ಕಾವಲು ಪಡೆಯ ಸ್ವಯಂ ಸೇವಕರನ್ನುದ್ದೇಶಿಸಿ ಮಾತನಾಡಿ, ನ್ಯಾಯಬೆಲೆ ಅಂಗಡಿ, ರೇಷನ್ ಅಂಗಡಿ, ಬ್ಯಾಂಕಗಳಿಗೆ ಜನರು ಬಂದಾಗ ಅಂತರ ಕಾಯ್ದುಕೊಳ್ಳುವಂತೆ ತಿಳಿಸಬೇಕು. ಪ್ರತಿಯೊಬ್ಬರು ಮಾಸ್ಕ ಧರಿಸುವಂತೆ ತಿಳಿಸಬೇಕು. ಅಗತ್ಯ ವಸ್ತುಗಳನ್ನು ಮಾರಾಟ ಮಾಡುವ ವ್ಯಾಪಾರಿಗಳು ಜನರಿಂದ ದುಪ್ಪಟ್ಟು ಹಣ ಪಡೆಯುತ್ತಿದ್ದರೆ ಅಂತವರ ವಿರುದ್ಧ ಕ್ರಮ ಜರುಗಿಸಬೇಕು. ತಕ್ಷಣ ಅವರ ಲೈಷನ್ಸ್ ರದ್ದು ಪಡಿಸಬೇಕು. ಗ್ರಾಮಗಳಿಗೆ ಬೇರೆಡೆಯಿಂದ ಬಂದವರನ್ನು ವೈದ್ಯಕೀಯ ಪರಿಕ್ಷೆಗೊಳಪಡಿಸಿ ಅವರು ಕುಟುಂಬಸ್ಥರಿAದ ಹಾಗೂ ಜನರಿಂದ 15 ದಿನ ಅಂತರ ಕಾಯ್ದುಕೊಳ್ಳುವಂತೆ ನೋಡಿಕೊಳ್ಳಬೇಕು ಎಂದರು.ಪಿಡಿಒ ಎ. ಜಿ. ಎಡಕೆ ಮಾತನಾಡಿ, ಕರೊನಾ ವೈರಸ್ ಬಗ್ಗೆ ಸಾರ್ವಜನಿಕರು ಜಾಗೃತೆವಹಿಸುವುದು ಅತಿ ಮುಖ್ಯ. ದೇವಸ್ಥಾನ, ಸಮುಧಾಯ ಭವನದ ಕಟ್ಟೆಯ ಮೇಲೆ ಗುಂಪು ಗುಂಪಾಗಿ ಕೂಡ್ರುವುದು, ನಿಂತುಕೊಳ್ಳುವುದು ಮಾಡಬಾರದು. ಎಲ್ಲರು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಜನರಲ್ಲಿ ಜಾಗೃತೆ ಮುಡಿಸಲಾಗುತ್ತಿದೆ. ಕಾರ್ಯಪಡೆಯ ಸ್ವಯಂ ಸೇವಕರು ಕರೊನಾ ವೈರಸ್ ಕುರಿತು ಜನರಲ್ಲಿ ಜಾಗೃತೆ ಮುಡಿಸಿ ಎಂದರು.ಕಾರ್ಯದರ್ಶಿ ಜೀತೇಂದ್ರ ಗದಾಡೆ, ತಾಪಂ ನರೇಗಾ ಸಹಾಯಕ ನಿರ್ಧೇಶಕರು ಅರುಣ ಮಾಚಕನೂರ, ತಾಪಂ ಸಿಬ್ಬಂದಿ ವಿಶ್ವನಾಥ ಮೋರೆ, ಆರೋಗ್ಯ ಇಲಾಖೆ ಎಎಮ್‌ಎನ್ ಎನ್. ಶಾಲಿನಿ, ಎಮ್. ಪಿ. ಪಾಟೀಲ, ಅಂಗನವಾಡಿ ಕಾರ್ಯಕರ್ತೆ ಶಾಂತಾ ಕಟ್ಟಿಮನಿ, ಮಾಲಾ ಕಾಂಬಳೆ, ದ್ರಾಕ್ಷಾಯಣಿ ಕಾಂಬಳೆ ಇದ್ದರು. Share