ಮೂಡಲಗಿಯ ನಾಗಲಿಂಗ ನಗರದಲ್ಲಿ ದಿನಸಿ ವಸ್ತುಗಳು ಮತ್ತು ತರಕಾರಿ ವಸ್ತುಗಳನ್ನು ಬಸವೇಶ್ವರ ಟ್ರಸ್ಟ್ ಕಮೀಟಿ ಮತ್ತು ನಾಗಲಿಂಗೇಶ್ವರ ಟ್ರಸ್ಟ್ ಕಮೀಟಿ ಇವುಗಳ ಸಂಯುಕ್ತ ಆಶ್ರಯದಲ್ಲಿ ವಿತರಿಸಲಾಯಿತು.

ಮೂಡಲಗಿ : ಕೊರೊನಾ ವೈರಸ್‍ದಿಂದ ಲಾಕ್‍ಡೌನ್ ಹಿನ್ನಲೆಯಲ್ಲಿ ಇಲ್ಲಿಯ ಬಸವೇಶ್ವರ ಟ್ರಸ್ಟ್ ಕಮೀಟಿ ಮತ್ತು ನಾಗಲಿಂಗೇಶ್ವರ ಟ್ರಸ್ಟ್ ಕಮೀಟಿ ಇವುಗಳ ಸಂಯುಕ್ತ ಆಶ್ರಯದಲ್ಲಿ ವಾರ್ಡ ನಂ. 6 ನಾಗಲಿಂಗ ನಗರದ ಸುಮಾರು 250 ಕುಟುಂಬಗಳಿಗೆ ದಿನಸಿ ವಸ್ತುಗಳನ್ನು ಮತ್ತು ತರಕಾರಿ ವಸ್ತುಗಳನ್ನು ಬಡವ ಶ್ರೀಮಂತ ಎನ್ನದೆ ಪ್ರತಿಯೊಬ್ಬರ ಮನೆಗೆ ಹೊಗಿ ವಿತರಿಸಲಾಯಿತು.
ಈ ಸಂದರ್ಭದಲ್ಲಿ ದಾನಿಗಳಾದ ಮಲ್ಲಪ್ಪಾ ತೇಲಿ, ಶಿವಬಸು ಬೆಳಕೂಡ, ಶ್ರೀಶೈಲ ಗಾಣಿಗೇರ, ರಾಜಾರಾಮ ಸುವಾಲ್ಕ, ಭೀಮಪ್ಪಾ ಡವಳೇಶ್ವರ, ಸುಭಾಸ ಚಿಕ್ಕೋಡಿ, ಶಿವಲಿಂಗ ಹಾದಿಮನಿ, ಪ್ರಕಾಶ ಕೊಟಗಿ ಹಾಗೂ ಕಮೀಟಿಯ ಸರ್ವ ಸದಸ್ಯರು ಭಾಗಿಯಾಗಿದ್ದರು.
Share
WhatsApp
Follow by Email