ರಬಕವಿ : ಶ್ರೀನಿಧಿ ಬ್ಯಾಂಕಿನಿಂದ ಮುಖ್ಯಮಂತ್ರಿ ಪರಿಹಾರ ನಿಧಿಗೆ ಒಂದು ಲಕ್ಷ ರೂ,ದೇಣಿಗೆ

ರಬಕವಿ-ಬನಹಟ್ಟಿ: ರಬಕವಿ ಶ್ರೀನಿಧಿ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸಾಯಿಟಿ ಇವರು ಕೋವಿಡ್ ೧೯ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಒಂದು ಲಕ್ಷ ರೂಪಾಯಿಯ ಚೆಕ್‌ನ್ನು ಶ್ರೀನಿಧಿ ಬ್ಯಾಂಕಿನ ಚೇರಮನ್ ಮಲ್ಲಿಕಾರ್ಜುನ ಬ. ನಾಶಿ ಚೆಕ್‌ನ್ನು ರಬಕವಿ-ಬನಹಟ್ಟಿ ತಹಶೀಲ್ದಾರ ಪ್ರಶಾಂತ ಚನಗೊಂಡ ಇವರಿಗೆ ಇಂದು ನೀಡಿದರು.
ಉಪ ತಹಶೀಲ್ದಾರ ಸದಾಶಿವ ಕಾಂಬಳೆ, ರಬಕವಿ-ಬನಹಟ್ಟಿ ನಗರಸಭೆಯ ಪೌರಾಯುಕ್ತ ಶ್ರೀನಿವಾಸ ಜಾಧವ, ರಬಕವಿ-ಬನಹಟ್ಟಿ ನಗರ ಘಟಕದ ಬಿಜೆಪಿ ಅಧ್ಯಕ್ಷ ಧರೇಪ್ಪ ಉಳ್ಳಾಗಡ್ಡಿ, ಬ್ಯಾಂಕಿನ ಉಪಾಧ್ಯಕ್ಷ ಮಲ್ಲಕಾಜಪ್ಪ ಸಾಬೋಜಿ, ಡಾ. ಜಿ.ಎಚ್.ಚಿತ್ತರಗಿ, ಸೋಮಶೇಖರ ಕೊಟ್ರಶೆಟ್ಟಿ, ಅಂದಾಣಿ ಮುತ್ತೂರ, ಬಸವರಾಜ ತೆಗ್ಗಿ, ಎಸ್.ಜಿ.ಅಮ್ಮಣಗಿಮಠ, ಬಸವರಾಜ ಬೆಣ್ಣಿ ಸೇರಿದಂತೆ ಇತರರು ಇದ್ದರು.
Share
WhatsApp
Follow by Email