
ಇಲ್ಲಿನ ಕಾಳಿಕಾಂಬ ದೇವಾಲಯ ಬಳಿ.ಪೇಟೆಬೀದಿ ಮುಖ್ಯದ್ವಾರ.ಆನೆಕೆರೆ ಬೀದಿಯ ಎಂಟ್ರಿ ದ್ವಾರಗಳಲ್ಲಿ ರಸ್ತೆಗೆ ಅಡೆತಡೆ ನಿರ್ಮಿಸಲಾಗಿದೆ.
ಇದರಿಂದಾಗಿ ತುರ್ತುವಾಹನಗಳ ಸಂಚಾರಕ್ಕು ಅಡ್ಡಿಯುಂಟಾಗುತ್ತಿದ್ದು ಪೋಲಿಸರು ಮೌನ ಪ್ರೇಕ್ಷಕರಾಗಿದ್ದಾರೆ.
ಇನ್ನುಳಿದಂತೆ ಮಂಡ್ಯ ಜಿಲ್ಲೆಯಲ್ಲಿ ಊರುಬೀಗದ ಕಟ್ಟುನಿಟ್ಟಿನ ಜಾರಿಗೆ ಜಿಲ್ಲಾಡಳಿತ ಬಿಗಿಯಾದ ಕ್ರಮಗಳನ್ನು ಕೈಗೊಂಡಿದೆ.
ಮಂಡ್ಯದ ಸ್ವರ್ಣಸಂದ್ರ ಹತ್ತಿರ ಇರುವ ಚೆಕ್ ಪೋಸ್ಟ್ ಗೆ ಇಂದು ಮಂಡ್ಯ ಜಿಲ್ಲಾಧಿಕಾರಿ ಡಾ. ಎಂ. ವಿ. ವೆಂಕಟೇಶ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪರುಷ ರಾಮ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಚೆಕ್ ಪೋಸ್ಟ್ ತಪಾಸಣೆ ನಡೆಸಿ ತುರ್ತು ಪರಿಸ್ಥಿತಿಯಲ್ಲಿ ಇರುವವರಿಗೆ ಹೋಗಲು ಅನುವು ಮಾಡಿಕೊಟ್ಟು ಉಳಿದವರಿಗೆ ವಾಪಸ್ ಕಳುಹಿಸಲಾಯಿತು.
ಅಲ್ಲದೇ ಇದೇ ಸಂದರ್ಭದಲ್ಲಿ ಮಂಡ್ಯ ಸ್ವರ್ಣಸಂದ್ರ ವಾರ್ಡ್ ಗಳ ಕಂಟೈನ್ ಮೆಂಟ್ ಝೋನ್ ಎಂದು ಘೋಷಸಿರುವ ಹಿನ್ನೆಲೆಯಲ್ಲಿ ಮನೆ ಮನೆಗಳಿಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿ ಜಿಲ್ಲಾಧಿಕಾರಿಗಳು ಅವರಿಗೆ ಬೇಕಾದ ದಿನಸಿ, ತರಕಾರಿ ಹಾಗೂ ಹಣ್ಣು ತಲುಪಿಸಲು ಅಗತ್ಯ ಕ್ರಮವಹಿಸ ಲಾಗುವುದು ಹಾಗೂ ಜನರು ಯಾರು ಕೂಡ ಹೊರಗೆ ಬರಬಾರದು ಎಂದು ಜಾಗೃತಿ ಮೂಡಿಸಿ ಅವರಿಂದ ಅಹವಾಲು ಸ್ವೀಕರಿಸಿದರು.
ವರದಿ :ಕೃಪ ಸಾಗರ್ ಗೌಡ .
ಎಲ್