ಸಿಡಿಲು ಬಡಿದು ಸಾವನಪ್ಪಿದ್ದ ರೈತನಿಗೆ :5 ಲಕ್ಷಗಳ ಚೇಕ್ ವಿತರಣೆ

ಮುದ್ದೇಬಿಹಾಳ: ತಾಲೂಕಿನ ಹಳ್ಳೂರ ಗ್ರಾಮದ ತನ್ನ ಹೊಲದಲ್ಲು ಕುರಿ ಮೇಯಿಸಲು ಹೋಗಿದ್ದ ಸಂದರ್ಭದಲ್ಲಿ ಸಿಡಿಲು ಬಡಿದು ಸಾವನಪ್ಪಿದ್ದ ರೈತ ಗುಂಡಪ್ಪ ಸಕ್ರೇಪ್ಪ ಬ್ಯಾಲಾಳ ಇವರ ಕುಟುಂಭಕ್ಕೆ ಶಾಸಕ ಎ ಎಸ್ ಪಾಟೀಲ(ನಡಹಳ್ಳಿ) ಅವರು ಗುರುವಾರ ಸರಕಾರದಿಂದ 5 ಲಕ್ಷಗಳ ವಿಶೇಷ ಪರಿಹಾರದ ಚೇಕ್ ನೀಡಿದರು. ಈ ವೇಳೆ ತಹಶೀಲ್ದಾರ ಜಿ ಎಸ್ ಮಳಗಿ, ಸಿಪಿಐ ಆನಂದ ವಾಗ್ಮೋರೆ, ಡವಳಗಿ ಗ್ರಾಪಂ ಅಧ್ಯಕ್ಷ ಕಾಶಿನಾಥ ಕೊಣ್ಣೂರ, ಸರ್ಕಲ್ ಎಸ್ ಕೆ ಪಾಟೀಲ, ಗ್ರಾಮಲೆಕ್ಕಾಧಿಕಾರಿ ರಿಯಾಜ ನಾಯ್ಕೋಡಿ, ಆನಂದ ಹಿರೇಮಠ ಸೇರಿದಂತೆ ಮತ್ತಿತರರು ಇದ್ದರು.
Share
WhatsApp
Follow by Email