
ಹಿಪ್ಪರಗಿ ಆಣೆಕಟ್ಟಿನ ಕೃಷ್ಣಾ ನದಿ ಹಿನ್ನೀರನ್ನು ರಬಕವಿ-ಬನಹಟ್ಟಿ, ಅಥಣಿ, ಕಾಗವಾಡ, ಕುಡಚಿ ಹಾಗೂ ಜಮಖಂಡಿ ತಾಲೂಕಿನ ಸುಮಾರು 100 ಗ್ರಾಮಗಳ ಜಾನುವಾರಗಳಿಗೆ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತಿದೆ. ನೀರನ್ನು ಕೆಳಭಾಗದಲ್ಲಿ ಹರಿಸುವದರಿಂದ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸುತ್ತದಲ್ಲದೆ ಜಾನುವಾರುಗಳಿಗೆ ನೀರನ ಸಮಸ್ಯೆಯುಂಟಾಗುತ್ತದೆ. ಅಲ್ಲದೆ ಬೇಸಿಗೆಯಲ್ಲಿ ನೀರಿನ ಅಭಾವ ಉಂಟಾಗದಿರಲು ಮಹಾರಾಷ್ಟ್ರದ ಕೋಯ್ನಾ ಆಣೆಕಟ್ಟಿನಿಂದ ಅಥವಾ ಬೇರೆ ಜಲಾಶಯದಿಂದ 2 ಟಿ.ಎಂ.ಸಿ. ನೀರನ್ನು ಬಿಡಿಸಬೇಕೆಂದು ರಬಕವಿ-ಬನಹಟ್ಟಿ ನಗರ ಬಿಜೆಪಿ ಘಟಕ ವತಿಯಿಂದ ಬಾಗಲಕೋಟೆ ಜಿಲ್ಲಾಧಿಕಾರಿಗಳಿಗೆ ರಬಕವಿ-ಬನಹಟ್ಟಿ ತಹಶೀಲ್ದಾರ ಪ್ರಶಾಂತ ಚನಗೊಂಡ ಅವರಿಗೆ ಮನವಿ ಅರ್ಪಿಸಲಾಯಿತು.
ಉಪ ತಹಶೀಲ್ದಾರ ಸದಾಶಿವ ಕಾಂಬಳೆ, ಬಸವರಾಜ ತಾಳಿಕೋಟಿ, ರಬಕವಿ-ಬನಹಟ್ಟಿ ನಗರ ಘಟಕದ ಬಿಜೆಪಿ ಅಧ್ಯಕ್ಷ ಧರೇಪ್ಪ ಉಳ್ಳಾಗಡ್ಡಿ, ನಗರಸಭಾ ಸದಸ್ಯರಾದ ಶಿವಾನಂದ ಬುದ್ನಿ, ವಿಶ್ವನಾಥ ಸವದಿ, ಅರುಣ ಬುದ್ನಿ, ಸಂಜಯ ತೆಗ್ಗಿ, ಯೂನಸ ಚೌಗಲಾ, ಯಲ್ಲಪ್ಪ ಕಟಗಿ, ರವಿ ಕೊರ್ತಿ, ಆಲಗೂರ, ಶಿವಾನಂದ ಕಾಗಿ, ಪರಶುರಾಮ ಕಾಖಂಡಕಿ, ಚಿದಾನಂದ ಹೊರಟ್ಟಿ, ಪ್ರಭಾಕರ ಮೂಳೇದ ಸೇರಿದಂತೆ ಇತರರು ಇದ್ದರು.