ಹಿಪ್ಪರಗಿ ಬ್ಯಾರೇಜ್ ನಿಂದ ಕೃಷ್ಣಾ ನದಿ ನೀರನ್ನು ಹರಿಸಿದರೆ ಉಗ್ರ ಹೋರಾಟದ ಎಚ್ಚರಿಕೆ

ಅಥಣಿ: ಪ್ರತಿ ಬೇಸಿಗೆಯಲ್ಲಿ ಕೃಷ್ಣಾ ನದಿ ತೀರದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗುತ್ತಿದೆ. ಒಂದು ವೇಳೆ ಹಿಪ್ಪರಗಿ ಬ್ಯಾರೇಜ್ ನಿಂದ ನೀರು ಹರಿಸುವದಾದರೆ ಮೊದಲು ಎಮ್ ಒ ವಿ ಒಪ್ಪಂದ ಮಾಡಿಕೊಂಡು ಮಹಾರಾಷ್ಟ್ರ ರಾಜ್ಯದಿಂದ ನಾಲ್ಕು ಟಿಎಮ್ ಸಿ ನೀರು ತರಿಸಬೇಕು.
ಸತ್ತಿ ಗ್ರಾಮದ ಹೊರವಲಯದ ಜೀರೊ ಪಾಯಿಂಟ್ ಮೂಲಕ ಹಿಪ್ಪರಗಿ ಬ್ಯಾರೇಜ್ ನಿಂದ ನೀರು ಹರಿಸಿದರೆ ಈ ಭಾಗದ ರೈತರಿಗೆ ತೊಂದರೆ ಆಗುತ್ತದೆ.
ಪ್ರಾದೇಶಿಕ ಆಯುಕ್ತ ಆಮ್ಲನ್ ಆದಿತ್ಯ ಬಿಸ್ವಾಸ ಅವರು ಈ ಭಾಗದ ರೈತರ ಮತ್ತು ಜನರ ಸಂಕಷ್ಟವನ್ನು ಅರಿಯದೆ ಮನಸಿಗೆ ಬಂದAತೆ ಆದೇಶ ಮಾಡುತ್ತಿದ್ದಾರೆ.ಒಂದು ವೇಳೆ ಜನರ ಹಿತ ಮರೆತು ಬೇಕಾಬಿಟ್ಟಿ ನೀರು ಹರಿಸಿದ್ದೇ ಆದಲ್ಲಿ ಕೃಷ್ಣಾ ನದಿ ನೀರು ಮತ್ತು ರೈತ ಅಭಿವೃದ್ಧಿ ಸೇವಾ ಸಮಿತಿಯಿಂದ ಉಗ್ರ ಹೋರಾಟ ಮಾಡಬೇಕಾಗುತ್ತದೆ
ಎಂದು ಬಸನಗೌಡ ಬಮ್ನಾಳ ಪಾಟೀಲ ಎಚ್ಚರಿಸಿದ್ದಾರೆ.
ನೀರಾವರಿ ಇಲಾಖೆಯ ಅಧಿಕಾರಿಗಳು ಅಥಣಿ ತಾಲೂಕಿನ ಜನರ ಹಿತ ಕಾಯದೆ ಹಿಪ್ಪರಗಿ ಬ್ಯಾರೇಜಿನ ನೀರನ್ನು ಹರಿಸಿದ್ದೇ ಆದಲ್ಲಿ ಈ ಭಾಗದ ಜನಜೀವನಕ್ಕೆ ತೊಂದರೆ ಆಗುತ್ತದೆ ಅಲ್ಲದೆ ಜಾನುವಾರುಗಳಿಗೆ ಮೇವಿನ ಕೊರತೆ ಕೂಡ ಉಂಟಾಗಲಿದ್ದು ಕೂಡಲೇ ಸ್ಪಂದಿಸದಿದ್ದರೆ ಲಾಕ್ ಡೌನ ಇದ್ದರೂ ಕೂಡ ಬೀದಿಗೆ ಇಳಿದು ಹೊರಾಟ ಮಾಡುವ ಅನಿವಾರ್ಯತೆ ಎದುರಾಗುತ್ತದೆ ಆದ್ದರಿಂದ ಯಾವುದೇ ಕಾರಣಕ್ಕು ಮಹಾರಾಷ್ಟ್ರ ದಿಂದ ಕೃಷ್ಣಾ ನದಿಗೆ ನಾಲ್ಕು ಟಿ ಎಮ್ ಸಿ ನೀರು ಬರುವವರೆಗೆ ಹಿಪ್ಪರಗಿ ಬ್ಯಾರೇಜ್ ನಿಂದ ನೀರನ್ನು ಹೊರಗೆ ಹರಿಸಬಾರದು ಎಂದು ಕೃಷ್ಣಾ ನದಿ ನೀರು ಮತ್ತು ರೈತ ಅಭಿವೃದ್ಧಿ ಸಮೀತಿಯ ಅಧ್ಯಕ್ಷ ಬಸನಗೌಡ ಬಮ್ನಾಳ ಪಾಟೀಲ ನೀರಾವರಿ ನಿಗಮದ ಅಧಿಕಾರಿಗಳಿಗೆ ಮನವಿ ಸಲ್ಲಿಸುವ ಮೂಲಕ ಆಗ್ರಹಿಸಿದ್ದಾರೆ.
ಅಥಣಿ ಪಟ್ಟಣದ ನೀರಾವರಿ ನಿಗಮ ಕಚೇರಿಯ ಅಭಿಯಂತರ ಅರುಣ ಎಲಗುದ್ರಿ ಅವರಿಗೆ ಕೃಷ್ಣಾ ನದಿ ನೀರು ಮತ್ತು ರೈತ ಅಭಿವೃದ್ಧಿ ಸೇವಾ ಸಮೀತಿಯಿಂದ ಮನವಿ ಸಲ್ಲಿಸಲಾಯಿತು.
ಈ ವೇಳೆ ವಿಜಯಕುಮಾರ ಅಡಹಳ್ಳಿ. ಮಹಾಂತೇಶ ಬಾಡಗಿ. ಪ್ರದೀಪ ನಂದಗಾAವ. ಯಾಸೀನ್ ಝಾರೆ. ಸೇರಿದಂತೆ ಹಲವರು ಉಪಸ್ಥಿತರಿದ್ದರು
Share
WhatsApp
Follow by Email