ಇನ್ನೂ ಎರಡು ವಾರಗಳ ಕಾಲ ಲಾಕ್ ಡೌನ್ ಪಕ್ಕಾ

ಕೊರೋನೊ ವಿರುದ್ದ ಹೊರಾಡಲು ಲಾಕ್‌ಡೌನ್ ಅನಿವಾರ್ಯ: ಸಿಎಂ ಯಡಿಯೂರಪ್ಪ
ಬೆಂಗಳೂರು
ಕರ್ನಾಟಕದಲ್ಲಿ ಇನ್ನೂ ಎರಡುವಾರಗಳ ಕಾಲ ಲಾಕ್‌ಡೌನ್ ಪಕ್ಕಾ ಇರುತ್ತದೆ. ಆದರೆ ಮಾರ್ಗಸೂಚಿ ಮಾತ್ರ ಬದಲಾಗುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಶನಿವಾರ ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ವಿಡಿಯೋ ಕಾನ್ಪರೇನ್ಸ್ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿ ನಾಲ್ಕು ಗಂಟೆಗಳ ಕಾಲ ಎಲ್ಲ ಸಿಎಂಗಳ ಜತೆ ದೇಶದಲ್ಲಿ ಕೋವಿಡ್ 19 ಪ್ರಕರಣ ಹೆಚ್ಚುತ್ತಿರುವ ಕುರಿತು ಕಳವಳ ವ್ಯಕ್ತಪಡಿಸಿದರು. ಇಲ್ಲಿಯವರೆಗೆ 2.84 ಲಕ್ಷ ಪಿಪಿಇ ಕಿಟ್‌ಗಳನ್ನು ವಿತರಿಸಲಾಗಿದೆ.
ಪರೀಕ್ಷೆ ಪ್ರಯೋಗಾಲಯಗಳ ಸಂಖ್ಯೆ 220ಕ್ಕೆ ಹೆಚ್ಚಿಸಲಾಗಿದೆ. ಪ್ರಸ್ತುತ ದಿನಕ್ಕೆ ಎಲ್ಲಾ ಬಗೆಯ ಸೌಕರ್ಯವನ್ನು ಒದಗಿಸಲು ಕೇಂದ್ರ ಸದ್ದವಾಗಿದೆ. ಆಯಾ ರಾಜ್ಯಗಳ ಸ್ಥಿತಿ ತಿಳಿದುಕೊಂಡಿದ್ದಾರೆ.
ಏ.30ರೊಳಗೆ ಪರೀಕ್ಷೆ ಪ್ರಯೋಗಾಲಯಗಳನ್ನು ಮುಂದುವರೆಸಲಾಗುತ್ತಿದೆ. ಮೇ.30ರವರೆಗೆ ಪ್ರತಿ ದಿನ ಒಂದು ಲಕ್ಷ ಪರೀಕ್ಷೆ ಮಾಡಿಸಲಾಗುವುದು ಎಂದು ಹೇಳಿದರು. ಇದಕ್ಕೆ ಎಲ್ಲ ರಾಜ್ಯಗಳ ಸಿಎಂ ಒಪ್ಪಿಗೆ ಸೂಚಿಸಿದರು.
ಲಾಕ್‌ಡೌನ್ ನಿಯಮವನ್ನು ಇನಷ್ಟು ಕಟ್ಟುನಿಟ್ಟಾಗಿ ಪಾಲಿಸುವಂತೆ ಪ್ರಧಾನಿ ನರೇಂದ್ರ ಮೋದಿ ಸೂಚಿಸಿದರು. ಯಾವುದೇ ಕಾರಣಕ್ಕೂ ಲಾಕ್‌ಡೌನ್ ಸಡಿಲುಗೊಳಿಸಬಾರದು. ಲಾಕ್‌ಡೌನ್ ವಿಷಯಕ್ಕೆ ಯಾವುದೇ ಮಾರ್ಗಸೂಚಿಗಳನ್ನು ಸೂಚಿಸುವುದಾಗಿ ಹೇಳಿದ್ದಾರೆ. ಬಹುತೇಕ ಏ.30 ವರೆಗೆ ಲಾಕ್‌ಡೌನ್ ವಿಸ್ತರಿಸಲಾಗಿದೆ.
ಕೇಂದ್ರ ಸರಕಾರ ಸಂಪೂರ್ಣ ರಾಜ್ಯಗಳೊಂದಿಗೆ ಇದೆ. ವೈದ್ಯಕೀಯ ಸಿಬ್ಬಂದಿಗಳೊAದಿಗೆ ಅನುಚಿತವಾಗಿ ವರ್ತಿಸುವವರ ಸಹಿಸುವುದಿಲ್ಲ. ಮುಂದಿನ ಎರಡು ವಾರ ಲಾಕ್‌ಡೌನ್ ಹಿಂದಿನ ಲಾಕ್‌ಡೌನ್‌ಗಳಿಂದ ವಿಭಿನ್ನವಾಗಿರುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು.
ಸರಕಾರಿ ಕಚೇರಿಗಳನ್ನು ನಡೆಸಲು ಬಾಹಃಶ ನಡೆಸಲು ಅನುಮತಿ ನೀಡಲಾಗುತ್ತದೆ. ರಾಜ್ಯದಲ್ಲಿ ಒಟ್ಟು ಏಳು ಪ್ರಕರಣಗಳು ವರದಿಯಾಗಿವೆ. ಲಾಕ್‌ಡೌನ್ ಅನುಷ್ಠಾನಕ್ಕೆ ಕಟ್ಟುನಿಟ್ಟು ಕ್ರಮ ಕೈಗೊಳ್ಳಲಾಗಿದೆ.
ಆರೋಗ್ಯ ಸಚಿವ ಬಿ. ಶ್ರೀರಾಮುಲು, ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು
Share
WhatsApp
Follow by Email