
ಬಸವಪ್ರಸಾದ ಜೊಲ್ಲೆ ಮಾತನಾಡಿ .ಚಿಕೋಡಿ ಲೋಕಸಭಾ ಕ್ಷೇತ್ರದಲ್ಲಿ ಸುಮಾರು 15 ಕೊರೋನಾ ಹಾಟ್‌ಸ್ಪಾಟ್‌ಗಳನ್ನು ನಾವು ಗುರುತಿಸಿದ್ದೇವೆ, ಈಗಾಗಲೇ 3 ಘಟಕಗಳನ್ನು ಉದ್ಘಾಟಿಸಿದ್ದೇವೆ. ಮುಂದಿನ 3 ದಿನಗಳಲ್ಲಿ 12 ಯಂತ್ರಗಳನ್ನು ಅಳವಡಿಸಲಾಗುವುದು.
ದೇಶದಾದ್ಯಂತ ಮತ್ತು ನಮ್ಮ ರಾಜ್ಯದಲ್ಲಿ ಕೂಡ ಕೊರೋನಾ ವೈರಸ್ ಮಹಾಮಾರಿ ಹಾವಳಿ ಹೆಚ್ಚಾಗಿದ್ದರಿಂದ ಎಲ್ಲರಿಗೂ ಸ್ಯಾನಿಟೈಜರ್ ಮುಖ್ಯ. ಪೊಲೀಸರು ವೈದ್ಯರು, ಹಾಗೂ ಪೌರಕಾರ್ಮಿಕರು ತಮ್ಮ ಜೀವದ ಹಂಗು ತೊರೆದು ಕಾರ್ಯನಿರ್ವಹಿಸುತ್ತಿದ್ದಾರೆಂದು ಹೇಳಿದರು.
ಈ ಸಂದರ್ಭದಲ್ಲಿ ಬೀರೇಶ್ವರ ಸಂಸ್ಥೆಯ ನಿದೇ೯ಶಕರಾದ ಶ್ರೀ ಅಪ್ಪಾಸಾಹೇಬ ಜೊಲ್ಲೆ, ಜ್ಯೋತಿ ಸಂಸ್ಥೆಯ ನಿದೇ೯ಶಕರಾದ ಶ್ರೀ ಕಲ್ಲಪ್ಪ ಜಾಧವ, ಶ್ರೀ ಲಕ್ಷ್ಮಣ ಕಬಾಡೆ, ಶ್ರೀ ಬಸವರಾಜ ಗುಂಡಕಲ್ಲೆ, ಶ್ರೀ ಚೇತನ ಪಾಟೀಲ, ಶ್ರೀ ಅನಿರುದ್ಧ ಪಾಟೀಲ, ಸದಲಗಾ ಪುರಸಭೆ ಮುಖ್ಯಾಧಿಕಾರಿ ಶ್ರೀ ವಿವೇಕ ಜೋಶಿ, ಯಕ್ಸಂಬಾ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶ್ರೀ ಸತ್ಯಪ್ಪಾ ವಡೆಯರ, ಸದಲಗಾ ಪುರಸಭೆ ಸದಸ್ಯರು, ಹಾಗೂ ಯಕ್ಸಂಬಾ ಪಟ್ಟಣ ಪಂಚಾಯತ್ ಸದಸ್ಯರು ಹಾಗೂ ಪೌರಕಾರ್ಮಿಕರು ಉಪಸ್ಥಿತರಿದ್ದರು.