ಪಬ್ಲಿಕ್ ಹೀರೋ ಆಗಿ ಮಿಂಚಿದ : ಪುರಸಭೆ ಸದಸ್ಯ ರಮೇಶ್ ಖೇತಗೌಡರ

ಮುಗಳಖೋಡ : ಚಿಕ್ಕೋಡಿ ಜಿಲ್ಲಾ ಬಿಜೆಪಿ ಪ್ರಧಾನಕಾರ್ಯದರ್ಶಿಗಳು, ಯುವನಾಯಕ ಹಾಗೂ ಮುಗಳಖೋಡ ಪುರಸಭೆ ಸದಸ್ಯ ರಮೇಶ ಖೇತಗೌಡರ ಅವರಿಂದ ಮುಗಳಖೋಡ ಪಟ್ಟಣದ ವಾರ್ಡ್ ನಂ. 2 ರ ಪ್ರತಿ ಕುಟುಂಬಕ್ಕೂ ಸ್ಯಾನಿಟೈಸರ್, ಮಾಸ್ಕ್ ಹಾಗೂ ಕಿರಾಣಿ/ದಿನಸಿ ಸಾಮಾನುಗಳನ್ನು ವಿತರಿಸಲಾಯಿತು.
ಮಹಾಮಾರಿ ಕೊರೋನಾ ವೈರಸ್ ದೇಶದ ತುಂಬಾ ಮರಣ ಮೃದಂಗ ಭರಿಸುತ್ತಿರುವ ಈ ಕೊರೋನಾ ದಿನ ದಿನಕ್ಕೂ ಹೆಚ್ಚು ಹರಡುತ್ತಿದ್ದು, ಭಯಾನಕ ರೋಗವನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ದೇಶದ ಪ್ರಧಾನಮಂತ್ರಿಗಳ ಆದೇಶದ ಮೇರೆಗೆ ದೇಶವೇ ಲಾಕ್‌ಡೌನ್ ಆಗಿದೆ.
ರಮೇಶ್ ಖೇತಗೌಡರ ಮಾತನಾಡಿ ಜನರು ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಳ್ಳಬೇಕು ಹಾಗೂ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳಿಗೆ ಆಶಾ, ಅಂಗನವಾಡಿ ಕಾರ್ಯಕರ್ತೆಯರಿಗೆ ಸಹಕಾರ ನೀಡಬೇಕು ಮತ್ತು ಮೆನೆ ಬಿಟ್ಟು ಹೊರಗೆ ಬರದಿದ್ದರೆ ಅವಾಗಲೇ ಕೊರೋನಾ ವೈರಸ್ ತಡೆಗಟ್ಟಲು ಸಾಧ್ಯ ಎಂದು ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ದಿನಂಪ್ರತಿ ದುಡಿಮೆಯನ್ನೇ ಅವಲಂಬಿಸಿದ ಕುಟುಂಬಗಳಿಗೆ ತುಂಬಾ ತೊಂದರೆಯಾಗುತ್ತಿದ್ದನ್ನು ಕಂಡ ರಮೇಶ ಖೇತಗೌಡರ್ ಅವರು ತಮ್ಮ ಸ್ವಂತಃ ಖರ್ಚಿನಲ್ಲಿಯೇ ಕುಟುಂಬಕ್ಕಾಗುವ ದಿನಸಿ ಸಾಮಾನುಗಳು ಜೊತೆಗೆ ಸ್ಯಾನಿಟೈಸರ್ ಮತ್ತು ಮಾಸ್ಕ್ ನೀಡಿ ಕುಟುಂಬಗಳಲ್ಲಿ ರೋಗದ ಬಗ್ಗೆ ಜಾಗೃತಿ ಮೂಡಿಸಿದರು.
ಈ ರೀತಿ ಬಡಕುಟುಂಬಗಳಿಗೆ ರೇಶನ್ ವಿತರಿಸಿ ಜಾಗೃತಿ ಮೂಡಿಸಿದ ಏಕೈಕ್ ಪುರಸಭೆ ಸದಸ್ಯ ರಮೇಶ ಖೇತಗೌಡರ ಮುಗಳಖೋಡ ಪಟ್ಟಣದಲ್ಲಿ ಪಬ್ಲಿಕ್ ಹೀರೋ ಆಗಿ ಮಿಂಚುತ್ತಿದ್ದಾರೆ.
ಆದರೆ ಉಳಿದೆಲ್ಲ ಪುರಸಭೆ ಸದಸ್ಯರು‌ ಯಾರೂ ಕೂಡಾ ಈ ರೀತಿ ಜನರಿಗೆ ಸ್ಪಂದಿಸಿರುವುದಿಲ್ಲ ಎಂಬುದು ಯಕ್ಷ ಪ್ರಶ್ನೆಯಾಗಿ ಉಳಿದಿದೆ.
ಈ ಸಂದರ್ಭದಲ್ಲಿ ಶಂಕರ್ ಕಡಕಭಾವಿ, ಎಂ.ಎಂ.ಶೇಗುಣಸಿ, ಶಿವಾನಂದ ಕಡಕಭಾವಿ, ಸಿದ್ದು ಕುರಬೇಟ, ಸಿದ್ದು ಕುರಿಮನಿ, ಮುರುಗೇಶ್ ಕಿಡದಾಳ, ಶಿವಲಿಂಗ ಕಡಕಭಾವಿ, ಶ್ರೀಧರ ಕುಂಬಾರ, ಭರಮು ತೇಲಿ, ಹನಮಂತ ಬದ್ನಿಕಾಯಿ, ಅಜ್ಜು ಬನಶಂಕರಿ, ಕಬೀರ್ ಮುಲ್ಲಾ ಸಾಮಾಜಿಕ ಅಂತರ ಕಾಯ್ದುಕೊಂಡು ಬಾಗಿಯಾಗಿದ್ದರು.
Share
WhatsApp
Follow by Email