ರಾಯಬಾಗ : ಅಳಗವಾಡಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಮಾಸ್ಕ್ ವಿತರಣೆ

ರಾಯಬಾಗ : ವಿಧಾನ ಪರಿಷತ್ತ ಸದಸ್ಯ ವಿವೇಕರಾವ ಪಾಟೀಲ ಅವರು ತಾಲೂಕಿನ ಅಳಗವಾಡಿ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯ ಸಿದ್ದಾಪೂರ ಗ್ರಾಮದ ಜನರಿಗೆ ಶನಿವಾರ ಉಚಿತ ಮಾಸ್ಕ್ ವಿತರಿಸಿದರು.
ಗ್ರಾಮ ಪಂಚಾಯ್ತಿ ಸದಸ್ಯ ಮಲಗೌಡ ಪಾಟೀಲ ಅವರು ಮಾಸ್ಕ್ ವಿತರಿಸಿ ಮಾತನಾಡಿ ಕೊರೋನಾ ವೈರಸ್ ಹರಡುವಿಕೆಯನ್ನು ತಡೆಯುವಗೋಸ್ಕರ ಪ್ರತಿಯೊಬ್ಬರು ಮುಖಕ್ಕೆ ಮಾಸ್ಕ್ ಹಾಕಿಕೊಳ್ಳಬೇಕು. ವಿಧಾನ ಪರಿಷತ್ತ ಸದಸ್ಯ ವಿವೇಕರಾವ ಪಾಟೀಲ ಅವರು ಉಚಿತವಾಗಿ ಗ್ರಾಮಸ್ಥರಿಗೆ ಮಾಸ್ಕ್ ಕೊಟ್ಟಿದ್ದಾರೆ ಜನರು ಅದರ ಉಪಯೋಗ ಮಾಡಿಕೊಳ್ಳಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾ.ಪಂ.ಉಪಾಧ್ಯಕ್ಷ ಮೌಲಾ ಚಿಂಚಲಿ, ಸದಸ್ಯರಾದ ಮಲಗೌಡ ಪಾಟೀಲ, ಪ್ರಕಾಶ ಗಸ್ತಿ, ಕುಮಾರ ಆರಗೆ, ಸುರೇಶ ಪಾಟೀಲ, ಮುರಗೆಪ್ಪ ಬುಲಬುಲಿ, ಬುದ್ದಾ ಸನದಿ ಸೇರಿದಂತೆ ಅನೇಕರು ಇದ್ದರು
Share
WhatsApp
Follow by Email