ಬ್ರೇಕಿಂಗ್ ನ್ಯೂಸ್ 4 ಎಕರೆ ಗೋವಿನ ಜೋಳ ನಾಶವಾಗುತ್ತಿರುವ ಹಿನ್ನಲೆ ರೈತ ಕಂಗಾಲು 11/04/202011/04/20201 min read admin ವಿಶೇಷ ವರದಿ ಯಲ್ಲಪ್ಪ ಮಬನೂರಚಿಕ್ಕೋಡಿ :- ಕೊರೊನಾ ವೈರಸ್ ಇದು ಜಗತ್ತಿನಾದ್ಯಾಂತ್ಯ ಹೆಮ್ಮಾರಿಯಾಗಿ ಬೆಳೆದು ನಿಂತಿದೆ . ಮಾನವ ಕುಲಕ್ಕೆ ಬೆನ್ನಿಗೆ ಬಿದ್ದ ಬೇತಾಳ ದಂತೆ ಕಾಡುತ್ತಿದೆ ಇತ್ತಿಚಿನ ದಿನಗಳ ಪಿಜಾ ,ಬರಗರ, ತಯಾರಿಸಲು ಉಪಯೊಗಿಸುತ್ತಿರುವ ಬೆಬಿ ಕಾರ್ನರ ಎಂಬ ಗೊವಿನ ಜೋಳದ ( ಮುಸಕಿನ ಜೋಳ)ಬೆಳೆ ಬೇಳೆದು ನಿಂತಿದ್ದು ಈಗ ಕೊರೊನ್ ವೈರಸ್ ನಿಂದ 4 ಎಕರೆ ಜಮೀನಿನಲ್ಲಿ ಬೆಳೆದ ಬೇಳೆ ನಾಶವಾಗುತ್ತಿದೆ.ರೈತರು ಕಷ್ಟಪಟ್ಟು ಬೇಬಿ ಕಾರ್ನರ ಬೇಳೆದಿದ್ದು ಈ ಬೆಬಿ ಕಾರ್ನರ್ ನೆರೆಯ ಮಹಾರಾಷ್ಟ್ರ ರಾಜ್ಯದ ಮಿರಜ ತಾಲೂಕಿನ ಅರಗ ಎಂಬ ಕಾರ್ಖಾನೆಗೆ ಸಾಗಟವಾಗುತ್ತಿತ್ತು ಇದು ಬೇಬಿ ಕಾರ್ನರ ಚೈನಿಸ್ ಪುಡ್ ತಯಾರಿಕೆ ಗೆ ಅವಶ್ಯಕ ಇದ್ದು ಇಲ್ಲಿಯ ರೈತರು ಇಂತಹ ಬೆಳೆ ಬೆಳೆದು ಮಾರಾಟ ಮಾಡಿ ತಮ್ಮ ಉಪಜೀವನ ಸಾಗಿಸುತ್ತಿದ್ದರು,ಇಂತಹ ಘಟನೆ ಕಂಡುಬಂದಿದ್ದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಬೆಳಕೊಡ ಗ್ರಾಮದಲ್ಲಿ .ಈ ಬೆಳೆ ಬೆಳೆದ ರೈತರಾದ ಶಿವಶಂಕರ ಹೀರೆಮಠ ಮತ್ತು ಅಪ್ಪಯ್ಯ ಹೀರೆಮಠ ಇವರು ಸುಮಾರು 4 ಎಕ್ಕರೆ ಹೊಲದಲ್ಲಿ ಬೆಬಿ ಕಾರ್ನರ ಬೆಳೆ ಬೇಳೆದ್ದಿದ್ದು ಇದೀಗ ಸರಬರಾಜು ಆಗದ ಕಾರಣ ರೈತರು ಕಂಗಾಲಾಗಿದ್ದಾರೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ಟಾನಸ್ಪೋರ್ಟ ಸ್ಥಗಿತ ಗೊಂಡಿದ್ದು ಯಾವುದೇ ರೀತಿ ಸಾಗಾಣಿಕೆಗೆ ಅವಕಾಶ ಸಿಗದೇ ಇದ್ದ ಕಾರಣ ರೈತರು ಸರ್ಕಾರಕ್ಕೆ ಮಾದ್ಯಮದ ಮೂಲಕ ಮನವಿ ಮಾಡಿಕೊಂಡಿದ್ದಾರೆ,ಅದೇ ರೀತಿ ಜಿಲ್ಲಾ ಆಡಳಿತ ಮತ್ತು ತಾಲೂಕು ಆಡಳಿತ ಅಧಿಕಾರಿಗಳು ಸೂಕ್ತ ಸರ್ವೇ ಮಾಡಿ ರೈತರ ಕಷ್ಟ ನಷ್ಟ ಗಳ ಬಗ್ಗೆ ಮಾಹಿತಿ ಕಲೇ ಹಾಕಿ ಯೋಗ್ಯ ಬೆಲೆ ಬಿಡಬೇಕೆಂದು ಒತ್ತಾಯಿಸಿದ್ದಾರೆ,ಭೂಮಿ ನಂಬಿ ಬದುಕುವ ಜನ ನಾವು ಮಡ್ಡಿ ಭಾಗದಲ್ಲಿ ನೀರು ಸಿಗುವುದು ಕಷ್ಟ ಇಂತಹದರಲ್ಲಿ ಸಾಲ ಸುಲ ಮಾಡಿ ಕೊಳವೆ ಬಾವಿಗಳನ್ನು ಕೊರಸಿ ಬಂದ ನೀರಲ್ಲಿ ಕುಡಿಯಲು ಹಾಗೂ ಬೆಳೆಗಾಗಿ ಉಪಯೋಗಿಸುತ್ತಿದ್ದು ಇದಿಗ ಚೆನ್ನಾಗಿ ಬೆಳೆ ಬೆಳೆದರು ಮಾರಾಟ ಆಗದ ಕಾರಣ ನಾವು ಕಂಗಾಲಾಗಿದ್ದೆವೆ ಎಂದು ಶಿವಶಂಕರ ಹಿರೇಮಠ ತಮ್ಮ ಅಳಲನ್ನು ತೋಡಿಕೊಂಡರು .ರಾಜ್ಯ ಸರ್ಕಾರ ಇನ್ನಾದರೂ ಎಚ್ಚತ್ತಕೊಂಡು ರೈತರು ಬಗ್ಗೆ ಸ್ವಲ್ಪ ಗಮನ ಹರಿಸಿ ನಷ್ಟಕ್ಕೆ ಒಳಗಾದ ರೈತರಿಗೆ ಯೋಗ್ಯ ಬೆಲೆ ನಿಡಬೇಕೆಂದು ಈ ಮೂಲಕ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ. Share