ದನ ಕರುಗಳಿಗೆ ನೀರು ಹಾಗೂ ಮೇವು ನೀಡುವ ಕಾರ್ಯಕ್ಕೆ ಚಾಲನೆ : ತಹಶಿಲ್ದಾರ ಜಿ ಎಸ್ ಮಳಗಿ

ಮುದ್ದೇಬಿಹಾಳ: ಪಟ್ಟಣದ ವಿಶ್ವಮಂಗಲ ಗೋ ರಕ್ಷ ಸಮೀತಿ, ವಿಶ್ವ ಹಿಂದೂ ಪರಿಷತ್ ತಾಲೂಕಾ ಘಟಕ, ದಿಗಂಬರ ಜೈನ ಸಮಾಜ ಹಾಗೂ ಸಮಾಜ ಸೇವಕ ಬಾಪುಗೌಡ ಶಂಕ್ರಗೌಡ ಗೌಡರ ಇಯವರ ಸಂಯುಕ್ತಾಶ್ರಯದಲ್ಲಿ ರವಿವಾರ ಬೇಸಿಗೆ ಹಾಗೂ ಕೋರೋನಾ ಲಾಕ್ ಡೌನ ಹಿನ್ನೇಲೆಯಲ್ಲಿ ನೂರಕ್ಕೂ ಹೆಚ್ಚು ದನ ಕರುಗಳಿಗೆ ನೀರು ಹಾಗೂ ಮೇವು ನೀಡುವ ಕಾರ್ಯಕ್ಕೆ ತಹಶಿಲ್ದಾರ ಜಿ ಎಸ್ ಮಳಗಿಯವರು ಚಾಲನೆ ನೀಡಿದರು.
ಬಳಿಕ ಅವರು ಮಾತನಾಡಿ ಸರಕಾರ ಪ್ರತಿ ವರ್ಷವೂ ಕೂಡ ಬೆಸಿಗೆ ಸಂದರ್ಭದಲ್ಲಿ ದನ ಕರುಗಳಿಗೆ ಮೇವು ಬ್ಯಾಂಕಗಳ ಮೂಲಕ ರೈತರಿಗೆ ಮೇವು ಪೂರೈಕೆ ಮಾಡಲಾಗುತ್ತಿತ್ತು ಸಧ್ಯ ಎಲ್ಲೆಡೆ ಕೋರೋನಾ ವೈರಸ್ ಹರಡುವಕೆ ಭಯದಲ್ಲಿ ಲಾಕ್ ಡೌನ ಆದೇಶಿಸಿದೆ ಈ ಹಿನ್ನೇಲೆಯಲಿ ಸಾಮಾನ್ಯ ಜನರ ಆರೋಗ್ಯವೆಷ್ಟು ಮುಖ್ಯವೋ ದನ ಕರುಗಳಿಗೆ ಮೇವು ಆಹಾರ ಮತ್ತು ನೀರು ಒದಗಿಸುವುದು ಅಷ್ಠೇ ಮುಖ್ಯವಾಗಿದೆ.
ಇದನ್ನು ಅರಿತ ವಿಶ್ವಮಂಗಲ ಗೋ ರಕ್ಷ ಸಮೀತಿ, ವಿಶ್ವ ಹಿಂದೂ ಪರಿಷತ್ ತಾಲೂಕಾ ಘಟಕ, ದಿಗಂಬರ ಜೈನ ಸಮಾಜ ಹಾಗೂ ಸಮಾಜ ಸೇವಕ ಬಾಪುಗೌಡ ಶಂಕ್ರಗೌಡ ಗೌಡರ ಅವರ ಸಾಮಾಜಿಕ ಹಾಗೂ ಪ್ರಾಣಿಗಳ ಸಂರಕ್ಷಣಾ ಮನೋಭಾವನೆ ನಿಜಕ್ಕೂ ಶ್ಲಾಘನಿಯ.
ದಾನಿಗಳು ಈ ರೀತಿ ಸ್ವಯಂ ಪ್ರೇರಿತವಾಗಿ ದಾನ ಧರ್ಮಗಳಲ್ಲಿ ಇಚ್ಚಾಸಕ್ತಿ ತೋರಿದಲ್ಲಿ ಮನುಷ್ಯ ಜನ್ಮ ಸಾರ್ಥಕತೆ ಸಲ್ಲುತ್ತದೆ. ಜೊತೆಗೆ ಈಗಾಗಲೇ ಭಾರಿ ಭಯವನ್ನುಂಟು ಮಾಡಿದ ಕೋರೋನಾ ವೈರಾಣು ನಮ್ಮ ಭಾಗದಲ್ಲಿ ಹರಡದಂತೆ ನಿಯಂತ್ರಣ ಮಾಡಬೇಕಾದರೇ ಸರಕಾರದ ಲಾಕ್ ಡೌನ ಆದೇಶವನ್ನು ಪ್ರಾಮಾಣಿಕವಾಗಿ ಪಾಲಿಸಿ ಗೌರವಿಸಬೇಕು. ಆಗ ಮಾತ್ರ ಕೋರೋನಾ ರೋಗದಿಂದ ಪಾರಾಗಲು ಸಧ್ಯ ಸಾರ್ವಜನಿಕರು ಗುಂಪು ಗುಂಪಾಗಿ ನಿಲ್ಲುವುದು ಕಾನೂನು ಬಾಹಿರಾವಾಗಿದ್ದು ಕಾರಣ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಜಾಗೃತಿ ವಹಿಸಬೇಕು ಎಂದರು.
ಈ ವೇಳೆ ಸಿಪಿಐ ಆನಂದ ವಾಗ್ಮೋರೆ, ತಾಲೂಕಾ ಪಶುವೈದ್ಯಾಧಿಕಾರಿ ಎ ಎಸ್ ಚೌಧರಿ, ಗಣ್ಯರಾದ ಮಾಣಿಕ್ ದಂಡಾವತಿ, ಪ್ರಭು ಕಡಿ, ತಾಲೂಕಾ ಬಿಜೆಪಿ ಮಂಡಲದ ಅಧ್ಯಕ್ಷ ಪರುಶುರಾಮ ಪವಾರ, ಶಾಂತಗೌಡ ಗೌಡರ, ಸತೀಶ ಹೂಗಾರ, ಪರುಶುರಾಮ ಕೂಡಗಿ, ರಾಜು ಸೋಳಂಕೆ, ಶಿವರಾಜ ಹಿರೇಮಠ, ದೀಪು ಕಲಾಲ, ಶಿವು ಸಿದ್ದಾಪೂರ, ಮಹಾಂತೇಶ ಬೂದಿಹಾಳಮಠ, ಅಶೋಕ ಸಾಳುಂಕೆ, ರವಿ ರಾಠೋಡ,ಸಾಹೇಬಗೌಡ ಗೌಡರ ಸೇರಿದಂತೆ ಮತ್ತಿತರರು ಇದ್ದರು.
Share
WhatsApp
Follow by Email