ಬ್ರೇಕಿಂಗ್ ನ್ಯೂಸ್ ದಿನಸಿ ವಸ್ತುಗಳ ವಿತರಣೆಗೆ ಆದೇಶ: ಪಡಿತರ ಚಿಟಿ ಇಲ್ಲದ 67 ಅಲೆಮಾರಿ ಕುಟುಂಬಗಳ ಪತ್ತೆ, ಅಧಿಕಾರಿಗಳನ್ನು ತರಾಟೆಗೆ ತಗೆದುಕೊಂಡ ರಾಯಬಾಗ ತಹಶೀಲ್ದಾರ 12/04/202012/04/20201 min read admin ಮುಗಳಖೋಡ: ಬಹುರೂಪಿ ಅಲೆಮಾರಿ ಜನಾಂಗವು ಕಳೆದ 15 ದಿನಗಳಿಂದ ತುತ್ತು ಅನ್ನಕ್ಕಾಗಿ ಹಾತೊರೆಯುತ್ತಾ ಹಸಿವಿನಿಂದ ಕಂಗಾಲಾಗಿದ್ದು ಅನ್ನದಾನಿ ಕೈಗಳನ್ನು ಎದುರು ನೊಡುತ್ತಾ ಮುಗಳಖೋಡದಲ್ಲಿ ವಾಸವಾಗಿರುವ ಅಲೆಮಾರಿ ಕುಟುಂಬಗಳ ದಯನೀಯ ಸ್ಥಿತಿಯ ಪ್ರಕಟಗೋಳ್ಳುತಿದ್ದಂತ್ತೆ ಎಚ್ಚೆತ್ತುಗೊಂಡ ತಹಶೀಲ್ದಾರರಿಂದ ಸಾಂತ್ವಾನ.ಶನಿವಾರ ಪ್ರಕಟಗೊಂಡ ಪತ್ರಿಕೆ ವರದಿಗೆ ಸ್ಪಂದಿಸಿದ ರಾಯಬಾಗ ತಹಶೀಲ್ದಾರ ಚಂದ್ರಕಾoತ ಭಜಂತ್ರಿ ಮುಗಳಖೋಡ ಪಟ್ಟಣಕ್ಕೆ ಆಗಮಿಸಿ ಭೀರಪ್ಪನ ಮಡ್ಡಿ, ಗೌಲತ್ತಿನವರ ಓಣಿ ಮತ್ತು ಸಿದ್ದರಾಯನ ಮಡ್ಡಿಯಲ್ಲಿ ವಾಸಿಸುವ ಅಲೆಮಾರಿ ಕುಟುಂಬಗಳಿಗೆ ಭೆಟಿ ನೀಡಿ ಪರಿಶೀಲಿಸಿ ಪುರಸಭೆ ಮುಖ್ಯಾಧಿಕಾರಿ ಜಿ.ಬಿ.ಡಂಬಳ ಹಾಗೂ ಗ್ರಾಮ ಲೆಕ್ಕಾಧಿಕಾರಿ ಎಸ್.ಎಸ್.ಹತ್ತರಕಿ ಯನ್ನು ಇಷ್ಷು ದಿನ ಏನು ಮಾಡುತ್ತಿದ್ದಿರಾ.? ಎಂದು ತರಾಟೆಗೆ ತಗೆದುಕೊಂಡು ಪಡಿತರ ಚೀಟಿ ಇಲ್ಲದ ಜನರಿಗೆ ಆದಷ್ಟು ಬೇಗನೆ ಪಡಿತರ ಚೀಟಿ ದೊರಕಿಸಿಕೊಡುವಂತೆ ಸಂಬoದಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.ರವಿವಾರ ಬೆಳಿಗ್ಗೆ 9 ಗಂಟೆಗೆ ಅಗತ್ಯ ತರಕಾರಿ ದಿನಸಿವಸ್ತುಗಳನ್ನು ಪಡಿತರ ಚೀಟಿ ಇಲ್ಲದ ಅಲೆಮಾರಿ ಕುಟುಂಬಗಳಿಗೆ ವಿತರಿಸಲು ತಿಳಿಸಿದರು.ವರದಿಗೆ ಸ್ಪಂದಿಸಿ ಪುರಸಭೆ ಸದಸ್ಯ ಕೆಂಪಣ್ಣ ಮುಶಿ 18 ಬಹುರೂಪಿ ಕುಟುಂಬಗಳಿಗೆ ದಿನಸಿ ಅಗತ್ಯ ವಸ್ತುಗಳಾದ ಎಣ್ಣೆ, ಗೋಧಿ ಹಿಟ್ಟು, ಅಕ್ಕಿ, ಬೆಳೆ, ಕಾರು. ಶೇಂಗಾ, ಸಕ್ಕರೆ, ಬೆಲ್ಲ ವಿತರಿಸಿದರು.ಕುಡಚಿ ಶಾಸಕ ಪಿ. ರಾಜೀವ್ ಇಂತಹ ತುರ್ತು ಪರಿಸ್ಥಿತಿಯಲ್ಲಿ ಕೂಲಿ ನಾಲಿ ಮಾಡಿ ಬದುಕುವ ಇಂತಹ ಅಲೆಮಾರಿ ಜನಾಂಗದ ಅನೇಕ ಕುಟುಂಬಗಳು ಕುಡಚಿ ಮತಕ್ಷೇತ್ರದಲ್ಲಿ ಇದ್ದು ಅಂತವರಿಗೆ ಸಾಂತ್ವನ ಹೇಳಲು ಬಾರದೇ ಇದ್ದುದರಿಂದ ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ.ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎಸ್. ಭಜಂತ್ರಿ, ಕೆಂಪಣ್ಣ ಮುಶಿ, ಪ್ರಕಾಶ ಆದಪ್ಪಗೋಳ, ಮಹಾವೀರ ಕುರಾಡೆ, ರಾಯಗೊಂಡ ಖೇತಗೌಡರ, ರಾಜು ದಾನೋಳ್ಳಿ, ಬಾಳಪ್ಪ ಬಹುರೂಪಿ, ದಾನೇಶ ಬಹುರೂಪಿ, ಪುರಸಭೆ ಸಿಬ್ಬಂದಿ, ಗ್ರಾಮ ಸಹಾಯಕರು ಇದ್ದರು.ಬಾಕ್ಸ ಲೈನ :ಕುಡಚಿಯಲ್ಲಿ ಸಂಪೂರ್ಣ ಹತೋಟಿಯಲ್ಲಿದ್ದು ಇಂತಹ ತುರ್ತು ಪರಿಸ್ಥಿತಿಯಲ್ಲಿ ಅಧಿಕಾರಿಗಳು ಹೈ ಅಲರ್ಟ್ ಆಗಿ ಕಾರ್ಯಕ್ಷಮತೆಯಿಂದ ಪ್ರಾಮಾಣಿಕವಾಗಿ ಸಾಮಾಜಿಕ ಅಂತರದೊoದಿಗೆ ಕೆಲಸ ಮಾಡಲು ಸೂಚಿಸಲಾಗಿದೆ.ಚಂದ್ರಕಾoತ ಭಜಂತ್ರಿ ತಹಶೀಲ್ದಾರ ರಾಯಬಾಗ Share