
ಶನಿವಾರ ಸಂಜೆಯಿಂದ ನಗರದಲ್ಲಿ ಬೀಡುಬಿಟ್ಟಿರುವ ಅವರು, ಜಿಲ್ಲಾಡಳಿತ ಅಧಿಕಾರಿಗಳಿಂದ ಜಿಲ್ಲೆಯ ಕೋವಿಡ್-19 ಕೊರೊನಾ ರೋಗದ ಕುರಿತು ಮಾಹಿತಿ ಪಡೆದ ಬಳಿಕ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಅವರು,
ಲಾಕ್ ಡೌನ್ ಹಾಗೂ ಸೀಲ್ ಡೌನ್ ಇರುವ ಪ್ರದೇಶದ ಜನರು ಅನಗತ್ಯವಾಗಿ ಮನೆಯಿಂದ ಹೊರಗೆ ಬರಬೇಡಿ. ಅದರಲ್ಲೂ ಸೀಲ್ ಡೌನ್ ಇರುವ ಪ್ರದೇಶಕ್ಕೆ ಹೊರಗಿನ ಯಾರಿಗೂ ಪ್ರವೇಶವಿಲ್ಲ, ಈ ಪ್ರದೇಶದ ಜನರೂ ಹೊರಗಡೆ ಕಾಣಿಸಿಕೊಳ್ಳುವಂತೆ ಇಲ್ಲ. ಜಿಲ್ಲಾಡಳಿತದ ಈ ಕಟ್ಟುನಿಟ್ಟಿನ ಸೂಚನೆಯನ್ನು ಯಾರೂ ಉಲ್ಲಂಘಿಸುವಂತಿಲ್ಲ. ನಗರದಲ್ಲಿ ಯಾರೂ ಯಾವುದೇ ಪ್ರದೇಶಕ್ಕೆ ಭೇಟಿ ನೀಡುವಂತಿಲ್ಲ ಎಂದು ಸೂಚಿಸಿದ್ದಾರೆ.
ಮನೆಯಲ್ಲಿರಿ ಸುರಕ್ಷಿತವಾಗಿರಿ. ಬದುಕಿ, ಬದುಕಲು ಬಿಡಿ, ಜೀವ ಅತ್ಯಮೂಲ್ಯವಾದದ್ದು. ಹೀಗಾಗಿ ಜಿಲ್ಲಾಡಳಿತದೊಂದಿಗೆ ಸಹಕರಿಸಿ ಎಂದು ಜಿಲ್ಲೆಯ ಜನರ ವಿನಂತಿಸಿದ್ದಾರೆ.ಇದುವರೆಗೂ ಗುಮ್ಮಟನಗರಿ ವಿಜಯಪುರದಲ್ಲಿ ಒಂದೇ ಕುಟುಂಬದ 65 ವರ್ಷದ ವೃದ್ಯೆಯಯನ್ನು ಹಿಡಿದುಕೊಂಡು ಚಿಕ್ಕ ಮಕ್ಕಳಿಗೂ ಕೋರೋನಾ ಮಾಹಾಮಾರಿ ಕಾಣಿಸಿಕೊಂಡಿದ್ದು ಒಟ್ಟು ಸಂಖ್ಯೆ 6 ಕ್ಕೆರಿದೆ ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.