ಬ್ರೇಕಿಂಗ್ ನ್ಯೂಸ್ ಬೆಳಗಾವಿ ಜಿಲ್ಲೆಯಲ್ಲಿ ಕೊರೊನಾದ ಮೊದಲ ಬಲಿ? 13/04/202013/04/2020 admin ಬೆಳಗಾವಿ: ನಿನ್ನೆ ಬೆಳಗಾವಿ ತಾಲೂಕು ಹಿರೇಬಾಗೇವಾಡಿಯಲ್ಲಿ ಪತ್ತೆಯಾಗಿದ್ದ ಕೊರೊನಾ ಸೋಂಕಿತ ವ್ಯಕ್ತಿಯ ಅಜ್ಜಿ ಇಂದು ಮುಂಜಾನೆ ಮೃತಪಟ್ಟಿದ್ದು, ಜಿಲ್ಲೆಯಲ್ಲಿ ಇದು ಕೊರೊನಾದ ಮೊದಲ ಬಲಿಯೇ ಎನ್ನುವುದು ಇನ್ನಷ್ಟೇ ಖಾತ್ರಿಯಾಗಬೇಕಾಗಿದೆ.ಮೃತಪಟ್ಟ ಅಜ್ಜಿಗೆ 85 ವರ್ಷ ವಯಸ್ಸಾಗಿತ್ತು. ಅಜ್ಜಿಗೆ ಸೋಂಕು ತಗುಲಿರುವ ಬಗ್ಗೆ ಶಂಕೆ ವ್ಯಕ್ತಪಡಿಸಲಾಗುತ್ತಿದ್ದು, ಆಕೆಯ ಶವವನ್ನು ಶವಪರೀಕ್ಷೆಗಾಗಿ ತರಲಾಗಿದೆ. ನಿನ್ನೆ ಹಿರೇಬಾಗೇವಾಡಿಯ 38 ವಯಸ್ಸಿನ ವ್ಯಕ್ತಿಗೆ ಸೋಂಕು ತಗುಲಿರುವುದು ಪತ್ತೆಯಾಗಿತ್ತು. ಇಂದು ಮುಂಜಾನೆ ಆತನ ಮನೆಯವರನ್ನೆಲ್ಲ ಆರೋಗ್ಯ ಇಲಾಖೆಯವರು ಎರಡು ಅಂಬ್ಯುಲನ್ಸ್ ಗಳಲ್ಲಿ ಕರೆದೊಯ್ದು ಅವರನ್ನು ಕ್ವಾರಂಟೈನ್ ಮಾಡಿದ್ದಾರೆ. ಆದರೆ, ವಯಸ್ಸಾದ ಕಾರಣ ಅಜ್ಜಿಯನ್ನು ಮನೆಯಲ್ಲೇ ಬಿಟ್ಟಿದ್ದರು ಎಂಬ ಮಾಹಿತಿ ಬಂದಿದೆ.ವಿಶೇಷವೆಂದರೆ ಇದುವರೆಗೆ ಹಿರೇಬಾಗೇವಾಡಿಯಲ್ಲಿ ಪತ್ತೆಯಾಗಿರುವ ಎಲ್ಲ ಐದು ಮಂದಿ ಸೋಂಕಿತರು ನೆರೆಹೊರೆಯವರಾಗಿದ್ದಾರೆ. ಅವರೆಲ್ಲ ಅಜ್ಜಿಯೊಂದಿಗೆ ನಿತ್ಯ ಸಂಪರ್ಕದಲ್ಲಿದ್ದರು ಎನ್ನಲಾಗಿದೆ. Share