
ಇಂತಹ ಸಂದಿಗ್ಧ ಸ್ಥಿತಿಯಲ್ಲಿ ನಾಗರೀಕರನ್ನ ಸಂರಕ್ಷಿಸಲು ಜಿಲ್ಲಾ ಹಾಗೂ ತಾಲೂಕಾಢಳಿತಗಳ ಅದೇಶಾನುಸಾರ ಪೊಲೀಸ,ಆರೋಗ್ಯ,ಅಂಗನವಾಡಿ,ಆಶಾ ಕಾರ್ಯ್ಕರ್ತೆಯರು,ಗೃಹರಕ್ಷಕ ದಳ,ಪುರಸಭೆ ಇಲಾಖೆಗಳ ಅಧಿಕಾರಿಗಳು,ಸಿಬ್ಬಂದಿ, ಪೌರಕಾರ್ಮಿಕರು ನಿತ್ಯ ಸಮಾಲೋಚನಾ ಸಭೆಗಳನ್ನು ನಡೆಸಿ ಸರ್ವರಲ್ಲೂ ಜಾಗೃತಿ ಮೂಡಿಸಿ ಇಡೀ ಮಹಾಲಿಂಗಪುರವನ್ನು ಕೊರೋನಾದಿಂದ ಅಂತರ ಕಾಯ್ದಕೊಳ್ಳುವಲ್ಲಿ ಯಶಸ್ವಿಯಾಗಿದ್ದು ಸಂತೋಷದ ಸಂಗತಿಯಾಗಿದೆ.

ರಾಜ್ಯಕ್ಕೆ ೨ ನೇ ದೊಡ್ಡ ಬೆಲ್ಲದ ಮಾರುಕಟ್ಟೆ ಹೊಂದಿ ವೈದ್ಯಕೀಯ,ಸಾಹಿತಿಕ,ಅಧ್ಯಾತ್ಮ,ಶೈಕ್ಷಣಿಕ, ಆರೋಗ್ಯ,ಕಲೆ ಅಲ್ಲದೆ ವಾಣಿಜ್ಯ ಕೇಂದ್ರವೂ ಆಗಿದೆ.
ನಗರದ ಮದ್ಯ ಭಾಗದಲ್ಲಿ ಪೂರ್ವ ಪಶ್ಚಿಮೊತ್ತರವಾಗಿ ಮುಧೋಳ- ನಿಪ್ಪಾಣಿ ಮತ್ತು ದಕ್ಷಿಣೊತ್ತರವಾಗಿ ಜತ್ತ-ಜಾಂಬೋಟಿ ರಾಜ್ಯ ಹೆದ್ದಾರಿಗಳು ಪ್ರಮುಖ ಸೇತುವೆಗಳಂತಾಗಿ ಬೆಳಗಾವಿ, ಹುಬ್ಬಳ್ಳಿ, ಕೊಲ್ಲಾಪುರ, ಮೀರಜ್, ಸಾಂಗ್ಲಿ, ವಿಜಯಪುರ, ಬಾಗಲಕೋಟೆ ಮುಂತಾದ ಮಹಾ ನಗರಗಳಿಗೆ ಸಮಾನ ಅಂತರದಲ್ಲಿದ್ದು ದೆಶ್ಯಾದ್ಯಂತ ಪ್ರಯಾಣಿಸಲು ಸುಗಮ ಕೊಂಡಿಯಾಗಿವೆ.
ಪಟ್ಟಣ ಸುತ್ತಲಿನ ೩೦-೪೦ ಹಳ್ಳಿಗಳ ನಾಗರೀಕರು, ವಿದ್ಯಾರ್ಥಿಗಳು, ವರ್ತಕರು ಮತ್ತು ವಾಹನಗಳಿಂದ ಸದಾ ಗಿಜಿಗುಡುತ್ತಿದ್ದ ನಗರ ಬಿಗಿ ಕ್ರಮದಿಂದ ಊರಿನ ದಾರಿಗಳೆಲ್ಲ ಜನ,ವಾಹನಗಳ ಸಂಚಾರವಿಲ್ಲದೆ ಬಿಕೋ ಎನ್ನುತ್ತಿವೆ.
ಐತಿಹಾಸಿಕ ಮಹಾಲಿಂಗೇಶ್ವರ ಮಠವನ್ನೊಳಗೊಂಡು ನಗರದ ಎಲ್ಲಾ ದೇವಾಲಯಗಳು ಮತ್ತು ೧೫ ಮಸೀದಿಗಳು ಪ್ರಾರ್ಥನೆಯಿಲ್ಲದೆ ಸ್ಥಬ್ಧಗೊಂಡು ತಮ್ಮ ಮನೆಗಳಲ್ಲಿಯೆ ಜನರು ಶಿವ ಶಿವಾ ಎಂಬ ಘೊಷವನ್ನು ಹೇಳುವಂತಾಗಿದೆ.
ಕಟ್ಟುನಿಟ್ಟಿನ ಕ್ರಮದಿಂದಾಗಿ ಮದ್ಯ ಮಾರಾಟವಿಲ್ಲದೇ ಬಾರ್ ಗಳು ಬಂದಾಗಿದ್ದು ಮದ್ಯ ಪ್ರಿಯರು ಪರದಾಡುತ್ತ ಸರಕಾರಗಳಿಗೆ ಹಿಡಿ ಶಾಪ ಹಾಕುತಿದ್ದಾರೆ. ಅನಗತ್ಯವಾಗಿ ಓಡಾಡಿದ ಸಾವಿರ ಮಿಕ್ಕಿ ಮೋಟರ್ ಸೈಕಲ್ ಗಳ ಜಪ್ತಿಯಾಗಿ ಠಾಣೆಯ ಆವರಣ ಸೇರಿ ಇವುಗಳ ಮೆಲೆ ಪೊಲೀಸ್ ಇಲಾಖೆ ದಂಡ ವಿಧಿಸುತಿದ್ದಾರೆ.ಇದರಿಂದ ರಸ್ತೆಗಿಳೀಯಲು ಜನತೆ ಹೆದರಿ ತಮ್ಮ ತೋಟ,ಮನೆಗಳನ್ನು ಸೇರಿ ದಿನಗಳನ್ನು ದೂಡುತಿದ್ದಾರೆ.
ರೈತರು,ಬಾಗವಾನರಿಂದ ಮನೆ ಮನೆಗಳಿಗೆ ಹೈನು ಪದಾರ್ಥ, ಕಾಯಿಪಲ್ಯಗಳನ್ನು ಮುಟ್ಟಿಸುವ ವ್ಯವಸ್ಥೆಯನ್ನು ಪುರಸಭೆ ಕಟ್ಟುನಿಟ್ಟಾಗಿ ಮಾಡುತ್ತಿರುವುದು ಜನರಿಗೆ ಸಹಕಾರಿಯಾಗಿದೆ.ಕಿರಾಣಿ,ತರಕಾರಿ,ಇನ್ನಿತರೆ ವಸ್ತುಗಳ ಮಾರುಕಟ್ಟೆಗಳು ಅಕ್ಷರಶಃ ಬಂದ ಆಗಿ ಜನರು ಗುಂಪು ಗುಂಪಾಗಿ ಸೇರುವ ಸಂದರ್ಭ ತಪ್ಪಿದ್ದು ಮಾತ್ರ ಜನರಲ್ಲಿ ತಕ್ಕ ಮಟ್ಟಿನ ನಿರಾಳ ಭಾವನೆ ಬಂದಿದೆ. ಇದರ ಶ್ರೇಯ ಎಲ್ಲ ಕಾರ್ಯನಿರತ ಇಲಾಖೆಗಳ ಅಧಿಕಾರಿ,ಸಿಬ್ಬಂದಿ ವರ್ಗ ಮತ್ತು ಪೌರ ಕಾರ್ಮಿಕರಿಗೆ ಸಲ್ಲಬೇಕಾಗಿರುವುದು ಸಮಯೋಚಿತವಾಗಿದೆ ಎನ್ನುತಿದೆ ನಗರದ ಜನತೆ.
ವರದಿ : ಮೀರಾ.ಎಲ್.ತಟಗಾರ