
ಅವರು ಮಂಜುನಾಥ ಸೈನಿಕ ತರಬೇತಿ ಕೇಂದ್ರ ಮತ್ತು ಎಲ್. ವಾಯ್. ಅಡಿಹುಡಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಡಾ. ಬಿ.ಆರ್.ಅಂಬೇಡ್ಕರ ಜಯಂತಿ ಆಚರಣೆಯ ಸಂಧರ್ಭದಲ್ಲಿ ಮಾತನಾಡಿ, ಕೊರೊನಾ ಎಂಬ ಸಾಂಕ್ರಾಮಿಕ ರೋಗವನ್ನು ಭಾರತದಿಂದ ಓಡಿಸಬೇಕಾದರೆ ಪ್ರತಿಯೊಬ್ಬರು ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಸರ್ಕಾರದ ಆದೇಶದಂತೆ ಎಲ್ಲರೂ ಮನೆಯಲ್ಲಿದ್ದು, ಈ ರೋಗವು ಒಬ್ಬರಿಂದ ಒಬ್ಬರಿಗೆ ಹರಡದಂತೆ ಮಾಸ್ಕ ಧರಿಸಿ ಮುಂಜಾಗ್ರತ ಕ್ರಮ ಕೈಗೊಳ್ಳೋಣ ಎಂದರು.
ಶಾಲೆಯ ಉಪಮುಖ್ಯೋಪಾಧ್ಯಾಯ ಶಶಿಧರ ಆರಾಧ್ಯ ಮಾತನಾಡಿ, ಈ ಕೊರೊನಾ ರೋಗದಿಂದ ಸಾಕಷ್ಟು ಜನರು ತೊಂದರೆಗೀಡಾಗಿದ್ದಾರೆ. ನಿಮ್ಮ ಮನೆಯ ಪಕ್ಕದಲ್ಲಿರುವ ಬಡತನದ ಕುಟುಂಬಗಳಿಗೆ ಕೈಲಾದಷ್ಟು ಸಹಾಯ ಮಾಡಿ ಮತ್ತು ಗುಂಪು ಗುಂಪಾಗಿ ಎಲ್ಲಿಯೂ ಯಾರು ಕೂಡ ಸೇರಬೇಡಿ ಎಂದರು.
ಜಯAತಿ ಕಾರ್ಯಕ್ರಮದಲ್ಲಿ ನ್ಯಾಯವಾದಿ ಯಲ್ಲಪ್ಪ ಖಾನಟ್ಟಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಪರಶುರಾಮ ಕೊಡಗನೂರ, ಅಜಯ ಆಡಿನವರ ಉಪಸ್ಥಿತರಿದ್ದರು.