
ತಹಶೀಲ್ದಾರ್ ಡಿ.ಜಿ. ಮಹಾತ್, ಸಿಪಿಐ ವೆಂಕಟೇಶ ಮುರನಾಳ ಮತ್ತು ಪುರಸಭೆ ಮುಖ್ಯಾಧಿಕಾರಿ ದೀಪಕ ಹರ್ದಿ ಅವರು ಕೈವಸುಗಳನ್ನು ವಿತರಿಸಿ ಮಾತನಾಡಿ ‘ಕೊರೊನಾ ಸೋಂಕು ತಡೆಗಟ್ಟುವ ಕಾರ್ಯಮಾಡುತ್ತಿರುವ ಎಲ್ಲ ಸಿಬ್ಬಂದಿಯವರು ತಮ್ಮ ಸುರಕ್ಷೆಯನ್ನು ಕಾಯ್ದುಕೊಳ್ಳಬೇಕು. ತಾವು ಮಾಡುವ ಸೇವೆಯು ಅಪೂರ್ವವಾದದ್ದು’ ಎಂದರು.
ಪಿಎಸ್‍ಐ ಮಲ್ಲಿಕಾರ್ಜುನ ಸಿಂಧೂರ, ವೈದ್ಯಾಧಿಕಾರಿ ಡಾ. ಭಾರತಿ ಕೋಣಿ, ಲಯನ್ಸ್ ಕ್ಲಬ್ ಅಧ್ಯಕ್ಷ ಪ್ರಕಾಶ ಬಾಗೇವಾಡಿ, ವೆಂಕಟೇಶ ಸೋನವಾಲಕರ, ಈರಣ್ಣಾ ಕೊಣ್ಣೂರ, ಡಾ. ಎಸ್.ಎಸ್. ಪಾಟೀಲ, ಬಾಲಶೇಖರ ಬಂದಿ, ಸೋಮಶೇಖರ ಹಿರೇಮಠ, ಶಿವಾನಂದ ಕಿತ್ತೂರ, ಸಂಜಯ ಮೋಕಾಶಿ, ಪುಲಕೇಶಿ ಸೋನವಾಲಕರ, ಮಲ್ಲಿನಾಥ ಶೆಟ್ಟಿ, ಗಿರೀಶ ಆಸಂಗಿ, ಮಹಾಂತೇಶ ಹೊಸೂರ, ಸಂಜಯ ಮಂದ್ರೋಳಿ, ಎಸ್.ಜಿ. ಮೇಲಾನಟ್ಟಿ, ಸುರೇಶ ನಾವಿ, ವಿಶಾಲ ಶೀಲವಂತ, ಅಬ್ದುಲ್ ಬಾಗವಾನ ಇದ್ದರು.