
ಸ್ಥಳೀಯ ನಗರಸಭೆಯ ಸಭಾ ಭವನದಲ್ಲಿ ಹಮ್ಮಿಕೊಳ್ಳಲಾದ ಸಭೆಯಲ್ಲಿ ಮಾತನಾಡಿದ ತಹಶೀಲ್ದಾರರು, ಲಾಕ್ ಡೌನ್ ಮಾದರಿಯ ಸೀಲ್ ಡೌನ್‌ನಲ್ಲಿ ಕಿರಾಣಿ, ಔಷಧಿ ಅಂಗಡಿ, ತರಕಾರಿ ಮತ್ತು ಪೆಟ್ರೊಲ್ ಬಂಕ್‌ಗಳನ್ನು ಸಂಪೂರ್ಣವಾಗಿ ಬಂದ್ ಮಾಡಲಾಗುವುದು. ಸಾರ್ವಜನಿಕರು ಹದಿನೈದು ದಿನಗಳಿಗೆ ಬೇಕಾಗುವ ಎಲ್ಲ ವಸ್ತುಗಳನ್ನು ಬುಧವಾರ ಮಧ್ಯಾಹ್ನ 12ರ ಒಳಗಾಗಿ ಖರೀದಿ ಮಾಡಿಕೊಂಡು ಇಟ್ಟಿರಬೇಕು. ಶುದ್ಧ ಕುಡಿಯುವ ನೀರನ್ನು ಮಧ್ಯಾಹ್ನ 12 ರ ಒಳಗಾಗಿ ಪಡೆದುಕೊಳ್ಳಬೇಕು. ಸಾರ್ವಜನಿಕರು ಇದಕ್ಕೆ ಸಂಪೂರ್ಣ ಸಹಕಾರ ಕೊಡಬೇಕು. ಇದು ಸಾರ್ವಜನಿಕರ ಹಿತ ಮತ್ತು ಆರೋಗ್ಯ ದೃಷ್ಟಿಯಿಂದ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಪೌರಾಯುಕ್ತ ಶ್ರೀನಿವಾಸ ಜಾಧವ, ಪಿಎಸ್‌ಐ ರವಿಕುಮಾರ ಧರ್ಮಟ್ಟಿ, ಅಹಾರ ಶಿರಸ್ತೆದಾರ ದತ್ತಾತ್ರೆಯ ದೇಶಪಾಂಡೆ ವೇದಿಕೆ ಮೇಲಿದ್ದರು.
ರಬಕವಿ-ಬನಹಟ್ಟಿ, ರಾಮಪುರ ಮತ್ತು ಹೊಸೂರಿನ ಪೆಟ್ರೋಲ್ ಬಂಕ್ ಮಾಲೀಕರು, ಕಿರಾಣಿ ವರ್ತಕರು, ಔಷಧ ವ್ಯಾಪಾರಸ್ಥರಿದ್ದರು.