ಮುದ್ದೇಬಿಹಾಳ ಪಟ್ಟಣದ ಮಿನಿ ವಿಧಾನಸೌಧ ಸಭಾಭವನದಲ್ಲಿ ಬುಧುವಾರ ನಡೆದ ತಾಲೂಕಾ ಗ್ರಾಮ ಲೆಕ್ಕಾಧಿಕಾರಿಗಳ ವಿವಿಧ ಸರಕಾರಿ ಅಧಿಕಾರಿಗಳ ಸಭೆ

ಮುದ್ದೇಬಿಹಾಳ:
ಪಟ್ಟಣ ಸೇರಿದಂತೆ ತಾಲೂಕಿನ ಯಾವೂದೇ ಗ್ರಾಮದಲ್ಲಾಗಲಿ ಯಾವೂದೇ ವ್ಯಕ್ತಿ ಹೇಗೇ ಮೃತ ಪಟ್ಟಿರಲಿ ಅಂತಹವರ ಬಗ್ಗೆ ಅವರ ಕುಟುಂಭದವರ ಬಗ್ಗೆ ಗ್ರಾಮ ಲೆಕ್ಕಾಧಿಕಾರಿಗಳು ತೀವೃಗತಿಯಲ್ಲಿ ತಾಲೂಕಾ ಆಡಳಿತಕ್ಕೆ ತಿಳಿಸತಕ್ಕದ್ದು ಎಂದು ತಹಶಿಲ್ದಾರ ಜಿ ಎಸ್ ಮಳಗಿ ಹೇಳಿದರು.
ಪಟ್ಟಣದ ಮಿನಿ ವಿಧಾನಸೌಧ ಸಭಾಭವನದಲ್ಲಿ ಬುಧುವಾರ ನಡೆದ ತಾಲೂಕಾ ಗ್ರಾಮ ಲೆಕ್ಕಾಧಿಕಾರಿಗಳ ವಿವಿಧ ಸರಕಾರಿ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
ಈಗಾಗಲೇ ತಾಲೂಕಾದ್ಯಂತ ಕೋರೋನಾ ವೈರಾಣು ತಡೆಗಟ್ಟುವ ನಿಟ್ಟಿನಲ್ಲಿ ಸಾಕಷ್ಟು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಲ್ಲ ಆದೇಶಕ್ಕೆ ತಕ್ಕಂತೆ ಉತ್ತಮ ರೀತಿಯಲ್ಲಿ ಎಲ್ಲ ಇಲಾಖೆ ಅಧಿಕಾರಿಗಳು ಪ್ರಾಮಾಣಿಕ ಕರ್ತವ್ಯ ನಿರ್ವಹಿಸುತ್ತಿದ್ದರಿ ಅದಕ್ಕೆ ಅಭಿನಂದನೆಗಳು.
ಆದರೇ ಇಷ್ಟುದಿನಗಳ ಕಾಲವೇ ಬೇರೆಯಾಗಿತ್ತು ಸದ್ಯದ ಪರಿಸ್ಥಿಯತಿಯೇ ಬೇರೆಯಾಗಿದೆ ಹಾಗಾಗಿ ವಿಶೇಷವಾಗಿ ಚೆಕ್ ಪೋಸ್ಟ್ ಗಳಲ್ಲಿ ಅಧಿಕಾರಿಗಳು ಸಿಬ್ಬಂದಿಗಳು ಮೈಮರೆಯಬಾರದು ಯಾರು ಯಾವಾಗ ಎಲ್ಲಿಂದ ಹೇಗೆ ಹೊರಗೆ ಹೊಗುತ್ತಾರೆ ಎಂಬುದು ಮುಖ್ಯವಾಗಿ ಮೃತರ ಅಂತ್ಯಸAಸ್ಕರಾದ ವೇಳೆ ತುಂಬಾ ಸಮಸ್ಯೆ ಎದುರಾಗಿತ್ತಿದೆ .ಕಾರಣ ಅಂತವಹರ ಬಗ್ಗೆ ಹೆಚ್ಚು ನಿಗಾವಹಿಸಿ ಮಾಹಿತಿ ನೀಡಬೇಕು.
ಆಗಾಗ ಸಾರ್ವಜನಿಕರಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ ಮನೆಯಿಂದ ಹೊರಗಡೆ ಬರದ ಹಾಗೇ ಜಾಗೃತಿ ಅರಿವು ಮೂಡಿಸಬೇಕು, ಹೋಮ್ ಕೋರೈಂಟೈನ ವ್ಯಕ್ತಿಗಳು ಹೊರಗಡೆ ಬರದಂತೆ ಎಚ್ಚರಿಕೆ ವಹಿಸಬೇಕು ಎಂದರು
ಈ ವೇಳೆ ಸಿಪಿಐ ಆನಂದ ವಾಗ್ಮೋರೆ, ಪುರಸಭೆ ಮುಖ್ಯಾಧಿಕಾರಿ ಜಿ ಎಚ್ ಕಾಸೆ, ತಾಲೂಕಾ ಆರೋಗ್ಯಾಧಿಕಾರಿ ಡಾ, ಸತೀಶ ತಿವಾರಿ,ಗ್ರಾಮ ಲೆಕ್ಕಾಧಿಕಾರಿಗಳಾದ ಎಸ್ ಬಿ ಗೌಡರ, ಕುಮಾರ ಆಲಗೂರ, ಪಿಎಸ್ ಮಠಪತಿ, ರಪೀಕ ಮುಲ್ಲಾ, ರೀಯಾಜ ನಾಯ್ಕೋಡಿ, ಆರ್ ಪಿ ಬಳವಾಟ, ಅನುಪಮಾ ಪೂಜಾರಿ ಸೇರಿದಂತೆ ಮತ್ತಿತರರು ಇದ್ದರು.
Share
WhatsApp
Follow by Email