ಸಚಿವೆ ಶಶಿಕಲಾ ಜೊಲ್ಲೆ ಹಾಗೂ  ಸಂಸದ ಅಣ್ಣಾಸಾಹೇಬ ಜೊಲ್ಲೆ ಡಾ. ಬಿ.ಆರ್ ಅಂಬೇಡ್ಕರ   ಪ್ರತಿಮೆಗೆ ಮಾಲಾರ್ಪಣೆ 

ಚಿಕ್ಕೋಡಿ :-  ಪಟ್ಟಣದ  ಭೀಮ ನಗರ ಹಾಗೂ ನ್ಯಾಯಲಯದ ಆವರಣದಲ್ಲಿ ,ಪಟ್ಟಣದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಇರುವ   ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರ 129 ನೇ ಜನ್ಮವಾರ್ಷಿಕೋತ್ಸವದ ಅಂಗವಾಗಿ ಶ್ರೀ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆಗೆ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ  ಶಶಿಕಲಾ ಜೊಲ್ಲೆ  ಹಾಗೂ ಚಿಕ್ಕೋಡಿ ಲೋಕಸಭೆ ಸಂಸದರಾದ ಮಾನ್ಯ  ಅಣ್ಣಾಸಾಹೇಬ ಜೊಲ್ಲೆ  ಯವರು ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಶ್ರೀ ಸುಭಾಷ ಸಂಪಗಾಂವಿ, ತಾಲೂಕು ಉಪ ವಿಭಾಗಧಿಕಾರಿಗಳಾದ ಶ್ರೀ ರವೀಂದ್ರ ಕರಲಿಂಗಣ್ಣವರ, ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ಮಂಜುನಾಥ ಉಳ್ಳಾಗಡ್ಡಿ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
Share
WhatsApp
Follow by Email