
ರಾಯಬಾಗ : ಕೊರೋನಾ ಇಂತಹ ಮಹಾಮಾರಿ ರೋಗಕ್ಕೆ ಇಡಿ ಜಗತ್ತೆ ಲಾಕ್ಡೌನ್ವಾಗಿದೆ ಇದರಿಂದ ರೈತರ ಪರಿಸ್ಥತಿ ತಿವ್ರ ಗಂಭೀರವಾಗಿದೆ ರೈತರು ತಮ್ಮ ಜಮೀನುಗಳಲ್ಲಿ ಸಾಲಸೋಲಮಾಡಿ ಸಾಕಷ್ಟು ರೈತರು ತೋಟಗಾರಿಕೆ ಬೆಳೆಗಳನ್ನು ಬೆಳೆದಿದ್ದಾರೆ. ಕೊರೋನಾ ವೈರಸ್ ಪರೀಣಾಮದಿಂದ ರೈತರು ಬೆಳೆದ ಬೇಳೆಗಳನ್ನು ಯಾರು ಕೇಳುವವರಿಲ್ಲದೆ ಸಾಕಷ್ಟು ಪ್ರಮಾಣದಲ್ಲಿ ನಾಶವಾಗಿ ಹೋಗುತ್ತಿವೆ.
ರಾಯಬಾಗ ಗ್ರಾಮೀಣ ಭಾಗದ ರೈತ ನಿಂಗಪ್ಪ ರಾಯಪ್ಪ ಪೂಜೇರಿ ರೈತ ತನ್ನ ಎರಡು ಎಕರೆ ಜಮೀನಿನಲ್ಲಿ ಬಾಳೆ ಬೆಳೆ ಬೆಳೆದು ಈಗ ಯಾರು ಕೊಂಡುಕೊಳ್ಳುವವರಿಲ್ಲದೆ ಸಂಕಷ್ಟಕ್ಕಿಡಾಗಿದ್ದಾನೆ. ಕಳೆದ ಒಂದು ವರ್ಷದಿಂದ ಸತತ ಜಮೀನಿನಲ್ಲಿ ಕೆಲಸ ಮಾಡಿ ಕಷ್ಟಪಟ್ಟು ಬೆಳೆದ ಬಾಳೆ ಬೆಳೆಯನ್ನು ಕೇಳುವವರಿಲ್ಲದೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಗಾಗಿದೆ.
ಕಳೆದ ಒಂದು ವರ್ಷದ ಹಿಂದೆ ಬಾಳೆಗಿಡಗಳನ್ನು ತಮ್ಮ ಹೊಲದಲ್ಲಿ ನೆಟ್ಟು ಅವುಗಳನ್ನು ಬೆಳೆಯಿಸಿ ಸತತ ಮೂರುನಾಲ್ಕು ಜನ ತಮ್ಮ ಕುಟುಂಬದವರು ನಿರಂತರ ಹೊಲದಲ್ಲಿ ಕೆಲಸ ಮಾಡಿ ಈ ಬಾಳೆ ಬೆಳೆಯನ್ನು ಬೆಳೆದಿದ್ದಾರೆ ಆದರೆ ಕೊರೋನಾ ಎಂಬ ಮಹಾಮಾರಿಯ ರೋಗದಿಂದ ಈ ರೈತ ತುಂಬಲಾರದ ನಷ್ಟು ಅನುಭವಿಸುತ್ತಿದ್ದಾರೆ.
ಈ ಬಾಳೆ ಬೆಳೆಯಿಂದ ಎಕರೆಗೆ 6 ಲಕ್ಷ ರೂಪಾಯಿ ಆದಾಯ ಬರಬೇಕಿತ್ತು ಆದರೆ ಕೊರೋನಾ ವೈರಸ್ ಪರಿಣಾಮ ಲಾಕ್ಡೌನ್ ಹಿನ್ನಲೆಯಲ್ಲಿ ಇಂತಹ ಬೆಳೆಗಳನ್ನು ಸಾಗಿಸುವವರು ಇಲ್ಲದಂತಾಗಿ ಬೇಡಿಕೆ ಅತೀ ಕಡಿಮೆಯಾಗಿ ಸುಮಾರು 12 ಲಕ್ಷ ರೂಪಾಯಿವರೆಗೆ ನಷ್ಟವಾಗಿದೆ ಎಂದು ರೈತ ನಿಂಗಪ್ಪ ಪೂಜೇರಿ ತಮ್ಮ ನೋವು ತೋಡಿಕೊಂಡರು.
ಇAತಹ ಎಷ್ಟೋ ರೈತರು ತಾವು ಬೆಳೆದ ಬೆಳೆಗಳು ನಾಶವಾಗಿ ತುಂಬಾನೆ ಸಂಕಷ್ಟ ಅನುಭವಿಸುತ್ತಿದ್ದಾರೆ ಸಂಬAಧಿಸಿದ ಅಧಿಕಾರಿಗಳು ಇಂತಹ ರೈತರ ಕಡೆಗೆ ಗಮನ ಹರಿಸಿ ಅವರ ಬೆಳೆದ ಬೆಳೆಗಳನ್ನು ಸಮೀಕ್ಷೆ ಮಾಡಿ ಹಾಗೂ ಬೇಡಿಕೆ ಇದ್ದಲ್ಲಿ ಸಾಗಿಸಲು ಅನುಕೂಲ ಮಾಡಿಕೊಡಬೇಕು ಹಾಗೂ ಸರಕಾರ ನಷ್ಟ ಅನುಭವಿಸುತ್ತಿರುವ ರೈತರಿಗೆ ಸೂಕ್ತ ಪರಿಹಾರ ನೀಡಬೇಕೆಂದು ರೈತ ನಿಂಗಪ್ಪ ಪೂಜೇರಿ ಆಗ್ರಹಿಸಿದ್ದಾರೆ