ವೈದ್ಯಕೀಯ ರಂಗದಲ್ಲಿ ಅಲ್ಪಸಂಖ್ಯಾತ ಬಾಲಕಿಯ ಸಾಧನೆ, ಗಣ್ಯರ ಮೆಚ್ಚುಗೆಮಹಾಲಿಂಗಪುರ : ಸ್ಥಳೀಯ ಇಸ್ಮತ್ ಎಚ್. ಪಟೇಲ್ ಇವರ ಪುತ್ರಿ ಡಾಕ್ಟರ್ ಅಮರೀನ್ ಪ್ರಸಕ್ತ ಸಾಲಿನ ವೈದ್ಯಕೀಯ (ಬಿಎಚ್ಎಂಎಸ್) ಶಿಕ್ಷಣದಲ್ಲಿ ದ್ವಿತೀಯ ಸ್ಥಾನ ಪಡೆದು ಉತ್ತೀರ್ಣರಾಗಿ ನಗರಕ್ಕೆ ಕೀರ್ತಿ ತಂದಿದ್ದಾರೆ. .
ಡಾ. ಅಮರೀನ್ ಅವರು ಎಸ್.ಬಿ. ಶಿರಕೋಳ ಹೋಮಿಯೋಪತಿಕ್ ಮೆಡಿಕಲ್ ಕಾಲೇಜು, ಸಂಕೇಶ್ವರದಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ. ಬಾಲ್ಯದಲ್ಲಿಯೇ ಎಲ್ ಕೆ ಜಿ ವಿದ್ಯಾರ್ಥಿಯಾಗಿದ್ದಾಗಲೇ ವೈದ್ಯಳಾಗುವ ಕನಸು ಕಂಡು ಸ್ಥಳೀಯ ಪ್ರಗತಿ ಶಾಲಾ ವಾರ್ಷಿಕೋತ್ಸವದಲ್ಲಿ ವೈದ್ಯರ ಛದ್ಮವೇಷ ಹಾಕಿ ಭಾಗವಹಿಸಿದ್ದನ್ನು ಸ್ಮರಿಸುತ್ತಾಳೆ. ಈಗ ಆ ಕನಸು ನನಸಾಗಿದ್ದಕ್ಕೆ ಪಟೇಲ್ ದಂಪತಿಗಳು ಸಂತೋಷ ಪಡಿಸಿದ್ದಾರೆ.
ಡಾ.ಅಮರೀನ್ ಒಂದನೇ ತರಗತಿಯಿಂದಲೇ ಪೂರ್ಣ ಶಿಕ್ಷಣ ಉರ್ದು ಮಾಧ್ಯಮದಲ್ಲಿ ಓದಿ ಇಂಥ ಅಪೂರ್ವ ಸಾಧನೆ ಮಾಡಿದ ಪ್ರಯುಕ್ತ ನಗರದ ಮಾಜಿ ಪುರಸಭಾ ಅಧ್ಯಕ್ಷ ಬಸನಗೌಡ ಪಾಟೀಲ್ , ಡಾ. ಯು. ಎಸ್. ವನಹಳ್ಳಿ , ಪುರಸಭಾ ಸದಸ್ಯ ಸದಸ್ಯರಾದ ಶೇಖರ್ ಅಂಗಡಿ, ಯಲ್ಲನಗೌಡ ಪಾಟೀಲ, ಜಾವೇದ್ ಭಾಗವಾನ, ಸಜನಸಾಬ ಪೆಂಡಾರಿ, ಪತ್ರಕರ್ತರಾದ ಎಂ. ಐ. ಡಾಂಗೆ, ಮೀರಾ ತಟಗಾರ, ಲಕ್ಷ್ಮಣ ಕಿಶೋರಿ, ನಾರನಗೌಡ ಉತ್ತಂಗಿ ಇತರರು ಅಭಿನಂದಿಸಿದ್ದಾರೆ
Share
WhatsApp
Follow by Email