ಬ್ರೇಕಿಂಗ್ ನ್ಯೂಸ್ ಶ್ರೀನಿಧಿ ಪರಿವಾರದಿಂದ ಪ್ರಾಣಿಗಳಿಗೆ ನೀರಿನ ಘಟಕ ನಿರ್ಮಾಣ 16/04/202016/04/20201 min read admin ರಬಕವಿ-ಬನಹಟ್ಟಿ: ಕೋರೊನಾ ಸೀಲ್‌ಡೌನ್‌ನಿಂದ ಮನುಷ್ಯರಿಗೆ ತೊಂದರೆಯುoಟಾಗುತ್ತಿದೆ. ಅಲ್ಲದೆ ಮೂಕ ಪ್ರಾಣಿಗಳ ಕಡೆ ಗಮನ ಹರಿಸಲಾರದೆ ಬಳಲುತ್ತಿವೆ. ಸದಾ ಯಾರಾದoರೂ ತಿನ್ನುವ ಪದಾರ್ಥ ನೀಡುತ್ತಿದ್ದಾರೆ. ತೀವ್ರ ಬಿಸಿಲಿರುವುದರಿಂದ ಆಕಳು, ಕರುಗಳು ನೀರಿನ ದಾಹವನ್ನು ತೀರಿಸಿಕೊಳ್ಳಲು ಪರಿತಪಿಸುತ್ತಿವೆ. ರಬಕವಿಯ ಶ್ರೀನಿಧಿ ಪರಿವಾರದ ವತಿಯಿಂದ ಮೂಕ ಪ್ರಾಣಿಗಳ ನೀರಿನ ದಾಹವನ್ನು ತಣಿಸಲು ರಬಕವಿಯಲ್ಲಿ ನೀರಿನ ಘಟಕಗಳನ್ನು ನಿರ್ಮಾಣ ಮಾಡಿದೆ.ಸಾಮಾಜಿಕ ಸೇವೆಯಲ್ಲಿ ರಬಕವಿಯ ಶ್ರೀನಿಧಿ ಪರಿವಾರ ಸದಾ ಮುಂಚೂಣಿಯಲ್ಲಿದೆ. ಬೇಸಿಗೆ ಹಾಗೂ ಕೋರೊನಾ ಸೀಲ್‌ಡೌನ್‌ದಲ್ಲಿ ರಬಕವಿಯ ಶ್ರೀನಿಧಿ ಬ್ಯಾಂಕಿನ ಚೇರಮನ್ನ ಮಲ್ಲಿಕಾರ್ಜುನ ಬ. ನಾಶಿ ಸೇರಿದಂತೆ ಆಡಳಿತ ಮಂಡಳಿಯ ಸದಸ್ಯರು ಸಹಕಾರದಿಂದ ಮೂಕ ಪ್ರಾಣಿಗಳು ನೀರಿಗಾಗಿ ಪರಿತಪಿಸಬಾರದೆಂದು ರಬಕವಿ ನಗರದ ವಿದ್ಯಾನಗರದ ಆಟದ ಮೈದಾನದಲ್ಲಿ ಕೊಕ್ಕಳಕಿ ಇವರ ಮನೆ ಹತ್ತಿರ, ಜಿಗಜಿನ್ನಿ ಕಾಂಪ್ಲೆಕ್ಸ ಹತ್ತಿರ, ದಾನಮ್ಮದೇವಿ ದೇವಸ್ಥಾನದ ಎದುರಿಗೆ ಶ್ರೀನಿಧಿ ಟಾವರ ಹತ್ತಿರ, ರಬಕವಿ ಅರ್ಬನ ಬ್ಯಾಂಕ ಕಟ್ಟಡದ ಹತ್ತಿರ ಒಟ್ಟು ನಾಲ್ಕು ನೀರಿನ ಘಟಕಗಳನ್ನು ನಿರ್ಮಾಣ ಮಾಡಿದೆ Share