ಸತ್ಯ ಸಂಗಮ ಪ್ರತಿಷ್ಠಾನದಿಂದ 25 ಸಾವಿರ ಬಡ ಕುಟುಂಬಗಳಿಗೆ ಆಹಾರ ಧಾನ್ಯ ವಿತರಣೆ ಮಾಡಿದ ಡಿಸಿಎಂ ಲಕ್ಷ್ಮಣ ಸವದಿಅಥಣಿ : ಕೋರೋನಾ ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ಅಥಣಿ ಪಟ್ಟಣದ ಬಡ ಜನರ ಸಹಾಯಕ್ಕೆ ಮುಂದಾದ ಡಿಸಿಎಂ ಲಕ್ಷ್ಮಣ ಸವದಿ ಮುಂದಾಗಿರುವದು ಶ್ಲಾಘನಿಯ ಸಂಗತಿಯಾಗಿದೆ. ಹೌದು ಅಥಣಿ ಪಟ್ಟಣ ಸತ್ಯ ಸಂಗಮ ಗ್ರಾಮ ವಿಕಾಸ್ ಪ್ರತಿಷ್ಠಾನ ಅಥಣಿ ಸಂಘಟನೆಯ ವತಿಯಿಂದ ಡಿಸಿಎಂ ಲಕ್ಷ್ಮಣ ಸವದಿ ಅವರು ಅಥಣಿ ಪಟ್ಟಣದ 25 ಸಾವಿರ ಬಡ ಕುಟುಂಬಗಳಿಗೆ ತಲ 5 ಕೆಜಿ ಜೋಳ, ಗೋಧಿ ಧಾನ್ಯಗಳ ಪ್ಯಾಕೇಟ ವಿತರಣೆ ಮಾಡಿದರು.
ಸತ್ಯ ಸಂಗಮ ಗ್ರಾಮ ವಿಕಾಸ ಪ್ರತಿಷ್ಠಾನದ ಅಥಣಿಯ ಮೂಲಕ ಡಿಸಿಎಂ ಲಕ್ಷಮ್ಣ ಸವದಿ ಅವರು ತಮ್ಮ ಕ್ಷೇತ್ರದ ಅಥಣಿ ಪಟ್ಟಣದಲ್ಲಿರುವ ನ್ಯಾಯಬೆಲೆ ಅಂಗಡಿಗಳ ಮುಂದೆ ಬಡ ಜನರಿಗೆ ಪ್ರತಿ ಬಿಪಿಎಲ್ ಕಾರ್ಡ ಹೊಂದಿದವರಿಗೆ 5 ಕೆಜಿ ಜೋಳ, 5 ಕೆಜಿ ಗೋಧಿ ಬ್ಯಾಗ್ ಗಳನ್ನು ಹಂಚುತ್ತಿದ್ದಾರೆ. ಅಲ್ಲದೆ ನಿರ್ಗತಿಕರು, ಬವರು, ಹಾಗೂ ಬಡ ಕೂಲಿ ಕಾರ್ಮಿಕರು ಸಹ ಇದರ ಸದುಪಯೋಗವನ್ನು ಪಡೆದುಕೊಳ್ಳುತ್ತಿದ್ದಾರೆ. ಡಿಸಿಎಂ ಲಕ್ಷö್ಮಣ ಸವದಿ ಅವರ ಸೂಚನೆಯ ಮೇರೆಗೆ ಅವರ ಕುಟುಂಬದವರ ಸಮ್ಮುಖದಲ್ಲಿ ಆಹಾರ ಧಾನ್ಯಗಳನ್ನು ವಿತರಣೆ ಮಾಡುತ್ತಿದ್ದಾರೆ. ಕೊರೊನಾ ವೈರಸ್ ಹರಡುತ್ತಿರುವ ಹಿನ್ನಲೆಯಲ್ಲಿ ದೇಶಾಧ್ಯಾಂತ ಲಾಕ್ ಡೌನ್ ಜಾರಿಯಲ್ಲಿದ್ದು ದುಡಿಯುವ ಕೈಗಳಿಗೆ ಕೆಲಸವಿಲ್ಲದೆ ಹಸಿವಿನಿಂದ ಯಾರು ಸಹ ಮಲಗಬಾರದು ಅನ್ನುವ ಉದ್ದೇಶದಿಂದ ತಮ್ಮ ಅಥಣಿ ಪಟ್ಟಣದಲ್ಲಿರುವ ಬಡ ಜನರಿಗೆ ಆಹಾರ ದಾನ್ಯಗಳನ್ನು ವಿತರಣೆ ಮಾಡುತ್ತಿರುವದಾಗಿ ಚಿದಾನಂದ ಸವದಿ ತಿಳಿಸಿದರು.
ಇನ್ನು ಒಂದು ವಾರಗಳ ಕಾಲ ಇದೆ ರೀತಿ ಅಥಣಿ ಪಟ್ಠಣದಲ್ಲಿರುವ ಎಲ್ಲ ನ್ಯಾಯಬೆಲೆ ಅಂಗಡಿಗಳ ಮೂಲಕ ಬಿಪಿಎಲ್ ಕಾರ್ಡ ಹೊಂದಿದರುವ 25 ಸಾವಿರ ಕುಟುಂಬಗಳಿಗೆ ಆಹಾರ ಧಾನ್ಯಗಳನ್ನು ವಿತರಿಸುವದಾಗಿ ಹೇಳಿದರು.
ಈ ವೇಳೆ ಶಿವಾನಂದ ಸವದಿ, ಸುಮೀತ್ ಸವದಿ, ಸುಶೀಲಕುಮಾರ ಪತ್ತಾರ, ಪಂಚಯ್ಯ ಅಳ್ಳೀಮಟ್ಟಿ, ಬಾಹುಬಲಿ ಕಡೊಲಿ, ಪ್ರದೀಪ ನಂದಗಾAವ, ವಿಕಾಸ ತಾಂಬಟ, ನ್ಯಾಯವಾದಿ ಅಮೋಘ ಕೊಬ್ಬರಿ, ಆಸಿಫ್ ತಾಂಬೋಳಿ, ಸಂಗಮೇಶ್ ಪಲ್ಲಕ್ಕಿ, ಶ್ರೀ ಶೈಲ, ಲೋಣಾರೆ, ಮಹ್ಮದ ಮುಲ್ಲಾ, ಸೇರಿದಂತೆ ಇನ್ನೂ ಹಲವರು ಉಪಸ್ಥಿತರಿದ್ದರು
Share
WhatsApp
Follow by Email