ವರದಿ:- ಯಲ್ಲಪ್ಪ ಮಬನೂರ
ಚಿಕ್ಕೋಡಿ:
ಕರೊನಾ ಹೆಮ್ಮಾರಿಯಿಂದ ರೈತರು ಬೆಳೆದ ಹಣ್ಣಿನ ಬೆಳೆಗಳಿಗೆ ಬೆಲೆ ಹಾಗೂ ಸೂಕ್ತ ಮಾರ್ಕೆಟ್ ವ್ಯವಸ್ಥೆ ಇಲ್ಲದೆ ಪ್ರತಿಯೊಬ್ಬ ರೈತರಿಗೂ ಲಕ್ಷಾಂತರ ರೂ. ನಷ್ಟ ಅನುಭವಿಸಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಚಿಕ್ಕೋಡಿ ಭಾಗದ ರಾಯಬಾಗ ತಾಲೂಕಿನ ನಾಗರಾಳ ಗ್ರಾಮದ ಮಲ್ಲೇಶ ಚೌಗಲಾ ಎಂಬ ರೈತ 10-12 ಲಕ್ಷ ಸಾಲ ಮಾಡಿ ತನ್ನ 6 ಎಕರೆಯಲ್ಲಿ ಜಮೀನಿನಲ್ಲಿ ದ್ರಾಕ್ಷಿ ಬೆಳೆ ಬೆಳೆದಿದ್ದಾರೆ. ಫಲವತ್ತಾಗಿ ದ್ರಾಕ್ಷಿ ಹಣ್ಣು ಬಂದಿದೆ. ಕೊರೊನಾ ಎಪೆಕ್ಟದಿಂದ ಗೋವಾ ಹಾಗೂ ಮಹಾರಾಷ್ಟ್ರ ಹಾಗೂ ವಿವಿದ ಅಂತರ ರಾಜ್ಯಗಳಿಗೆ ಸಾಗಾಟ ಮತ್ತು ಮಾರುಕಟ್ಟೆ ಇಲ್ಲದೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬ ಗಾದೆ ಮಾತಿನಂತಾಗಿದೆ.
ಹಣ್ಣಿನ ಕಟಾವಿನ ಅವಧಿ ಮುಗಿದಿದ್ದರಿಂದ ಹಣ್ಣು ಒಣಗುತ್ತಿದೆ ಮತ್ತು ಕಾಳು ಕಾಳಾಗಿ ನೆಲಕ್ಕೆ ಉದರುತಿದೆ. ಕನಿಷ್ಠ 10-20 ಗೆ ಕೆಜಿ ಎಂತೆ ಕೊಳ್ಳುವವರು ಇಲ್ಲ ಇದರಿಂದ ಬೆಸತ್ತ ರೈತ ದ್ರಾಕ್ಷಿ ಕಟಾವು ಮಾಡಿ ನೆಲಕ್ಕೆ ಎಸೆಯುತಿದ್ದಾನೆ. ಇದರಿಂದ ಸುಮಾರು 25- 30 ಲಕ್ಷ ರೂಪಾಯಿ ನಷ್ಟ ಅನುಭವಿಸಿದ್ದಾನೆ. ಅಲ್ಲದೇ ನಾಗರಾಳ ಗ್ರಾಮದ ದ್ರಾಕ್ಷಿ ಬೆಳೆ ಬೆಳೆದ ಹತ್ತಾರು ರೈತರು ಸಂಕಷ್ಟಕ್ಕೆ ಸಿಲುಕಿ ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸುತಿದ್ದಾರೆ. ರಾಜ್ಯ ಸರ್ಕಾರ ರೈತರು ಖರ್ಚುಮಾಡಿದ ಹಣವನ್ನಾದರು ಪರಿಹಾರವಾಗಿ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಬಾಕ್ಸ್ ನ್ಯೂಸ್ :
ಕಳೆದ ಡಿಸೆಂಬರ್ ತಿಂಗಳಲ್ಲಿ ಅತಿಯಾದ ಮಳೆಯಿಂದ. ಬೇಳೆ ಹಾನಿಯಾಗುತ್ತು ಆದರೆ ಈಗ ಕೊರೋನಾ ಎಂಬ ವೈರಸ್ ನಿಂದ ದೇಶವೆ ಲಾಕ್ ಡೌನ್ ಇರುವುದರಿಂದ ಯಾವ ಮಾರುಕಟ್ಟೆ ಸಹ ಚಾಲನೆಯಲ್ಲಿ ಇಲ್ಲಾ ಮತ್ತು ಚಿಲ್ಲರೆ ವ್ಯಾಪಾರಿಗಳು ಸಹ ಬರುತಿಲ್ಲಾ ೪, ೫ಕೆಜಿ ತೆಗೆದುಕೊಳ್ಳುವ ಲೊಕಲ್ ಗ್ರಾಹಕರು ಬರುತ್ತಿಲ್ಲ . ಕ್ರಷಿಗೆ ಸಂಬಂದ ಪಟ್ಟಂತಹ ಕೆಲವು ಸರ್ಕಾರಿ ಅಧಿಕಾರಿಗಳನ್ನು ಕೇಳಿದರೆ ಹರಕೆ ಉತ್ತರ ನೀಡುತ್ತಿದ್ದಾರೆ ಸುಮಾರು ೧೦ ರಂದ ೧೨ ಲಕ್ಷ ರೂಪಾಯಿ ಸಾಲ ಮಾಡಿ ಬೇಳೆದ ಬೆಳೆಗೆ ಈಗ ತುಂಬಾ ನಷ್ಟ ವಾಗುತ್ತಿದೆ ದುಡಿಯಲು ಬಂದಿರುವ ಕೂಲಿ ಕಾರ್ಮಿಕರಿಗೆ ಸಂಬಳ ನಿಡಲು ಕೊಡಲು ಹಣ ಇಲ್ಲದಂತ ಆಗಿದೆ ಎಂದು ಮಲ್ಲೇಶ ಚೌಗಲಾ ತಿಳಿಸಿದರು.