ಬ್ರೇಕಿಂಗ್ ನ್ಯೂಸ್ ಗಜಕೇಸರಿ ಯುವಕ ಮಂಡಳಿ ವತಿಯಿಂದ ಗ್ರಾಮಸ್ಥರಿಗೆ ಉಚಿತ ಮಾಸ್ಕ ವಿತರಣೆ 18/04/202018/04/20201 min read admin ನಾಗನೂರ ಪಿ.ಕೆ.: ಭಾರತದಲ್ಲಿ ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ ಪ್ರಧಾನ ಮಂತ್ರಿಗಳಾದ ಮೋದಿಜಿಯವರು ಈಗಾಗಲೇ 2ನೇ ಹಂತದ ಲಾಕ್‌ಡೌನ್ ಅನ್ನು ಮೇ 3ರವರೆಗೆ ಮುಂದುವರೆಸುವAತೆ ಘೋಷಿಸಿದ್ದಾರೆ. ಅದೇ ರೀತಿ ಕರ್ನಾಟಕದಲ್ಲಿ ಹಾಟ್‌ಸ್ಪಾಟ್ ಕೇಂದ್ರಗಳಾದ ಬೆಂಗಳೂರು, ಮೈಸೂರು, ಕಲಬುರ್ಗಿ, ಬೆಳಗಾವಿ, ವಿಜಯಪುರ, ಬೀದರ್, ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಿಸಿದ್ದು ಇಲ್ಲಿನ ಜನಜೀವನ ಅಸ್ತವ್ಯಸ್ತವಾಗಿದೆ.ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ನಾಗನೂರ ಪಿ.ಕೆ ಗ್ರಾಮದ ಶ್ರೀ ಗಜಕೇಸರಿ ಯುವಕ ಮಂಡಳಿಯವರು ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಪೋಲಿಸ್ ಸಿಬ್ಬಂದಿ ಸಹಯೋಗದೊಂದಿಗೆ ಗ್ರಾಮದಲ್ಲಿ ಪ್ರತಿ ಮನೆಗಳಿಗೆ ಉಚಿತ ಮಾಸ್ಕ ವಿತರಿಸಿ ಜನರಲ್ಲಿ ಕೊರೊನಾ ಬಗ್ಗೆ ಜಾಗೃತಿ ಮೂಡಿಸಿದರು. ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಯಾದ ಶಿವಬಸು ನಾಯಿಕ ಅವರು ಜನರಿಗೆ ದಯವಿಟ್ಟು ಯಾರೂ ಮನೆ ಬಿಟ್ಟು ಹೊರಗಡೆ ಬರಬೇಡಿ ಹಾಗೂ ಯಾರಿಗಾದರೂ ಯಾವುದೇ ಸಮಯದಲ್ಲಿ ಆರೋಗ್ಯದಲ್ಲಿ ಏರುಪೇರುಂಟಾದರೆ ತಕ್ಷಣ ಆರೋಗ್ಯ ಸಿಬ್ಬಂದಿಯನ್ನು ಭೇಟಿಮಾಡಿ ಹಾಗೂ ಆರೋಗ್ಯ ಇಲಾಖೆ ಮತ್ತು ಪೋಲಿಸ್ ಇಲಾಖೆ ಸಿಬ್ಬಂದಿಗಳಿಗೆ ತಮ್ಮ ಕಾರ್ಯ ನಿರ್ವಹಿಸಲು ಸಹಕಾರ ನೀಡಿ ಮನೆಯಲ್ಲೆ ಇರಿ ಎಂದು ತಿಳಿಸಿದರು.ಆರೋಗ್ಯ ಇಲಾಖೆ ಸಿಬ್ಬಂದಿ ಶಿವಬಸು ನಾಯಿಕ, ಪೋಲಿಸ್ ಸಿಬ್ಬಂದಿ ಆನಂದ ಕೊಳವಿ, ಸಿದ್ದು ಚೌಗಲಾ, ಶ್ರೀ ಗಜಕೇಸರಿ ಯುವಕ ಮಂಡಳಿಯ ಸದಸ್ಯರಾದ ರಾಮಪ್ಪ ಬಿಳ್ಳೂರ, ಪ್ರಕಾಶ ಮೆಂಡಿಗೇರಿ, ಹುಸೇನ ದುಖಾನದಾರ, ಮಹೇಶ ಚೌಗಲಾ, ರವಿ ವಟ್ಟನ್ನವರ, ಸಿದ್ದಾರೂಢ ಸವದಿ, ಮಹೇಶ ಮಠಪತಿ, ಕಿರಣ ಪಾಟೀಲ, ಅರವಿಂದ ಅಂಬಿ, ಪವನ ತಂಬಾಕು, ಶಿವಾನಂದ ಕುಂಬಾರ ಇದ್ದರು Share