ಬ್ರೇಕಿಂಗ್ ನ್ಯೂಸ್ ನಿಪ್ಪಾಣಿಯಲ್ಲಿ ಆನ್‍ಲೈನ್ ಮಾರ್ಕೆಟ್‍ಗೆ ಸಚಿವೆ ಶಶಿಕಲಾ ಜೊಲ್ಲೆ ಚಾಲನೆ 18/04/202018/04/20201 min read admin ಚಿಕ್ಕೋಡಿ:- ನಿಪ್ಪಾಣಿಯಲ್ಲಿ ಆನ್‍ಲೈನ ಮಾರುಕಟ್ಟೆ ಮೂಲಕ ಅತ್ಯವಶ್ಯಕ ಸಾಮಗ್ರಿ ಪಡೆದುಕೊಳ್ಳಲುವ ಸೇವೆಗೆ ಕರೆ : ಸಚಿವೆ ಶಶಿಕಲಾ ಅ. ಜೊಲ್ಲೆನಗರಸಭೆ ನಿಪ್ಪಾಣಿ ವ್ಯಾಪ್ತಿಯಲ್ಲಿ ನಗರಸಭೆ ನಿಪ್ಪಾಣಿ ಹಾಗೂ ಭಾರತೀಯ ವಿಚಾರ ಮಂಚ, ವಿವಿಧ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಆನ್‍ಲೈನ್ ಮಾರುಕಟ್ಟೆ ಮೂಲಕ ಅಗತ್ಯ ಸಾಮಗ್ರಿಗಳನ್ನು ಖರೀದಿಸಿ ಮನೆ ಬಾಗಿಲಿಗೆ ಉಚಿತ ಸೇವಾ ಕಾರ್ಯಕ್ರಮನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರಾದ ಶಶಿಕಲಾ ಅಣ್ಣಾಸಾಹೇಬ ಜೊಲ್ಲೆ ನೇರವೆಸಿದರುಉದ್ಘಾಟನೆ ಮಾಡಿ ಮಾತನಾಡುತ್ತಾ ಕೋವಿಡ್ -19 ರೋಗವನ್ನು ತಡೆಗಟ್ಟಲು ಏಕೈಕ ಮಾರ್ಗೊಪಾಯವಾದ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಅತ್ಯವಶ್ಯಕತೆವಾಗಿದೆ. ಈಗಾಗಲೇ ಬೆಳಗಾವಿ ಜಿಲ್ಲೆ ರೆಡ್ ಜೂನ್ ಅಂತಾ ಗುರತಿಸಲಾಗಿದ್ದು ಈ ಕುರಿತಂತೆ ರೋಗ ಹರಡುವಿಕೆಯನ್ನು ತಡೆಗಟ್ಟಲು ಅನುಸರಿಸಬೇಕಾದ ಎಲ್ಲಾ ಮಾರ್ಗೋಪಾಯಗಳನ್ನು ಕಟ್ಟೆಚ್ಚರದಿಂದ ಪಾಲಿಸಬೇಕಾಗಿದೆ. ಹೀಗಾಗಿ ಸಾವಿರಾರು ಜನರು ಅಂಗಡಿಗಳಿಗೆ ಬಂದು ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಸಾಮಗ್ರಿ ಖರೀದಿಸುವುದನ್ನು ದಿನ ಪ್ರತಿ ನಾವು ನೋಡುತ್ತಿದ್ದೇವೆ. ಅಲ್ಲದೇ ಸುದ್ದಿ ಮಾದ್ಯಮಗಳು ಸಹ ಈ ಸುದ್ದಿಗಳನ್ನು ಬಿತ್ತರಿಸುತ್ತ್ತಿವೆ. ಅಧಿಕಾರಿಗಳ ಕಾರ್ಯಧಕ್ಷತೆಯಿಂದ ಹಾಗೂ ಸಾರ್ವಜನಿಕ ಸಹಕಾರದಿಂದ ಈ ವರೆಗೂ ಕರೋನಾ ರೋಗದ ಹರಡುವಿಕೆ ನಿಪ್ಪಾಣಿ ನಗರದಲ್ಲಿ ಕಂಡು ಬಂದಿರುವುದಿಲ್ಲಾ ಇಂತಹ ಪರಿಸ್ಥಿಯಲ್ಲಿ ಆನ್‍ಲೈನ ಮಾರುಕಟ್ಟೆ ಮೂಲಕ ಸ್ವಯಂ ಸೇವಕರ ಸಹಾಯದಿಂದ ಅಂಗಡಿಕಾರರಿಂದ ನೇರವಾಗಿ ಗ್ರಾಹಕರ ಮನೆಗೆ ತಲುಪುವದರಿಂದ ಅಷ್ಟು ಗ್ರಾಹಕರು ನಗರದ ಮಧ್ಯ ವಿಭಾಗದ ಅಂಗಡಿಗಳಿಗೆ ಬಂದು ರೋಗದ ಹರಡುವಿಕೆಯನ್ನು ತಡೆಯಲು ಈ ತಂತ್ರಾಂಶ ಮಹತ್ವದಾಗಿದೆ. ಎಂದು ತಿಳಿಸಿದರು.ಪ್ರತಿಕ್ರಿಯೆ:- ಶಶಿಕಲಾ ಜೊಲ್ಲೆ ಸಚಿವೆಆನ್ಲೈನ ತಂತ್ರಾಂಶ ಮಾಹಿತಿ ನೀಡುತ್ತಾ ಕುನ್ನೂರು ಗ್ರಾಮದ ಬಾಬಾಸಾಹೇಬ ಸಂಜಯ ರಾಮಣಕಟ್ಟಿ ಇವರು ಗೂಗಲ್ ಪ್ಲೇಸ್ಟೋರ್‍ದಿಂದ ಆಫ್ ಈಚಿಡಿmshiಠಿ ಡೌನಲೋಡ್ ಮಾಡಿಕೊಂಡ ನಂತರ ತಮಗೆ ಬೇಕಾಗುವ ಅತ್ಯಾವಶ್ಯಕ ವಸ್ತುಗಳನ್ನು ಸ್ಟೋರಗಳ ಮುಖಾಂತರ ಆಯ್ಕೆ ಮಾಡಿ, ಸಾಮಗ್ರಿಗಳಿಗೆ ನಿಗದಿಪಡಿಸಿದ ದರವನ್ನು ಪರಿಶೀಲಿಸಿ ತಮಗೆ ಬೇಕಾದ ಅಂಗಡಿಗಳಿಂದ ಸಾಮಗ್ರಿ ಆದೇಶವನ್ನು ನೀಡಿ ತಮ್ಮ ವಿಳಾಸದೊಂದಿಗೆ ಸೇವೆಯನ್ನು ಪಡೆದು ಹಣ ಸಂದಾಯ ಮಾಡಬಹುದಾಗಿದೆ. ಎಂದು ವಿವರಿಸಿದರು. ಪ್ರಸ್ತಾವಿಕವಾಗಿ ಮಾತನಾಡುತ್ತಾ ಪೌರಾಯುಕ್ತರು ಶ್ರೀ. ಮಹಾವೀರ ಬೋರಣ್ಣವರ ಸಾರ್ವಜನಿಕರಿಂದ ಇವರಗೆ ರೋಗ ಹರಡದಂತೆ ಉತ್ತಮ ಪ್ರತ್ತಿಕ್ರಿಯೇ ಇದ್ದು ಕೆಲವೂ ಜನರು ಅನಾವಶ್ಯಕವಾಗಿ ದ್ವಿ ಚಕ್ರ ವಾಹನ ಹಾಗೂ ಇತರೆ ವಾಹನಗಳಿಂದ ನಗರ ಮಧ್ಯ ಭಾಗದಲ್ಲಿ ಬಂದು ಹೋಗುತ್ತಿದ್ದು ಅಂತಹ ವಾಹನ ಸವಾರರು ನಗರದ ಎಲ್ಲರ ಆರೋಗ್ಯ ದೃಷ್ಟಿಕೊನದಿಂದ ಅತ್ಯಾವಶ್ಯಕವಾದಲ್ಲಿ ಮಾತ್ರ ಹೊರಗೆ ಬರಬೇಕು ಏಕೆಂದರೆ ಸಮೀಪದ ತಾಲ್ಲೂಕೂಗಳಲ್ಲಿ ಈಗಾಗಲೇ ಕರೋನಾ ರೋಗವು ತನ್ನ ಖಾತೆಯನ್ನು ತೆರೆದುಕೊಂಡಿದೆ. ದಯವಿಟ್ಟು ಸಾರ್ವಜನಿಕರು ಯಾವುದೇ ಕಾರಣಕ್ಕೂ ಒಂದು ರೋಗ ಪ್ರಕರಣ ಬಾರದಂತೆ ನೋಡಿಕೊಳ್ಳುವುದು ನಮ್ಮಲ್ಲರ ಕರ್ತವ್ಯವಾಗಿದೆ ಎಂದು ತಿಳಿದರು.ಪ್ರತಿಕ್ರಿಯೆ:- ಬಾಬಾಸಾಹೇಬ ಸಂಜಯ ರಾಮಣಕಟ್ಟಿಭಾರತೀಯ ವಿಚಾರ ಮಂಚನ ಸದಸ್ಯ ಶೈಲೆಂದ್ರ ಪಾರಿಕ ಇವರು ಮಾತನಾಡುತ್ತಾ ನಗರದಲ್ಲಿ ಉತ್ತಮ ಪದ್ದತಿಯನ್ನು ಅಳವಡಿಸಲು ನಗರಸಭೆ ನಿಪ್ಪಾಣಿ ಅತ್ಯತ್ತುವಾಗಿ ಸ್ಪಂದಿಸುತ್ತಿದ್ದು ಇದರಿಂದ ರೋಗ ತಡೆಗಟ್ಟಲು ತುಂಬಾ ಅನುಕೂಲಕರವಾಗಿದೆ ಈಗಾಗಲೇ ಸ್ಯಾನೇಟರಿ ಕ್ಯಾಬೇನ್ ಆನ್‍ಲೈನ ಗ್ರಾಹಕ ಸೇವಾ ಕೇಂದ್ರ ಹಾಗೂ ಮುಂಬರುವ ದಿನಗಳಲ್ಲಿ ಸೇನ್ಸರ್ ಮೂಲಕ ಕೈ ತೊಳೆದುಕೊಳ್ಳಲು ವಾಶ ಬಶಿನ್ “ರೋಬೋಟ್ ಮೂಲಕ ಔಷಧೋಪಚಾರ ದ್ವೀ ಚಕ್ರ ವಾಹನದ ಮೂಲಕ ಕ್ರಿಮಿನಾಶಕ ಸಿಂಪಡನೆ ಇತ್ಯಾದಿ ಕಾರ್ಯಕ್ರಮಗಳ ಅನುಷ್ಠಾನ ಮಾಡಬೇಕಾಗಿರುತ್ತದೆ. ಅದೇ ರೀತಿ ಇನ್ನೂ ಮುಂದೆ ಸಹ ಇನ್ನೂ ಹೆಚ್ಚಿನ ಸಹಕಾರವನ್ನು ಅಪೆಕ್ಷಿಸುತ್ತೇನೆ ಅಂತಾ ತಿಳಿಸಿದರು.ಕಾರ್ಯಕ್ರಮದಲ್ಲಿ ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ನಗರಸಭೆಯ ಪೌರಾಯುಕ್ತ ಮಹಾವಿರ ಬೊರಣ್ಣವರ,ತಹಶಿಲ್ದಾರ ಪ್ರಕಾಶ ಗಾಯಕವಾಡ, ಚಂದ್ರಕಾಂತ ಕೊಟಿವಾಲೆ,ಸುರೇಶ ಶೆಟ್ಟಿ, ರಾಜು ಗುಂದೆಶಾ,ಪ್ರವೀಣ ಶಹಾ,ದೀಲಿಪ ಚೌಹಾನ,ಮುಂತಾದವರು ಹಾಜರಿದ್ದರು Share