ಬೆಳಗಾವಿ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ನಿಂಬರಗಿಯವರ ಮಾನವೀಯ ಕಾರ್ಯ

ಬೈಲಹೊಂಗಲ: ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ವಡೂರ ಗ್ರಾಮದ ಕುಟುಂಬದ ವೃದ್ದ ದಂಪತಿಗಳಿಗೆ ಜಿಲ್ಲಾ ಸಾಹಯಹಸ್ತ ನೀಡುವಂತೆ ಕ್ರಮ ವಹಿಸಿದ ಬೆಳಗಾವಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಅವರ ಮಾನವೀಯತೆಯ ಕ್ರಮ ನಾಗರಿಕ ಸಮಾಜದಲ್ಲಿ ಪ್ರಶಂಸನೀಯವಾಗಿದೆ.
ಘಟನೆಯ ಹಿನ್ನೆಲೆ:
ವಡೂರ ಗ್ರಾಮದ ಕುಟುಂಬ ಒಂದು 7ವರ್ಷಗಳ ಹಿಂದೆ ಕೆಲಸ ಆರಿಸುತ್ತಾ ಬೈಲಹೊಂಗಲ ತಾಲೂಕಿನ ಬೆಳವಡಿ ಗ್ರಾಮದಲ್ಲಿ ಬೇಕರಿ ನಡೆಸುತ್ತಿದ್ದ ಆ ಕುಟುಂಬದ ವೃದ್ಧ ಪಾಲಕರು ಹಾಸನ ಜಿಲ್ಲೆಯ ಸಕಲೇಶಪೂರ ತಾಲೂಕಿನ ವಡೂರ ಗ್ರಾಮದಲ್ಲಿ ಸಿದ್ದೆಗೌಡ ವಿ.ಎಸ್. (80)
ಹಾಗೂ ಪತ್ನಿ ಸೋಮಮ್ಮ (75) ಇಬ್ಬರೆ ವಾಸಿಸುತ್ತಿದ್ದಾರೆ. ಅವರ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರನ್ನು ನೋಡಿಕೊಳ್ಳಲು ಯಾರು ಇಲ್ಲದ್ದರಿಂದ ಅವರು ತಮ್ಮ ತೊಂದರೆಯನ್ನು ಬೆಳವಡಿಯಲ್ಲಿದ್ದ ತಮ್ಮ ಮಗಳ ಮುಂದೆ ದುಃಖದಿಂದ ವ್ಯಕ್ತಪಡಿಸಿದ್ದಾರೆ ಆದರೆ ಕರೊನಾ ಮಹಾಮಾರಿಯಿಂದ ದೇಶವೆ ಲಾಕ ಡೌನ ಆದ್ದರಿಂದ ಹೋಗಲು ಆಗದೆ ದುಃಖನ್ನು ತಡೆಯಲಾಗದೆ ಎಪ್ರಿಲ್‌14ರವರೆಗೆ ನಿಭಾಯಿಸಿದ್ದಾರೆ. ಮತ್ತೆ 2 ನೇ ಹಂತದ ಲಾಕ್ ಡೌನ ಪ್ರಾರಂಭವಾದಾಗ ವಡೂರದಲ್ಲಿದ್ದ ವೃದ್ದ ತಂದೆ ತಾಯಿಗಳು
ಅಸ್ಪತ್ರೆಗೆ ತೆರಳಿ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದ ಇನ್ನು ಹೆಚ್ಚಿನ ವೈಧ್ಯಕೀಯ ಚಿಕಿತ್ಸೆಗೆ ಒಳಪಡಬೇಕಾಗಿದ್ದು ನಮ್ಮನ್ನು ನೋಡಿಕೊಳ್ಳಲು ಯಾರು ಇಲ್ಲದ್ದಕ್ಕೆ ತೀವ್ರ ಸಮಸ್ಯೆಯಾಗಿದೆ ಎಂದು ಮಗಳು ವಾಣಿ ಎಚ್.ಬಿ ಹಾಗೂ ಅವಳ ಗಂಡ ರವಿ
ಮುಂದೆ ಸಮಸ್ಯೆಯ ಕಣ್ಣಿರು ತೊಡಿಕೊಂಡಿದ್ದಾರೆ ಅವರಿಗೆ ಏನು ತೊಚದೆ ಚಿಂತೆಯಲ್ಲಿದ್ದಾಗ ಬೆಳವಡಿ ಗ್ರಾಮದ ಮಂಜುಗೌಡ ಭರಮಗೌಡರ ವಿಷಯವನ್ನು ನ್ಯಾಯವಾದಿ ಎಫ್.ಎಸ್.ಸಿದ್ದನಗೌಡರ ಮತ್ತು ರೈತ ಮುಖಂಡ ಮಹಾಂತೇಶ ಕಮತ ಅವರ ಗಮನಕ್ಕೆ ತಂದಾಗ ತಕ್ಷಣ ಕಾರ್ಯಪ್ರರ್ವತ್ತರಾಗಿ ದೊಡವಾಡ ಠಾಣೆಯಲ್ಲಿ ಬೆಳಗಾವಿಗೆ ತೆರಳು ಪಾಸ್ ವ್ಯವಸ್ಥೆ ಮಾಡಿಕೊಂಡು ಗುರುವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರನ್ನು ಸಂಪರ್ಕಿಸಿದಾಗ ಖುದ್ದು ಅವರೆ ವಿಷಯ ತಿಳಿದುಕೊಂಡು ತಮ್ಮ ಬಿಡುವಿಲ್ಲದ ಕಾರ್ಯದಲ್ಲಿ ಪೊನ್ ಮುಖಾಂತರ ಸ್ಪಂದಿಸಿ
ಬೆಳಗಾವಿ ಜಿಲ್ಲೆಯ ಕರೊನಾ ಪರಿಸ್ಥಿತಿಯಲ್ಲಿ ಯಾರಿಗೂ ಪಾಸ್ ನೀಡುವ ಹಾಗಿಲ್ಲ ಆದ್ದರಿಂದ ನಿವು ಹೋಗಿ ಮಾಡಬಹುದಾದ ಕಾರ್ಯವನ್ನು ನಿವು ವಿಳಾಸ ಪೋನ್ ನಂಬರ ನೀಡಿದರೆ ಹಾಸನ ಜಿಲ್ಲಾ ಆಡಳಿತದಿಂದ ಸಂಪೂರ್ಣ ವ್ಯವಸ್ಥೆ ಮತ್ತು ಅಲ್ಲಿಯ ವಸ್ತು ಸ್ಥಿತಿಯಬಗ್ಗೆ ಸಂಪೂರ್ಣ ಮಾಹಿತಿ ಕಲೆಹಾಕಿ ಆ ವೃದ್ದ ದಂಪತಿಗಳಿಗೆ ಸಾಹಯ ಮಾಡಲಾಗುವದು ಎಂದು ತಿಳಿಸಿ ವಿಳಾಸ ಪಡೆದ ಅರ್ಧಘಂಟೆಯಲ್ಲಿ ಪೋಲಿಸ್ ಇಲಾಖೆ ಆರೋಗ್ಯ ಮತ್ತು ಕಂದಾಯ ಇಲಾಖೆ ಹಾಗೂ ಗ್ರಾಪಂ ಪಿಡಿಓ ಸಮೇತ ಮನೆಗೆ ಬೆಟ್ಟಿ ನೀಡಿ ಅನಾರೋಗ್ಯ ಪೀಡಿತ ವೃದ್ದ ದಂಪತಿಗಳಿಗೆ ಆಸರೆಯಾಗಿ ಮಾನವೀಯತೆ ಮೆರೆದಿದ್ದಾರೆ.
ಪೋಲಿಸ್ ರು ಅಂದರೆ ಮೂಗು ಮುರಿಯುವ ಈ ಸಮಾಜದಲ್ಲಿ ಇಂತಹ ಮಾನವೀಯ ಕಳಕಳಿ ಉಳ್ಳ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಯನ್ನು ಪಡೆದ ಬೆಳಗಾವಿ ಜಿಲ್ಲೆಯ ಜನತೆ ಧನ್ಯ ಎಂದು ಸವದತ್ತಿ ಎಪಿಎಂಸಿ ಸದಸ್ಯ ನ್ಯಾಯವಾದಿ ಎಫ್.ಎಸ್.ಸಿದ್ದನಗೌಡರ ಕೃತಜ್ಞತೆ ಹೇಳಿದರು.
Share
WhatsApp
Follow by Email