ಬ್ರೇಕಿಂಗ್ ನ್ಯೂಸ್ ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ನೇತೃತ್ವದಲ್ಲಿ ಮತಕ್ಷೇತ್ರದ ನಾಗರಿಕರಿಗೆ ಗುಣಮಟ್ಟದ 25 ಸಾವಿರ ಮಾಸ್ಕ ವಿತರಣೆ 18/04/202018/04/2020 admin ಬೈಲಹೊಂಗಲ : ಕೊರೊನಾ ಮುಕ್ತ ಭಾರತ ನಿರ್ಮಾಣ ಮಾಡಲು ಪ್ರತಿಯೊಬ್ಬರ ಸಹಕಾರ ಅವಶ್ಯವಾಗಿದೆ. ತಾಲೂಕಾ ಅಧಿಕಾರಿಗಳ ಆದೇಶಗಳನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕೆಂದು ಮಾಜಿ ಶಾಸಕ, ಕೆಎಲ್‌ಇ ನಿರ್ದೇಶಕ ಡಾ.ವಿಶ್ವನಾಥ ಪಾಟೀಲ ಹೇಳಿದರು.ಮತಕ್ಷೇತ್ರದ ಜನರ ಆರೋಗ್ಯದ ಹಿತದೃಷ್ಟಿಯಿಂದ ಕಿಲ್ಲರ ಕೊರೊನಾ ಸೊಂಕು ತಡೆಗಟ್ಟುವ ನಿಟ್ಟಿನಲ್ಲಿ ಗುಣಮಟ್ಟದ 25 ಸಾವಿರ ಉಚಿತ ಮಾಸ್ಕ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಬಿಜೆಪಿ ಕಾರ್ಯಕರ್ತರು ಅಚ್ಚು ಕಟ್ಟಾಗಿ, ಮುಂಜಾಗ್ರತ ಕ್ರಮಗಳನ್ನು ಅನುಸರಿಸಿ ಪ್ರತಿಯೊಂದು ಮನೆ ಮನೆಗೆ ಮಾಸ್ಕ, ಸ್ಯಾನಿಟೆಸರ್ ವಿತರಿಸಲಾಗುತ್ತಿದೆ. ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಸಪ್ತ ಸೂತ್ರಗಳನ್ನು ತಪ್ಪದೆ ಪಾಲಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ತಾಲೂಕಾ ಅಧಿಕಾರಿಗಳು, ಪೊಲೀಸರು ಸಂಪೂರ್ಣ ಸೀಲ್‌ಡೌನ್ ಮಾಡಿರುವುದು ಒಳ್ಳೆಯ ಕಾರ್ಯವಾಗಿದೆ. ನಾಗರಿಕರು ಸಹಕಾರ ನೀಡಬೇಕು. ಅನಾವಶ್ಯಕವಾಗಿ ಹೊರಗಡೆ ತಿರಗಾಡುವುದನ್ನು ಬಂದ್ ಮಾಡಬೇಕು. ಅಧಿಕಾರಿಗಳು ನೀಡುವ ಆದೇಶಗಳನ್ನು ತಪ್ಪದೆ ಪಾಲಿಸಿ, ಸುರಕ್ಷಿತವಾಗಿ ಮನೆಯಲ್ಲಿರಬೇಕು. ಪ್ರತಿಯೊಬ್ಬರಿಗೂ ಮಾಸ್ಕ, ಸ್ಯಾನಿಟೆಸರ್ ಹಾಗೂ ಬಡ ಕುಟುಂಬಗಳಿಗೆ ಉಚಿತ ರೇಶನ್, ಔಷದಗಳನ್ನು ತಲುಪಿಸಲಾಗುತ್ತದೆ. ಈಗಾಗಲೇ ಬಿಜೆಪಿ ಕಾರ್ಯಕರ್ತರ ತಂಡವನ್ನು ರಚಿಸಿ ಬಡ ಜನರ ಅನಕೂಲಕ್ಕಾಗಿ ಔಷದ ಹಾಗೂ ರೇಷನ್ ವಿತರಿಸುತ್ತಿದ್ದಾರೆ. ಬೆಳಗಾವಿಯ ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರಕಾರದ ನಿಯಮಗಳನ್ನು ಪಾಲಿಸುವುದರ ಮೂಲಕ ಕೊರೊನಾ ಹೊಡೆದೊಡಿಸಬಹುದು. ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಅವರು ಉತ್ತಮ ಕಾರ್ಯ ಮಾಡುತ್ತಿದ್ದು, ಮತಕ್ಷೇತ್ರದ ನಾಗರಿಕರ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಬಿಜೆಪಿ ಮುಖಂಡರಾದ ಮಡಿವಾಳಪ್ಪ ಹೋಟಿ, ಶ್ರೀಶೈಲ ಯಡಳ್ಳಿ, ಮಹೇಶ ಹರಕುಣಿ, ಮಂಡಲ ಅಧ್ಯಕ್ಷ ಮಡಿವಾಳಪ್ಪ ಚಳಕೊಪ್ಪ, ರಾಜು ಚಿಕ್ಕನಗೌಡರ, ಮಹೇಶ ಮೊಹಿತೆ, ಪ್ರಭು ಹೂಗಾರ, ಆನಂದ ಮೂಗಿ, ಕುಮಾರ ಭರಮಣ್ಣವರ, ಮಹಾಂತೇಶ ಗುಂಡ್ಲೂರ, ಪುಂಡಲೀಕ ಪಟ್ಟಿಹಾಳ ಹಾಗೂ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು Share